ಬೈಕ್‌ಗೆ ಢಿಕ್ಕಿಯಾದ ಬಸ್: ಸಾವರ ಸಾವು. ಕುಂದಾಪುರ ಕಾಲೇಜು ವಿದ್ಯಾರ್ಥಿನಿ ಗಂಭೀರ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಬಾಳೆಬರೆ ಘಾಟಿ ವ್ಯಾಪ್ತಿಯ ಮಾಸ್ತಿಕಟ್ಟೆ ಸಮೀಪ ಸಂಭವಿಸಿದ ಬೈಕ್ ಮತ್ತು ಬಸ್ ಢಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದಾರೆ.

ನಗರ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಸಮೀಪ ಈ ಅಪಘಾತ ಸಂಭವಿಸಿದ್ದು ಕುಂದಾಪುರ ತಾಲೂಕಿನ ವಂಡ್ಸೆ ಸಮೀಪದ ಇಡೂರು ಕುಂಜಾಡಿಯ ಪ್ರಸನ್ನ ಶೆಟ್ಟಿ ಸಾವನ್ನಪ್ಪಿದ ಯುವಕ. ಕುಂದಾಪುರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಅರ್ಪಿತಾ ಎಂಬ ಯುವತಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

ಪ್ರಸನ್ನ ಶೆಟ್ಟಿ ಮತ್ತು ಅರ್ಪಿತಾ ಇಬ್ಬರೂ ಬೈಕ್‌ನಲ್ಲಿ ತೆರಳುತ್ತಿರುವಾಗ ಮಿನಿ ಬಸ್ ಒಂದು ಇವರ ಬೈಕಿಗೆ ಢಿಕ್ಕಿಯಾಗಿದೆ. ಢಿಕಿಯ ರಭಸಕ್ಕೆ ಬೈಕ್ ಸವಾರ ಪ್ರಸನ್ನ ಶೆಟ್ಟಿಯ ತಲೆಗೆ ಏಟಾಗಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಪ್ರಸನ್ನ ದುಬೈಯಲ್ಲಿ ಕೆಲಸದಲ್ಲಿದ್ದು ಇತ್ತೀಚೆಗಷ್ಟೆ ರಜೆಯಲ್ಲಿ ಮನೆಗೆ ಮರಳಿದ್ದರು.

ಕಳೆದ ಕೆಲವು ದಿನಗಳಿಂದ ಕರಾವಳಿಯಾದ್ಯಂತ ಹಲವು ರಸ್ತೆ ಅಪಘಾತಗಳು ನಡೆಯುತ್ತಿದ್ದು ಅಪಾರ ಸಾವು ನೋವು ಸಂಭವಿಸಿದ ಘಟನೆಗಳು ವರದಿಯಾಗುತ್ತಿರುವಾಗಲೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತದಲ್ಲಿ ಕರಾವಳಿಯ ಯುವಕ ಮೃತಪಟ್ಟಿದ್ದಾರೆ.

ಇದನ್ನೂ ಓದಿ
ರಾ. ಹೆದ್ದಾರಿ 66ರಲ್ಲಿ ಮತ್ತೆ ಭೀಕರ ಅಪಘಾತ: ಸ್ಥಳದಲ್ಲೆ ಐವರ ಸಾವು

ಕರಾವಳಿ ಕರ್ನಾಟಕ ವರದಿ

ಕಾಸರಗೋಡು
: ಲಾರಿ ಹಾಗೂ ಟ್ರಾವೆಲರ್ ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಇತರ ಏಳು ಮಂದಿ ಗಾಯಗೊಂದ್ದಾರೆ. ಈ ದುರ್ಘಟನೆ ಕಾಸರಗೋಡಿನ ಉಪ್ಪಳ ಸಮೀಪ ನಯಾ ಬಜಾರ್ ಬಳಿ ಸಂಭವಿಸಿದೆ.

ಮೃತರು ದಕ್ಷಿಣಕನ್ನಡ ಜಿಲ್ಲೆಯ ಕೆ.ಸಿ.ರೋಡ್ ನಿವಾಸಿಗಳಾದ ಅಸ್ಮಾ(30), ಬಿಫಾತಿಮ(65), ನಸೀಮಾ(38), ಮುಸ್ತಾಕ್ (41) ಹಾಗೂ ಇಮ್ತಿಯಾಜ್ (35) ಎಂದು ತಿಳಿದುಬಂದಿದೆ.      

ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪಿನಲ್ಲಿ ಮಕ್ಕಳು ಸೇರಿ ಸುಮಾರು 18 ಮಂದಿ ಪ್ರಯಾಣಿಸುತ್ತಿದ್ದರು,

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಎರಡು ದಿನಗಳ ಹಿಂದಷ್ಟೆ ಕುಮಟಾದಲ್ಲಿ ನಡೆದ ಇನ್ನೊಂದು ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ