ಸಾಹಿತಿ ಮೊಹ್ಮದ್ ಬಡ್ಡೂರ್ ತಂದೆ ಉಸ್ತಾದ್ ಬಿ. ಇಬ್ರಾಹಿಂ ಹಾಜಿ ಇನ್ನಿಲ್ಲ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಸಾಹಿತಿ ಮೊಹ್ಮದ್ ಬಡ್ಡೂರ್ ಅವರ ತಂದೆ ಉಸ್ತಾದ್ ಬಿ. ಇಬ್ರಾಹಿಂ ಹಾಜಿ(97) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ತಾಲೀಂ ಮಾಸ್ಟರ್ ಆಗಿ ಪ್ರಸಿದ್ದರಾಗಿದ್ದ ಹಾಜಿ ಇಬ್ರಾಹಿಂ ಅವರು ಕರ್ನಾಟಕ, ಕೇರಳ ರಾಜ್ಯ ಹಾಗೂ ದುಬೈಯಲ್ಲಿ ಗರಡಿ ನಡೆಸಿದ್ದರು. ಆರು ಸಾವಿರಕ್ಕೂ ಮಿಕ್ಕಿ ಶಿಷ್ಯರನ್ನು ತರಬೇತುಗೊಳಿಸಿದ ಖ್ಯಾತಿ ಅವರದಾಗಿತ್ತು.

ರಾಜಿ ಪಂಚಾತಿಕೆ ಮೂಲಕ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಅಸಾಧಾರಣ ವಾಕ್ಚಾತುರ್ಯದಿಂದ ಅವರು ಭಾರೀ ಜನಪ್ರಿಯತೆಗಳಿಸಿದ್ದರು.

ಐವತ್ತರ ದಶಕದಲ್ಲಿ ಬಡ್ಡೂರಿನಲ್ಲಿ ಮದ್ರಸ ಸ್ಥಾಪಿಸಿದ್ದು, ಅದರ ಅಧ್ಯಕ್ಷರಾಗಿ ಇಂದಿನ ತನಕವೀ ಕಾರ್ಯನಿರ್ವಹಿಸಿದ್ದು ಅವರ ಹೆಗ್ಗಳಿಕೆಯಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ