ಶಿರೂರು ಶ್ರೀಗೆ ಮಹಿಳೆಯರ ಸಂಪರ್ಕ ಇತ್ತು. ಮದ್ಯಪಾನ ಮಾಡುತ್ತಿದ್ದರು: ಪೇಜಾವರ ಶ್ರೀ ಆರೋಪ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಶಿರೂರು ಶ್ರೀಗಳಿಗೆ ಮಹಿಳೆಯರ ಜೊತೆ ಸಂಪರ್ಕ ಇತ್ತು, ವಿಪರೀತ ಮದ್ಯಪಾನ ಮಾಡುತ್ತಿದ್ದರು. ಚಟಗಳೆ ಅವರ ಮೃತ್ಯುವಿಗೆ ಕಾರಣ ಇರಬಹುದು ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮಿಜಿ ಹೇಳಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೀರೂರು ಶ್ರೀಗಳಿಗೆ ಮಹಿಳೆಯರ ಜತೆ ಸಂಪರ್ಕ ಇತ್ತು. ಈಗ ಹೊಸ ಮಹಿಳೆಯ ಸಂಪರ್ಕ ಆಗಿತ್ತು ಎಂದು ಆರೋಪಿಸಿದ್ದಾರೆ.

ವಿಪರೀತ ಮದ್ಯಪಾನ‌ ಮಾಡಿದ್ದರಿಂದಲೂ ಸಾವು ಸಂಭವಿಸಿರಬಹುದು. ಅಷ್ಟಮಠಗಳ ಕಡೆಯಿಂದ ವಿಷಪ್ರಾಶನ ಆಗಲು ಸಾಧ್ಯವೇ ಇಲ್ಲ. ಅಷ್ಟ ಮಠಗಳ ಇತರ ಸ್ವಾಮಿಗಳ ಕಡೆಯಿಂದ ಇಂಥ ಕೃತ್ಯ ಆಗಲು ಸಾಧ್ಯವೇ ಇಲ್ಲ. ಮಹಿಳೆಯರ ಜೊತೆ ಸಂಪರ್ಕ ಇದ್ದು ಅವರೊಂದಿಗೆ ಏನಾದರೂ ಜಗಳ ಆಗಿರಬಹುದು ಎಂದು ಪೇಜಾವರ ಹೇಳಿದ್ದಾರೆ.

ಶಿರೂರು ಶ್ರೀ ಮಕ್ಕಳಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದರು. ಅವರು  ಸನ್ಯಾಸ ಧರ್ಮ ಪಾಲಿಸಿಲ್ಲ. ಹೀಗಾಗಿ ಅವರಿಗೆ ಪಟ್ಟದ ದೇವರನ್ನ ಕೊಟ್ಟಿಲ್ಲ ಎಂದಿದ್ದಾರೆ.

ಲಕ್ಷ್ಮೀವರ ತೀರ್ಥರ ಸಾವಿನ ಬಗ್ಗೆ ಸರಿಯಾದ ವಿಚಾರಣೆ ಆಗಲಿ. ಬೇರೆ ಮಠದ ಕಡೆಯಿಂದ ವಿಷಪ್ರಾಶನ‌ ಅಗುವ ಸಾಧ್ಯತೆ ಇಲ್ಲ. ಒಂದು ವೇಳೆ ಇದ್ದರೆ ಮಠದ ಒಳಗಿನವರದೇ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು.

ತಮಗೆ ಮಕ್ಕಳಿದೆ ಎಂದು‌ ಅವರು ಒಪ್ಪಿಕೊಂಡಿದ್ದರು. ಶೀರೂರು ಮಠದ ಪಟ್ಟದ ದೇವರನ್ನು‌ ಕೊಡಬಾರದು ಎಂದು ನಾನು ಹೇಳಿಲ್ಲ. ಕೊಡುವ ನಿರ್ಧಾರಕ್ಕೆ ಇತರ ಮಠಾಧೀಶರ ವಿರೋಧ ಇತ್ತು. ಅಷ್ಟ ಮಠಗಳ ಪೈಕಿ ಕೆಲವು ಮಠಾಧೀಶರಿಗೆ ಮಕ್ಕಳಿದ್ದಾರೆ ಎಂಬ ಲಕ್ಷೀವರ ತೀರ್ಥರ ಹೇಳಿಕೆಯಿಂದ ಇತರ ಮಠಾಧೀಶರಿಗೆ ನೋವಾಗಿತ್ತು. ಇನ್ನು ತಮಗೆ ಮಕ್ಕಳಿದ್ದಾರೆ ಎಂದು ಶೀರೂರು ಶ್ರೀ ಒಪ್ಪಿಕೊಂಡ‌ ಮೇಲೆ ಅವರು ಸನ್ಯಾಸಿ ಎಂದು‌ ಒಪ್ಪಲು ಸಾಧ್ಯವಿರಲಿಲ್ಲ ಎಂದೂ ಪೇಜಾವರ ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ