ಇಸ್ರೇಲ್ ಸೈನಿಕರಿಗೆ ತಪರಾಕಿ ಬಾರಿಸಿದ ಪ್ಯಾಲ್ತೆಸ್ತೀನಿಯನ್ ಹೋರಾಟಗಾರ್ತಿ ಬಿಡುಗಡೆ

ಕರಾವಳಿ ಕರ್ನಾಟಕ ವರದಿ

ಇಸ್ರೇಲ್:
ಇಬ್ಬರು ಇಸ್ರೇಲ್ ಸೈನಿಕರ ಕೆನ್ನೆಗೆ ಹೊಡೆದ ವಿಡೀಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವುದರೊಂದಿಗೆ ಬಂಧನಕ್ಕೆ ಒಳಗಾಗಿದ್ದ ಯುವ ಹೋರಾಟಗಾರ್ತಿ ಅಹದ್ ತಮೀಮಿಯವರನ್ನು ಎಂಟು ತಿಂಗಳ ಸೆರೆವಾಸದಿಂದ ಇದೀಗ ಬಂಧಮುಕ್ತಿಗೊಳಿಸಲಾಗಿದೆ.

ತಮೀಮ್ ಮತ್ತು ಅವರೊಂದಿಗೆ ಬಂಧಿಸಲಾಗಿದ್ದ ಅವರ ತಾಯಿ ನರೀಮನ್ ಇಬ್ಬರೂ ಇಂದು ಆದಿತ್ಯವಾರ ಬೆಳಿಗ್ಗೆ ಬಿಡುಗಡೆಗೊಳಿಸಲಾಗಿದೆ ಎಂದು ಇಸ್ರೇಲ್ ಸೆರೆಮನೆಯ ವಕ್ತಾರ ಅಶ್ರಫ್ ಲಿಬರ್ಟಿ ತಿಳಿಸಿದ್ದಾರೆ.

ಹದಿನೇಳರ ಹರಯದ ಪ್ಯಾಲೇಸ್ತೀನಿಯನ್ ಹೋರಾಟಗಾರ್ತಿ ಅಹದ್ ತಮೀಮಿಯವರು ಇಂದು ಸ್ಥಳೀಯ ಕಾಲಮಾನ ಸಂಜೆ ನಾಲ್ಕು ಗಂಟೆಗೆ ತನ್ನ ಗ್ರಾಮವಾದ ನಬೀ ಸಲೇಹದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತಾಡಲಿದ್ದಾರೆ.

ತಮೀಮಿಯವರು ತನ್ನ ಮನೆಯ ಹೊರಗೆ ಇಬ್ಬರು ಇಸ್ರೇಲಿ ಸೈನಿಕರಿಗೆ ಹೊಡೆದಾಗ ಅವರಿನ್ನೂ ಹದಿನಾರು ವಯಸ್ಸಿನ ಬಾಲಕಿಯಾಗಿದ್ದರು.  ಎರಡು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಅಂದೇ ಸೈನಿಕರು ಅವರನ್ನು ವಶಕ್ಕೆ ಪಡೆದು, ಇದೀಗ ಎಂಟು ತಿಂಗಳ ಕಠಿಣ ಸೆರೆವಾಸ ಪೂರೈಸಿ ಮನೆಗೆ ಮರಳಿದ್ದಾರೆ.

ತಮೀಮಿಯವರ ಬಂಧನದ ಬಗ್ಗೆ ಜಾಗತಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಪ್ಯಾಲೇಸ್ತೀನ್ ಅಮಾಯಕ ಯುವ ಜನತೆಯನ್ನು ಇಸ್ರೇಲ್ ಕ್ರೂರವಾಗಿ ನಡೆಸಿಕೊಳ್ಳುವ ಬಗೆಯನ್ನು ಈ ಘಟನೆ ಜಗಜ್ಜಾಹೀರುಗೊಳಿಸಿತ್ತು. ಅವರಿಗೆ ಸೆರೆವಾಸ ವಿಧಿಸುವ ಮುನ್ನ ದಕ್ಷಿಣ ಆಫ್ರಿಕಾ, ನೆದರ್ ಲ್ಯಾಂಡ್, ಅಮೇರಿಕಾ ಸೇರಿದಂತೆ ಮುವತ್ತೆಂಟು ದೇಶಗಳ ಕಾನೂನು ಪ್ರತಿನಿಧಿಗಳು ಅವರ ಬಿಡುಗಡೆಗೆ ಇಸ್ರೇಲಿ ಸೇನಾ ಮುಖ್ಯಸ್ಥ ನಡಾವ್ ಪಡ್ನ್ ಅವರಿಗೆ ಒತ್ತಾಯಿಸಿದ್ದರು.

ಇಸ್ರೇಲ್ ಅಮಾಯಕ ಪ್ಯಾಲೇಸ್ಟೀನಿಯನ್ ಯುವ ಜನತೆ ಜೊತೆಗೆ ತಾರತಮ್ಯ ಭಾವನೆಯಿಂದ ನಡೆದುಕೊಳ್ಳುತ್ತಿದೆ ಎಂದು ಖಂಡನೆ ವ್ಯಕ್ತವಾಗಿತ್ತು. ಸುಮಾರು ಮುನ್ನೂರು ಮಂದಿ ಅಪ್ರಾಪ್ತ ಪ್ಯಾಲೇಸ್ತೀನಿ ಮಕ್ಕಳನ್ನು ಇಸ್ರೇಲ್ ಇನ್ನೂ ಸೆರೆವಾಸದಲ್ಲಿರಿಸಿದೆ ಎಂಬುದು ಗಮನಾರ್ಹ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ