ಭಗವಾನ್ ಹತ್ಯೆಗೆ ಸಂಚು: 9 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು
: ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್​ ಹತ್ಯೆಗೆ ಸಂಚು ಪ್ರಕರಣ ಸಂಬಂಧಿಸಿದಂತೆ ಒಂಬತ್ತು ಜನ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.

ವಿಜಯಪುರದ ರತ್ನಾಪುರ ಗ್ರಾಮದ ಮನೋಹರ್​ ಯಡವೆ ಸೇರಿ ಒಂಬತ್ತು ಜನ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್​ಸಲ್ಲಿಕೆಯಾಗಿದ್ದು ಹತ್ಯೆಗೆ ಸಂಚು ಆರೋಪದಡಿ ಗೌರಿ ಲಂಕೇಶ್​ ಪ್ರಕರಣದ ಪ್ರಮುಖ ಆರೋಪಿ ಮದ್ದೂರು ಮೂಲದ ಕೆ.ಟಿ.ನವೀನ್​ ಕುಮಾರ್, ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್, ಮಹಾರಾಷ್ಟ್ರದ ಅಮೋಲ್ ಕಾಳೆ, ಅಮೀತ್​ ದೆಗ್ವೇಕರ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪವೂ ಇವರ ಮೇಲಿದೆ.

ಒಟ್ಟು 671 ಪುಟಗಳ ದೋಷಾರೋಪ ಪಟ್ಟಿ ಉಪ್ಪಾರಪೇಟೆ ಪೊಲೀಸರು ಸಲ್ಲಿಸಿದ್ದಾರೆ. ಪೊಲೀಸರು 100 ಕ್ಕು ಹೆಚ್ಚು ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದು, ಎಫ್​ಎಸ್​ಎಲ್​ ತಜ್ಞರ ವರದಿಗಳನ್ನು ಲಗತ್ತಿಸಿದ್ದಾರೆ.

ಶ್ರೀರಂಗಪಟ್ಟಣದ ಅನೀಲ್​ ಕುಮಾರ್, ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಪ್ರಮುಖ ಸಾಕ್ಷಿಯಾಗಿದ್ದು, ಆರೋಪಿ ಕೆ.ಟಿ.ನವೀನ್ ಅಲಿಯಾಸ್​ ಹೊಟ್ಟೆ ಮಂಜನ ಸ್ನೇಹಿತ ಎಂದು ತಿಳಿದು ಬಂದಿದೆ. ಹೊಟ್ಟೆ ಮಂಜ ಹಾಗೂ ಸುಜಿತ್ ನಡುನಿನ ಮೊಬೈಲ್​​ ಸಂಭಾಷಣೆ ಪತ್ತೆಯಾಗಿದ್ದು, ಪ್ರೊ.ಕೆ.ಎಸ್.ಭಗವಾನ್​ ಹತ್ಯೆಗೆ ಸಂಚು ರೂಪಿಸುವ ಕುರಿತು ಒಂದೂವರೆ ಗಂಟೆ ಚರ್ಚಿಸಿದ್ದಾರೆ ಎನ್ನುತ್ತಿವೆ ಪೊಲೀಸ್​ ಮೂಲಗಳು.

ಗೌರಿ ಹತ್ಯೆ ಪ್ರಕರಣದ ತನಿಖೆ ವೇಳೆ ಫೆಬ್ರವರಿ 8 ರಂದು ಶಸ್ತ್ರಾಸ್ತ್ರ ಮಾರಾಟ ಆರೋಪದಡಿ ಹೊಟ್ಟೆಮಂಜ ಬಂಧಿತನಾಗಿದ್ದು, ತನಿಖೆ ವೇಳೆ ಪ್ರೊ.ಕೆ.ಎಸ್.ಭಗವಾನ್​ ಹತ್ಯೆಗೆ ಸಂಚು ರೂಪಿಸಿದ್ದು ಬೆಳಕಿಗೆ ಬಂದಿತ್ತು.

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ