ಗೌರಿ ಲಂಕೇಶ್ ಪ್ರಕರಣ ತಾರ್ಕಿಕ ಹಂತಕ್ಕೆ: ಹತ್ಯೆಗೆ ಬಳಸಿದ ಪಿಸ್ತೂಲ್ ಗಾಗಿ SIT ಶೋಧ ಚುರುಕು

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಖ್ಯಾತ ಪತ್ರಕರ್ತೆ ಮತ್ತು ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆಯು ತಾರ್ಕಿಕ ಹಂತಕ್ಕೆ ತಲುಪುವ ಸಾಧ್ಯತೆಗಳು ಕಂಡುಬರುತ್ತಿವೆ. ಇನ್ನೊಬ್ಬ ಆರೋಪಿ ಸಿಕ್ಕಿಬಿದ್ದರೆ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಪತ್ತೆಯಾಗುವ ಸಾಧ್ಯತೆ ಇದ್ದು, ವಿಶೇಷ ತನಿಖಾ ದಳ ತನಿಖೆ ತೀವೃಗತಿಯಲ್ಲಿ ಸಾಗುತ್ತಿದೆ.

ಈ ಪ್ರಕರಣದ ಪ್ರಮುಖ ಆರೋಪಿ ಮತ್ತು ಗೌರಿ ಲಂಕೇಶ್ ಮೇಲೆ ಗುಂಡಿಕ್ಕಿದ್ದಾನೆ ಎನ್ನಲಾದ ವಿಜಯಪುರದ ಪರಶುರಾಮ ವಾಘ್ಮೋರೆ, ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಮತ್ತು ಅಮಿತ್ ಬದ್ಧಿ ಬಂಧನದಿಂದ ತನಿಖೆ ಸಂದರ್ಭ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಮತ್ತೊಬ್ಬ ಆರೋಪಿ ಬಳಿ ಇದೆ ಎಂಬ ಮಾಹಿತಿ ಲಭ್ಯವಿದೆ. ಗೌರಿ ಲಂಕೇಶ್ ಅವರನ್ನು ಕೊಲೆಗೈದ ಬಳಿಕ ಮನೆಯೊಂದರಲ್ಲಿ ಪರಶುರಾಮ ವಾಘ್ಮೋರೆ, ಮಿಸ್ಕಿನ್ ಮತ್ತು ಅಮಿತ್ ಬದ್ಧಿ ಜೊತೆ ಸೇರಿದ್ದರು. ಈ ಸಂದರ್ಭ ಮತ್ತೊಬ್ಬ ಆರೋಪಿ ಪಿಸ್ತೂಲ್ ನೊಂದಿಗೆ ತೆರಳಿದ್ದಾನೆ ಎನ್ನಲಾಗಿದೆ.
ಈ ನಾಪತ್ತೆಯಾಗಿರುವ ಆರೋಪಿಯನ್ನು ನಿಹಾಲ್ ಅಲಿಯಾಸ್ ‘ದಾದಾ’ ಎಂದು ಗುರುತಿಸಲಾಗಿದ್ದು, ಈತನ ಬಂಧನ ಸಾಧ್ಯವಾದರೆ ಹತ್ಯೆ ಪ್ರಕರಣದ ತನಿಖೆ ತಾರ್ಕಿಕ ಹಂತ ತಲುಪುವ ಸಾಧ್ಯತೆಗಳಿವೆ.

ಈ ನಡುವೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜು. 30ರಂದು ಬೆಂಗಳೂರಿನಲ್ಲಿ ತನಿಖಾ ತಂಡದ ಮುಂದೆ ಹಾಜರಾಗುವಂತೆ ವಿಶೇಷ ತನಿಖಾ ತಂಡದ ನೋಟಿಸ್ ಜಾರಿಯಾಗಿದ್ದರೂ  ಸುಳ್ಯ ತಾಲೂಕಿನ ಕೊಲ್ಲಮೊಗ್ರ ನಿವಾಸಿಗಳಾದ ಮೋಹನ ಚಾಂತಾಳ, ಯತೀಶ್ ಮೊಗ್ರ, ಯತೀನ್ ಅಂಬೆಕಲ್ಲು, ಕುಮುದಾಕ್ಷ ಜಾಲುಮನೆ ವಿಚಾರಣೆಗೆ ಹಾಜರಾಗಿಲ್ಲ. ನಾಲ್ವರೂ ಸೆಷನ್ಸ್ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಬಂಧಿಸಲ್ಪಟ್ಟ ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ಈ ನಾಲ್ವರಿಗೆ ನೋಟಿಸ್ ಜಾರಿಯಾಗಿತ್ತು.

ಇದನ್ನೂ ಓದಿ:
►►ಗೌರಿ ಲಂಕೇಶ್ ಹತ್ಯೆ: ಕೊಕ್ಕಡದ ವ್ಯಕ್ತಿ ಪೊಲೀಸ್ ವಶ?:
http://bit.ly/2K7ydZq
►►ಪೊಲೀಸ್ ಅಧಿಕಾರಿ ಮನೆಯಲ್ಲೇ ಗೌರಿ ಲಂಕೇಶ್ ಹತ್ಯೆ ಸ್ಕೆಚ್: http://bit.ly/2v0w0uh

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ