ಅಬ್ಬನಡ್ಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಆಯ್ಕೆ

ಕರಾವಳಿ ಕರ್ನಾಟಕ ವರದಿ

ಕಾರ್ಕಳ:
ನಂದಳಿಕೆ-ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 12ನೇ ವರ್ಷದ ಸಾಲಿನ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಆಯ್ಕೆಯಾಗಿದ್ದಾರೆ. ಇವರು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಮಾಜಿ ಜೊತೆ ಕಾರ್ಯದರ್ಶಿಯಾಗಿ, ಕಾರ್ಯದರ್ಶಿಯಾಗಿ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕ್ರೀಡಾ ಕಾರ್ಯದರ್ಶಿಯಾಗಿ, ಬೆಳ್ಮಣ್ಣು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಸದಸ್ಯರಾಗಿ, ಇಟ್ಟಮೇರಿ ಲಿಟ್ಲ್ ಫ್ಲವರ್ ಫ್ರೆಂಡ್ಸ್‍ನ ಸದಸ್ಯರಾಗಿ, ಬೆಳ್ಮಣ್ಣು ಜೇಸಿಐನ ಉಪಾಧ್ಯಕ್ಷರಾಗಿ  ಹಲವು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಗೌರವಾಧ್ಯಕ್ಷರು- ಶಶಿಧರ್ ಆರ್. ಶೆಟ್ಟಿ, ಮುಂಬೈ
ಗೌರವ ಸಲಹೆಗಾರರು- ರವಿರಾಜ್ ಶೆಟ್ಟಿ, ಸೂಡ
ನಿಕಟ ಪೂರ್ವಾಧ್ಯಕ್ಷರು-ಬಿರೋಟ್ಟು ದಿನೇಶ್ ಪೂಜಾರಿ
ಉಪಾಧ್ಯಕ್ಷರು- ರಘುವೀರ್ ಶೆಟ್ಟಿ ಬೋಳ
ಕಾರ್ಯದರ್ಶಿ- ಪ್ರಶಾಂತ್ ಪೂಜಾರಿ ಕೆದಿಂಜೆ
ಜತೆ ಕಾರ್ಯದರ್ಶಿ- ಹರಿಣಿ ಸುಂದರ ಪೂಜಾರಿ ಬೋಳ
ಕೋಶಾಧಿಕಾರಿ- ಲಲಿತಾ ರವಿ ಆಚಾರ್ಯ, ನಂದಳಿಕೆ
ಭಜನಾ ಕಾರ್ಯದರ್ಶಿ- ಮಂಜುನಾಥ ಆಚಾರ್ಯ ಬೋಳ
ಸಾಂಸ್ಕಂತಿಕ ಕಾರ್ಯದರ್ಶಿ- ಲೀಲಾ ನಾರಾಯಣ ಪೂಜಾರಿ ಬೋಳ ಮತ್ತು ಆರತಿ ಕುಮಾರಿ ನಂದಳಿಕೆ
ಕ್ರೀಡಾ ಕಾರ್ಯದರ್ಶಿ- ಉದಯ್ ಅಂಚನ್ ಬೋಳ ಆಯ್ಕೆಯಾಗಿದ್ದಾರೆ.

    ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ)ನ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್, ಸಂಚಾಲಕರಾದ ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ಸ್ಥಾಪಾಕಾಧ್ಯಕ್ಷರಾದ ವಿಠಲ ಮೂಲ್ಯ, ನಿಕಟ ಪೂರ್ವಾಧ್ಯಕ್ಷರಾದ  ಕಾಸ್ರಬೈಲು ಸುರೇಶ್ ಪೂಜಾರಿ, ಆನಂದ ಪೂಜಾರಿ, ನಂದಳಿಕೆ ಹಾಗೂ ಸಂಘದ ಸದಸ್ಯರು ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಉಪಸ್ಥಿತಿತರಿದ್ದರು.

12ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪೂರ್ವಭಾವಿ ಸಭೆ

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್‍ಕ್ಲಬ್ (ರಿ) ಮತ್ತು ಅಬ್ಬನಡ್ಕ  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ 13ರಂದು ಗುರುವಾರ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಜರಗಲಿರುವ 12ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದ ಪೂರ್ವಭಾವಿಸಭೆಯು ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ಆಡಳಿತ ಕಚೇರಿಯಲ್ಲಿ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸತೀಶ್ ಪೂಜಾರಿ ಅಬ್ಬನಡ್ಕರವರ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್‍ರವರ  ಘನ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ಜರಗಿತು.

ಸಭೆಯಲ್ಲಿ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರರಾದ ರವಿರಾಜ್ ಶೆಟ್ಟಿಯವರು ಗಣೇಶೋತ್ಸವ ಸಮಾರಂಭವನ್ನು ಅದ್ದೂರಿಯಲ್ಲಿ ನಡೆಸುವ ಬಗ್ಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂಧರ್ಭದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಾಕಾಧ್ಯಕ್ಷ ವಿಠಲ ಮೂಲ್ಯ, ಪೂರ್ವಾಧ್ಯಕ್ಷ ಬೋಳ ರಘುವೀರ್ ಶೆಟ್ಟಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಮಹಿಳಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಸದಸ್ಯರಾದ ಹರೀಶ್ ಪೂಜಾರಿ, ಪದ್ಮಶ್ರೀ ಪೂಜಾರಿ, ಗೀತಾ ಕುಲಾಲ್, ಪುಷ್ಪ ಕುಲಾಲ್, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪ್ರಭಾಕರ್, ಆರತಿ ಕುಮಾರಿ

  ಸಂಘದ ಸ್ಥಾಪಾಕಾಧ್ಯಕ್ಷರಾದ ವಿಠಲ ಮೂಲ್ಯರವರು ಸ್ವಾಗತಿಸಿದರು. ನಿಕಟ ಪೂರ್ವಾಧ್ಯಕ್ಷರಾದ ಕಾಸ್ರಬೈಲು ಸುರೇಶ್ ಪೂಜಾರಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಜೊತೆ ಕಾರ್ಯದರ್ಶಿ ಬೋಳ ಹರಿಣಿ ಪೂಜಾರಿಯವರು ವಂದಿಸಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ