ಸಿಗಡಿ ಕೆರೆಗೆ ಕೆಮಿಕಲ್ ಸಿಂಪಡಿಸಿದ ದುಷ್ಕರ್ಮಿಗಳು: ಸಿಗಡಿ ಸಂಪೂರ್ಣ ನಾಶ. 25 ಲಕ್ಷ ರೂ ನಷ್ಟ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಹಗಲಿರುಳು ಶ್ರಮ ವಹಿಸಿ ನಿಗಾ ಇಟ್ಟು ಬೆಳೆಸಿದ್ದ ಸಿಗಡಿ ಕೃಷಿ ಕೆರೆಗೆ ದುಷ್ಕರ್ಮಿಗಳು ರಸಾಯನಿಕ ಸಿಂಪಡಿಸಿ ಪರಾರಿಯಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ. ರಾಸಾಯನಿಕ ಸಿಂಪಡಿಸಿದ ಪರಿಣಾಮ ಕೊಯ್ಲಿಗೆ ಬಂದಿದ್ದ 25 ಲಕ್ಷ ರೂಪಾಯಿ ಮೌಲ್ಯದ ಸಿಗಡಿ ಬೆಳೆ ಸಂಪೂರ್ಣ ನಾಶವಾಗಿದೆ.

ಕುಂದಾಪುರ ತಾಲೂಕಿನ ಅರಾಟೆಯಲ್ಲಿರುವ ಸಿಗಡಿ ಕೆರೆಗೆ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಕೆಮಿಕಲ್ ಹಾಕಿ ಪರಾರಿಯಾಗಿದ್ದಾರೆ. ಈ ಕೆರೆ ಬಂಟ್ವಾಡಿ ನಿವಾಸಿ ನರಸಿಂಹ ಮೊಗವೀರರಿಗೆ ಸಂಬಂಧಿಸಿದೆ ಎನ್ನಲಾಗಿದೆ.

ನಾಲ್ಕೈದು ದಿನಗಳಲ್ಲಿ ಸಿಗಡಿ ಹಾರ್ವೆಸ್ಟಿಂಗ್ ನಡೆಯಬೇಕಾಗಿದ್ದು ಸಿಗಡಿ ಮರಿಗಳು ಚೆನ್ನಾಗಿ ಬೆಳೆದಿದ್ದವು ಎನ್ನಲಾಗಿದೆ. ವ್ಯಾವಹಾರಿಕ ದ್ವೇಷದಿಂದ ಈ ಕೃತ್ಯ ನಡೆಸಿರಬಹುದಾಗಿದೆ ಎಂದು ಶಂಕಿಸಲಾಗಿದೆ.

ಕೆಮಿಕಲ್ ಸಿಂಪಡಿಸಿದ ಪರಿಣಾಮ 9 ಟನ್ ಸಿಗಡಿ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆದ ಸಿಗಡಿಗಳು ಕೆರೆಯಲ್ಲಿ ಸತ್ತು ಬಿದ್ದು ತೇಲಾಡುತ್ತಿವೆ. 25 ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆ.

ಸಿಗಡಿ ಕೆರೆಗೆ ಇಬ್ಬರು ಕಾವಲುಗಾರರಿದ್ದರೂ ಈ ಕೃತ್ಯ ನಡೆದಿದೆ.  ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ