ಮಂಡ್ಯ: ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ

ಮಂಡ್ಯ:
ವಿಜಯ ಬ್ಯಾಂಕ್, ಪಿ.ಎಲ್ಡಿ ಬ್ಯಾಂಕ್, ಸಹಕಾರಿ ಸಂಘ, ಕೈ ಸಾಲ ಮತ್ತಿತರ ಸಾಲಗಳಿಂದ ತತ್ತರಿಸಿದ ರೈತರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ಶ್ರೀನಿವಾಸ(45) ಎಂಬವರು ಮನೆಯವರು ಮಲಗಿದ್ದ ಸಂದರ್ಭ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮುವತ್ತು ಗುಂಟೆ ಭೂಮಿ ಹೊಂದಿರುವ ಶ್ರೀನಿವಾಸ ಅವರು ಚಿನ್ನಾಭರಣ ಸಾಲ ಸೇರಿದಂತೆ ಮೂರು ಲಕ್ಷ ರೂ. ತನಕ ಸಾಲ ಹೊಂದಿದ್ದರೆನ್ನಲಾಗಿದೆ.

ಶ್ರೀನಿವಾಸ್ ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ