ನಕ್ಸಲ್ ವಿರುದ್ಧ ಕಾರ್ಯಾಚರಣೆ: ನೆಲಬಾಂಬ್ ಸ್ಫೋಟದಿಂದಾಗಿ ಕಾರವಾರದ ಯೋಧ ಮೃತ್ಯು

ಕರಾವಳಿ ಕರ್ನಾಟಕ ವರದಿ

ಕಾರವಾರ:
ನೆಲಬಾಂಬ್ ಸ್ಫೋಟದಿಂದಾಗಿ ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) ಸೇವೆ ಸಲ್ಲಿಸುತ್ತಿದ್ದ ಕಾರವಾರದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ವಿಜಯಾನಂದ ಸುರೇಶ್ ನಾಯ್ಕ್ (28) ಹುತಾತ್ಮ ಯೋಧ. ಇವರು 2014ರಲ್ಲಿ ಸೈನ್ಯಕ್ಕೆ ಸೇರಿದ್ದು, ಬಿಎಸ್‍ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಛತ್ತೀಸ್‌ಘಡದಲ್ಲಿ ನಕ್ಸಲ್ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸೋಮವಾರ ಛತ್ತೀಸ್‌ಘಡದಲ್ಲಿ ಸಂಭವಿಸಿದ ನೆಲ ಬಾಂಬ್ ಸ್ಪೋಟದಿಂದಾಗಿ ವಿಜಯಾನಂದರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುರೇಶ್ ನಾಯ್ಕ್ ಜಿಲ್ಲೆಯ ನಿವೃತ್ತ ರೆವಿನ್ಯೂ ಇನ್ಸ್‌ಪೆಕ್ಟರ್ ಸುರೇಶ್ ನಾಯ್ಕ್ ರವರ ಪುತ್ರರಾಗಿದ್ದಾರೆ. ಇಂದು ಸಂಜೆ ವೇಳೆಗೆ ಮೃತ ಯೋಧನ ಪಾರ್ಥೀವ ಶರೀರ ನಗರಕ್ಕೆ ಆಗಮಿಸುತ್ತದೆ ಎಂದು ತಿಳಿದು ಬಂದಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ