ಉಪ್ಪಳ ಅಪಘಾತ: ಗಾಯಾಳು ಮಗು ಮೃತ್ಯು

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ರಾ.ಹೆ 66ರ ಉಪ್ಪಳ ಸಮೀಪ ನಯಾಬಝಾರ್ ಎಂಬಲ್ಲಿ ಲಾರಿ ಮತ್ತು ತೂಫಾನ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವೃ ಗಾಯಗೊಂಡ ಮಗು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಖೇದಕರ ಘಟನೆ ವರದಿಯಾಗಿದೆ.

ಇದೇ ಅಪಘಾತದಲ್ಲಿ ಮೃತರಾದ ನಸೀಮಾ ಎಂಬವರ ಪುತ್ರಿ, ಒಂದು ವರ್ಷ ಆರು ತಿಂಗಳ ಹಸುಗೂಸು ಫಾತಿಮಾ ಮೃತಪಟ್ಟಿದ್ದಾಳೆ.

ಈ ಅಪಘಾತದಲ್ಲಿ ಐವರು ಮೃತಪಟ್ಟು, ಹನ್ನೆರಡು ಮಂದಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಹನ್ನೊಂದು ಮಕ್ಕಳನ್ನು ಆಸ್ಪತ್ರೆಗೆ ದಾಳಕಿಸಲಾಗಿದ್ದು, ನಿಧಾನವಾಗಿ ಚೇತರಿಕೆ ಕಂಡಿಬಂದಿದೆ.

ಸಚಿವ ಯು.ಟಿ. ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ

ಕರಾವಳಿ ಕರ್ನಾಟಕ ವರದಿ

ಕಾಸರಗೋಡು
: ಲಾರಿ ಹಾಗೂ ಟ್ರಾವೆಲರ್ ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಇತರ ಏಳು ಮಂದಿ ಗಾಯಗೊಂದ್ದಾರೆ. ಈ ದುರ್ಘಟನೆ ಕಾಸರಗೋಡಿನ ಉಪ್ಪಳ ಸಮೀಪ ನಯಾ ಬಜಾರ್ ಬಳಿ ಸಂಭವಿಸಿದೆ.

ಮೃತರು ದಕ್ಷಿಣಕನ್ನಡ ಜಿಲ್ಲೆಯ ಕೆ.ಸಿ.ರೋಡ್ ನಿವಾಸಿಗಳಾದ ಅಸ್ಮಾ(30), ಬಿಫಾತಿಮ(65), ನಸೀಮಾ(38), ಮುಸ್ತಾಕ್ (41) ಹಾಗೂ ಇಮ್ತಿಯಾಜ್ (35) ಎಂದು ತಿಳಿದುಬಂದಿದೆ.      

ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪಿನಲ್ಲಿ ಮಕ್ಕಳು ಸೇರಿ ಸುಮಾರು 18 ಮಂದಿ ಪ್ರಯಾಣಿಸುತ್ತಿದ್ದರು,

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಎರಡು ದಿನಗಳ ಹಿಂದಷ್ಟೆ ಕುಮಟಾದಲ್ಲಿ ನಡೆದ ಇನ್ನೊಂದು ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ