ಉಚಿತ ಸಮವಸ್ರ್ತವಿತರಣೆ ಮಾಡಿದ ಫ್ರೆಂಡ್ಸ್ ಸರ್ಕಲ್ ಕುಂದಾಪುರ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಫ್ರೆಂಡ್ಸ್ ಸರ್ಕಲ್(ರಿ.) ಮೀನು ಮಾರ್ಕೆಟ್ ರಸ್ತೆ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಬಿ.ಆರ್.ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ 32 ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಸದಸ್ಯರ ವತಿಯಿಂದ ಉಚಿತವಾಗಿ ಸಮವಸ್ರ್ತವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ¯ತಾ ಭಟ್ ವಹಿಸಿದ್ದು ಮುಖ್ಯ ಅತಿಥಿಯಾಗಿ ಆಗಮಿಸಿದ  ಫ್ರೆಂಡ್ಸ್ ಸರ್ಕಲ್ ಬೆಳ್ಳಿ ಹಬ್ಬದ ಅಧ್ಯಕ್ಷರಾದ ಶ್ರೀ ಮನೋಹರ್ ಪುತ್ರನ್  ಶಾಲೆಯ ವಿದ್ಯಾರ್ಥಿಗಳಲ್ಲಿ ಸಮಾನತೆಯ ಉದ್ದೇಶಕ್ಕೆ ಬಳಸುವ ಸಮವಸ್ರ್ತವನ್ನು ನಮ್ಮ ಸಂಸ್ಥೆಯ ಸದಸ್ಯರ ಸಹಕಾರದಿಂದ ಪ್ರತಿವರ್ಷ ನೀಡುತ್ತಾ ಬಂದಿದ್ದು ಪ್ರತಿವರ್ಷ ಇದರ ಪ್ರಯೋಜನ ಪಡೆಯುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ಕಲಿತ ಶಾಲೆಗೆ ದೇಣಿಗೆ ನೀಡುವುದು ನಮಗೆ ಹೆಮ್ಮೆಯ ವಿಷಯ ಎಂದು ನುಡಿದರು.

ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ಶ್ರೀ ಚೇತನ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರುಗಳಾದ ಗಣೇಶ್ ಸಾಲಿಯನ್, ಧನಪಾಲ್ ಪುತ್ರನ್ , ನಾಗರಾಜ ಖಾರ್ವಿ, ಮಂಜುನಾಥ್ ಪೂಜಾರಿ ಹಾಗೂ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲೆಯ ಸಹಾಯಕ ಶಿಕ್ಷಕ ನಿಂಗಪ್ಪ  ಅವರು ವಿದ್ಯಾರ್ಥಿಗಳಿಂದ ಹಾಡನ್ನು ಹೇಳಿಸುವುದರ ಮುಖಾಂತರ ಸಂಸ್ಥೆಯ ಕಾರ್ಯ ವೈಖರಿಯನ್ನು ಅಭಿನಂದಿಸಿದರು. ಸಂಸ್ಥೆಯ ವತಿಯಿಂದ ಸಿಹಿ ತಿಂಡಿಯನ್ನು ವಿತರಿಸಿದರು. ಸಂಸ್ಥೆಯ ಮುಖ್ಯ ಸಲಹೆಗಾರರಾದ ಶೇಖರ್ ಜಿ.ಖಾರ್ವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ