ಚಲಿಸುವ ರೈಲಿಗೆ ಸಿಲುಕಿ ಯುವಕನ ಕೈ ಕಟ್: ಕುಂದಾಪುರದಲ್ಲೊಂದು ದಾರುಣ ಘಟನೆ

ಕರಾವಳಿ ಕರ್ನಾಟಕ ವರದಿ

ಕುಂದಾಪುರ
: ಚಲಿಸುವ ರೈಲಿಗೆ ಸಿಲುಕಿ ಯುವಕನ ಕೈ ತುಂಡಾದ ಘಟನೆ ತಾಲೂಕಿನ ನಾಡ ಗುಡ್ಡೆಯಂಗಡಿ ಗ್ರಾಮದಿಂದ ವರದಿಯಾಗಿದೆ.

ಬಂಟ್ವಾಡಿ ಸಮೀಪದ ಸಂಸಾಡಿ ನಿವಾಸಿ ರೋಶನ್ ಶೆಟ್ಟಿ(23) ಗಾಯಾಳು.  ನಾಡಾ ಗುಡ್ಡೆಯಂಗಡಿ ಮಾರ್ಕೇಟ್ ಬಳಿ ರೈಲಿಗೆ ಸಿಲುಕಿದ ಈತನ ಕೈ ಸಂಪೂರ್ಣ ತುಂಡಾಗಿ ಬಿದ್ದಿತ್ತು. ಘಟನೆ ಹೇಗೆ ನಡೆದಿದೆ ಎಂದು ಇನ್ನೂ ತಿಳಿದು ಬಂದಿಲ್ಲ. ಸಹಾಯಕ್ಕಾಗಿ ಅಂಗಲಾಚಿದ್ದ ಇತನನ್ನು ಕತ್ತರಿಸಿದ ಕೈ ಸಮೇತವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಿತ್ಯಾನಂದ ಶೇಟ್ ಮತ್ತು ಇತರರು ಈತನನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ಉಡುಪಿ ಜಿಲ್ಲಾಸ್ಪತ್ರೆಗೆ ಈತನನ್ನು ದಾಖಲಿಸಿದರೂ ಅಲ್ಲಿ ಬೇರ್ಪಟ್ಟ ಕೈ ಜೋಡಿಸುವ ವ್ಯವಸ್ಥೆ ಇಲ್ಲದ ಕಾರಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಅಷ್ಟು ಹೊತ್ತಿಗಾಗಲೆ ವಿಳಂಬವಾದ ಕಾರಣ ಬೇರ್ಪಟ್ತ ಕೈಯನ್ನು ದೇಹಕ್ಕೆ ಜೋಡಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ