ರಿಯಾದ್ : ರನ್ ವೇ ಯಿಂದ ಜಾರಿದ ಮುಂಬೈ ಜೆಟ್ ಏರ್ವೇಸ್ ವಿಮಾನ

ಕರಾವಳಿ ಕರ್ನಾಟಕ ವರದಿ

ರಿಯಾದ್ :
ಇಂದು ರಿಯಾದ್ ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಜೆಟ್ ಏರ್ವೇಸ್ ಸಂಸ್ಥೆಯ 9w 523 (B737-80)ವಿಮಾನವು ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುತ್ತಿದ್ದ ಸಂದರ್ಭ ಏಕಾಏಕಿ ಬ್ರೇಕ್ ಅದುಮಿದ ಕಾರಣ ರನ್ ವೇಯಿಂದ ಜಾರಿದ ಕಳವಳಕಾರಿ ಘಟನೆ ವರದಿಯಾಗಿದೆ.

ವಿಮಾನದಲ್ಲಿದ್ದ 142 ಪ್ರಯಾಣಿಕರು ಮತ್ತು ಏಳು ಮಂದಿ ಸಿಬಂದಿಗಳನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದೆ. ಪ್ರಯಾಣಿಕರಿಗೆ ಟರ್ಮಿನಲ್ ಕಟ್ಟಡದಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಪ್ರಯಾಣಿಕರಿಗೂ ಊಟೋಪಚಾರದ ವ್ಯವಸ್ಥೆ ನೀಡಲಾಗಿದೆ ಎಂದು ಜೆಟ್ ಏರ್ವೇಸ್ ಅಧಿಕೃತ ಪ್ರಕಟಣೆ ತಿಳಿಸಿದೆ.

ರನ್ ವೇಯಲ್ಲಿ ಸಮಸ್ಯೆ ಗಮನಿಸಿದ ಪೈಲಟ್ ವಿಮಾನವನ್ನು ತಕ್ಷಣ ನಿಲ್ಲಿಸಲು ಬ್ರೇಕ್ ಅದುಮಿದರು. ಇದು ಅಗತ್ಯವಾಗಿತ್ತು ಎಂದು ಡಿಜಿಸಿಎಗೆ ನೀಡಲಾದ ವರದಿಯಲ್ಲಿ ವಿಮಾನ ಯಾನ ಸಂಸ್ಥೆ ತಿಳಿಸಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ