ಗುಡುಗುಡು ಗುಡುಗಿನಂತ ಸದ್ದಿನ ಬೈಕ್ ಸವಾರರೆ ಎಚ್ಚರ! ಕುಂದಾಪುರ ಪೊಲೀಸರು ಬರುತ್ತಿದ್ದಾರೆ!

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಢಗ್ ಡಗ್ ಡಗ್ ಎಂದು ಗುಡುಗು ಬಂದಂತೆ ಸದ್ದು ಮಾಡಿಕೊಂಡು ಇಡೀ ಊರಿನ ಗಮನ ಸೆಳೆವಂತೆ ಬುಲೆಟ್ ಸವಾರಿ ಮಾಡಿ ಮೋಜು ಮಾಡುತ್ತಿದ್ದೀರಾ? ಕುಂದಾಪುರದಲ್ಲಂತೂ ಇನ್ನು ಮುಂದೆ ಇಂತಹ ಭಾರಿ ಸದ್ದು ಮಾಡುವ ಬುಲೆಟ್‌ಗಳಿಗೆ ಉಳಿಗಾಲವಿಲ್ಲ! ಯಾಕೆ ಕೇಳುವಿರಾ?

ರಸ್ತೆಯಲ್ಲಿ ಸಾಗುವ ಭಾರಿ ಸದ್ದು ಮಾಡುವ ಬುಲೆಟ್‌ ಮತ್ತು ಬೈಕ್‌ಗಳ ವಿರುದ್ಧ ಕುಂದಾಪುರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕರ್ಕಶ ಸದ್ದು ಮಾಡುವ ಬುಲೆಟ್‌ಗಳ ವಿರುದ್ಧ ಸಾರ್ವಜನಿಕರು ರೋಸಿ ಹೋಗಿ ಪೊಲೀಸರಿಗೆ ದೂರು ನೀಡಿದ ಪರಿಣಾಮ ಈಗ ಅಂತಹ ಬೈಕ್‌ಗಳ ವಿರುದ್ಧ ಕಾರ್ಯಾಚರಣೆ ಶುರುವಾಗಿದೆ.

"ಎಷ್ಟು ಖರ್ಚು ಮಾಡಿ ಸೈಲೆನ್ಸರ್ ಪೈಪ್ ಹಾಕ್ತಸಿದೀರಾ? ಇಂತ ಹಕರ್ಕಷ ಸೈಲೆನ್ಸರ್ ಹಾಕೋ ಹಾಗಿಲ್ಲ. ಸದ್ಯಕ್ಕೆ ನಿಮಗೆ ತೊಂದರೆ ಕೊಡಲ್ಲ. ಆದರೆ ಮರ್ಯಾದೆಯಿಂದ  ಈ ಸೈಲೆನ್ಸರ್ ತೆಗೆದು ಹಳೆ ಸೈಲೆನ್ಸರ್ ಹಾಕಿ. ಮತ್ತೆ ಇದೇ ರೀತಿ ನಿಮ್ಮ ಬೈಕ್‌ನಿಂದ ಸದ್ದು  ಪುನರಾವರ್ತನೆಯಾದ್ರೆ ನಿಮ್ಮ ಬೈ ಕ್‍ಸೀಜ್ ಮಾಡ್ತೇವೆ" ಎಂದು ಖಡಕ್ ಎಚ್ಚರಿಕೆ ನೀಡಿ ಪೊಲೀಸರು ಬೈಕ್‌ಗಳ ಸೈಲೆನ್ಸರ್‌ಗಳನ್ನ ತಮ್ಮ ಸಮ್ಮುಖದಲ್ಲೆ ಬದಲಾಯಿಸುತ್ತಿದ್ದಾರೆ..

ಕುಂದಾಪುರ ಪೊಲೀಸ್‍ಠಾಣೆಯ ಎಸ್‍ಐ ಹರೀಶ್‍ಆ ರ್.ನಾಯ್ಕ್ ಹಾಗೂ ಸಿಬ್ಬಂದಿಗಳು ವೃತ್ತ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕುಂದಾಪುರ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿರುವ ಬುಲೆಟ್‍ಗಳು ಹಾಗೂ ಕೆಲವು ದುಬಾರಿ ಬೆಲೆಯ ಬೈಕ್‍ಗಳು ಅತಿ ಹೆಚ್ಚು ಪ್ರಮಾಣದಲ್ಲಿ ಕರ್ಕಶ ಶಬ್ದ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಈ ಹಿಂದೆ ಹಲವು ದೂರುಗಳು ಕೇಳಿಬಂದಿತ್ತು.

ಕಾರ್ಯಾಚರಣೆಯ ಮೊದಲ ಭಾಗವಾಗಿ ನಾಲ್ಕು ಬುಲೆಟ್ ಬೈಕ್‍ಗಳನ್ನು ವಶಕ್ಕೆ ಪಡೆದ.ಬಳಿಕ ಠಾಣೆಗೆ ತಂದು ಬೈಕ್‍ಗೆ ಅಳವಡಿಸಿರುವ ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ಸವಾರರಿಂದಲೇ ತೆಗೆಸಿ ಕಂಪೆನಿ ಸೈಲೆನ್ಸರ್‌ಗಳನ್ನು ಅಳವಡಿಸಿದ್ದಾರೆ. ಬಳಿಕ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಕುಂದಾಪುರ ಪೊಲೀಸರ ಈ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಕುಂದಾಪುರ ನಗರ ಮಾತ್ರವಲ್ಲದೆ ಇತರ ಕಡೆಗಳಲ್ಲಿಯೂ ಇಂತಹುದೆ ಕಾರ್ಯಾಚರಣೆ ನಡೆಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ