'ನನ್ನ ಮಗ ಹೋಗಿದ್ದು ಪಾಕಿಸ್ತಾನಕಲ್ಲ, ಕರ್ನಾಟಕಕ್ಕೆ: ಆದರೂ ಹೊಡೆದು ಕೊಂದರು

ಕರಾವಳಿ ಕರ್ನಾಟಕ ವರದಿ

ಹೈದರಾಬಾದ್:
ಮಕ್ಕಳ ಕಳ್ಳ ಎಂದು ತಪ್ಪಾಗಿ ಭಾವಿಸಿ ಹೈದರಾಬಾದ್ ಮೂಲದ ಟೆಕ್ಕಿಯನ್ನು ಹೊಡೆದು ಕೊಂದ ಘಟನೆಗೆ ಸಂಬಂಧಿಸಿದಂತೆ ಟೆಕ್ಕಿ  ಮೊಹಮ್ಮದ್ ಆಝಮ್ ತಾಯಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನನ್ನ ಪಾಕಿಸ್ತಾನಕ್ಕೆ ಹೋಗಿರಲಿಲ್ಲ. ಕರ್ನಾಟಕಕ್ಕೆ ಹೋಗಿದ್ದ ಆದರೂ ಆತನನ್ನು ಹೊಡೆದು ಕೊಂದರು ಎಂದು ಕಣ್ಣೀರು ಹಾಕಿದ್ದಾರೆ.

ಹೈದರಾಬಾದ್‌ನಲ್ಲಿ ಮಾತನಾಡಿದ ಮೊಹಮ್ಮದ್ ಆಝಮ್ ನನ್ನ ಮಗ  ಒಂದು ಸಣ್ಣ ಪ್ರಾಣಿಗೂ ಹಾನಿ ಮಾಡಿದನಲ್ಲ. ಹೀಗಿರುವಾಗ ಮಕ್ಕಳನ್ನು ಹೇಗೆ ಕದಿಯಲು ಸಾಧ್ಯ. ಮಕ್ಕಳ ಕಳ್ಳ ಎಂದು ಭಾವಿಸಿ ಆತನನ್ನು ಹೊಡೆದು ಕೊಂದು ಹಾಕಿದ್ದಾರೆ. ಇದು ನಿಜಕ್ಕೂ ಅಕ್ಷ್ಯಮ್ಯ ಎಂದು ಕಣ್ಣೀರು ಹಾಕಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮೊಹಮ್ಮದ್ ಆಝಮ್ ಸಹೋದರಿ, ನನ್ನ ಸಹೋದರ 2 ವರ್ಷದ ಮಗುವಿನ ತಂದೆ. ತನ್ನ ಮೇಲೆ ದಾಳಿ ಮಾಡಲು ಬಂದ ಸ್ಥಳೀಯರಿಗೆ ಐಡಿ ಕಾರ್ಡ್ ತೋರಿಸಿದ್ದಾನೆ. ಹೀಗಿದ್ದೂ ಆತನನ್ನು ನಂಬದೇ ಆತನ ಮೇಲೆ ದಾಳಿ ಮಾಡಿದ್ದಾರೆ. ಆತನ ಮೇಲೆ ನಂಬಿಕೆ ಇಲ್ಲ ಎಂದ ಮೇಲೆ ಪೊಲೀಸರಿಗೆ ಒಪ್ಪಿಸಬಹುದಿತ್ತು. ಹೊಡೆದು ಕೊಲ್ಲುವಂತಹ ಅಪರಾಧ ನನ್ನಸಹೋದರ ಏನು ಮಾಡಿದ್ದ ಎಂದು ಆಕೆ ಪ್ರಶ್ನಿಸಿದ್ದಾರೆ.

ಇದೇ ಶುಕ್ರವಾರ ಬೀದರ್ ಜಿಲ್ಲೆಯ ಮುರ್ಕಿ ಗ್ರಾಮದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಟೆಕ್ಕಿ ಮಹಮದ್ ಅಜಮ್ ಮತ್ತು ಆತನ ಇತರೆ ನಾಲ್ಕು ಸ್ನೇಹಿತರನ್ನು ಸ್ಥಳೀಯ ಸುಮಾರು 2500ಕ್ಕೂ ಹೆಚ್ಚು ಜನ ಮಕ್ಕಳ ಕಳ್ಳರು ಎಂದು ಭಾವಿಸಿ ಹಲ್ಲೆ ಮಾಡಿದ್ದರು. ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಟೆಕ್ಕಿ ಮೊಹಮ್ಮದ್ ಆಝಮ್ ಸಾವನ್ನಪ್ಪಿದ್ದ. ಇನ್ನು ಘಟನೆಯಲ್ಲಿ ಮಧ್ಯ ಪ್ರವೇಶ ಮಾಡಿದ್ದ ಪೊಲೀಸರ ಮೇಲೂ ಸ್ಥಳೀಯರು ಹಲ್ಲೆ ಮಾಡಿದ್ದರು. ಈ ವೇಳೆ ನಾಲ್ಕು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಹಿಂದಿನ ವರದಿ

ಬೀದರ್: ಅಪಘಾತಕ್ಕೆ ಈಡಾದ ಕಾರಿನಲ್ಲಿದ್ದ ಗಾಯಾಳುಗಳನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಅವರ ಮೇಲೆ ಹಲ್ಲೆ ಮಾಡಿದ ಘಟನೆಯಲ್ಲಿ ಓರ್ವ ಅಮಾಯಕ ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಮೊಹಮ್ಮದ್ ಆಝಮ್ ಎಂದು ಗುರುತಿಸಲಾಗಿದ್ದು ಇವರು ಗೂಗಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಹಲ್ಲೆಗೊಳಗಾದವರಲ್ಲಿ ಓರ್ವ ಕತಾರ್ ಪ್ರಜೆಯೂ ಸೇರಿದ್ದಾರೆ.

ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುರ್ಕಿ ಗ್ರಾಮದ ಬಳಿ ಕಾರು ಮತ್ತು ಬೈಕ್ ಢಿಕ್ಕಿಯಾಗಿತ್ತು.  ಈ ವೇಳೆಯಲ್ಲಿ ಪಲ್ಟಿಯಾದ ಕಾರಿನಲ್ಲೆ ಮೂವರನ್ನು ಸುತ್ತುವರಿದ ಸ್ಥಳೀಯರು ಸುಮಾರು ಎರಡು ಗಂಟೆಗಳ ಕಾಲ ಹಲ್ಲೆ  ಮಾಡಿದ್ದಾರೆ.

ಕಾರಿನಲ್ಲಿ ಬಂದ ಈ ಮೂವರು ಹೈದ್ರಾಬಾದ್ ಮೂಲದವರಾಗಿದ್ದು ಹಂದಿಖೆರಾ ಗ್ರಾಮದ ಬಶೀರಸಾಬ್ ಎಂಬಾತರ ಮನೆಗೆ ಊಟಕ್ಕೆ ಬಂದಿದ್ದರು ಎನ್ನಲಾಗಿದ್ದು ಊಟ ಮುಗಿಸಿ ಸಂಜೆ ಮಹಾರಾಷ್ಟ್ರದ ಉದಗಿರ ಕಡೆ ಹೊಗುವಾಗ ಬೊಟಕುಳ ತಾಂಡ ಹತ್ರ ವಿಧ್ಯಾರ್ಥಿನಿಯರಿಗೆ ಚಾಕಲೇಟ್ ಕೊಟ್ಟಿದ್ದಾರೆ. ಇದನ್ನು ರೆಕಾರ್ಡ್ ಮಾಡಿಕೊಂಡ ಕೆಲವರು ಇವರು ಮಕ್ಕಳ ಕಳ್ಳರು ಎಂದು ವಾಟ್ಸ್ಯಾಪ್ ಮತ್ತು ಫೇಸ್‌ಬುಕ್‌ನಲ್ಲಿ ವದಂತಿ ಹಬ್ಬಿಸಿದ್ದಾರೆ. ಇದನ್ನೆ ಅಪಾರ್ಥ ಮಾಡಿಕೊಂಡ ಕೆಲವರು ಮಕ್ಕಳ ಕಳ್ಳರು ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತದಲ್ಲಿ ಸಕಾಲಕ್ಕೆ ಭೇಟಿಕೊಟ್ಟ ಎಸ್.ಪಿ.ದೇವರಾಜ್ ಅವರು ಸಾವಿರಾರು ಜನರ ಸೇರಿದ್ದ ಗುಂಪಿನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿ ಪಲ್ಟಿಯಾದ ಕಾರಿನ ಅಡಿಯಲ್ಲಿ ಸಿಲುಕಿದ್ದ ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಘಟನೆಯಲ್ಲಿ ಕಾರನಲ್ಲಿದ್ದ ಒಬ್ಬ  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಕಲ್ಬುರ್ಗಿ ಐಜಿ ಮುರುಗನ್ ಭೇಟಿ ನೀಡಿದ್ದು ಇದಕ್ಕೆ ಸಂಬಂಧಿಸಿದಂತೆ 30 ಕ್ಕೂ ಹೆಚ್ಚು ಕೀಡಿಗೇಡಿಗಳನ್ನು ಬಂಧಿಸಿರುವ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್‌ ಮತ್ತು ಫೇಸ್ ಬುಕ್ ನಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಸುಳ್ಳು ವದಂತಿ ಹರಡಿಸಿ ಮುರ್ಕಿ ಗ್ರಾಮದಲ್ಲಿನ ಘಟನೆಗೆ ಕಾರಣರಾದ ವಾಟ್ಸ್ಯಾಪ್‌ ಅಡ್ಮಿನ್ ಹಾಗೂ ಫೇಸ್ ಬುಕ್ ಖಾತೆದಾರರನ್ನು ಕೂಡ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ