1-0 ಅಂತರದಲ್ಲಿ ಬೆಲ್ಜಿಯಂ ಮಣಿಸಿದ ಫ್ರಾನ್ಸ್ ಫೈನಲ್‌ಗೆ ಲಗ್ಗೆ!
ರೋಚಕ ಗೋಲು ಗಳಿಸಿದ ಫ್ರಾನ್ಸ್ ತಂಡದ ಉಮ್ಟಿಟಿ

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್‌ನಲ್ಲಿ ಸೆಮಿ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಲ್ಲಿ ಮಣಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಪಂದ್ಯದ 51ನೇ ನಿಮಿಷದಲ್ಲಿ ಫ್ರಾನ್ಸ್ ಸ್ಟ್ರೈಕರ್ ಉಮ್ಟಿಟಿ ಸಿಡಿಸಿ ಏಕೈಕ ಗೋಲಿನ ನೆರವಿನಿಂದ ಫ್ರಾನ್ಸ್ ತಂಡ ಬೆಲ್ಜಿಯಂ ತಂಡವನ್ನು ರೋಚಕವಾಗಿ ಮಣಿಸಿ 2018ರ ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ.

ಪಂದ್ಯದುದ್ದಕ್ಕೂ ಗೆಲುವಿಗಾಗಿ ಬೆಲ್ಜಿಯಂ ತಂಡ ಭಾರಿ ಹರಸಾಹಸವನ್ನೇ ಪಟ್ಟಿತಾದರೂ ಗೋಲು ಗಳಿಸುವಲ್ಲಿ ವಿಫಲವಾಯಿತು. ಪ್ರಮುಖವಾಗಿ 51ನೇ ನಿಮಿಷದಲ್ಲಿ ಫ್ರಾನ್ಸ್ ನ ಉಮ್ಟಿಟಿ ಹೆಡ್ ಮಾಡಿ ಗಳಿಸಿದ ಗೋಲು ಬೆಲ್ಜಿಯಂ ತಂಡವನ್ನು ಒತ್ತಡಕ್ಕೆ ನೂಕಿತು. ಪರಿಣಾಮ ಗೋಲು ಗಳಿಸಿದ ಬಳಿಕ ಆಕ್ರಮಣಕಾರಿ ಆಟಕ್ಕೆ ಬೆಲ್ಜಿಯಂ ಮೊರೆ ಹೋಯಿತಾದರೂ ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ಅಂತಿಮವಾಗಿ ಪಂದ್ಯದ ಅವಧಿ ಮುಕ್ತಾಯದ ವೇಳೆಗೆ ಬೆಲ್ಜಿಯಂ ತಂಡ 0-1 ಅಂತರದ ರೋಚಕ ಸೋಲು ಕಂಡು ಟೂರ್ನಿಯಿಂದ ಹೊರಬಿತ್ತು. ಆ ಮೂಲಕ 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫ್ರಾನ್ಸ್ ತಂಡ ವಿಶ್ವಕಪ್ ಫೈನಲ್ ಹಂತಕ್ಕೇರಿತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ