ಬಿಜೆಪಿ ಮುಖಂಡನ ಕೊಲೆ ಆರೋಪಿಯನ್ನು ಜೈಲಿನಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ವಿರೋಧಿ ಗ್ಯಾಂಗ್

ಕರಾವಳಿ ಕರ್ನಾಟಕ ವರದಿ

ಮುಂಬೈ:
ಜೈಲಿನೊಳಗಡೆಯೇ ಕುಖ್ಯಾತ ಭೂಗತ ಪಾತಕಿಯೋರ್ವನನ್ನು ವಿರೋಧಿ ಗ್ಯಾಂಗ್ ಸದಸ್ಯನೋರ್ವ ಗುಂಡು ಹೊಡೆದು ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಬಾಘ್ ಪತ್ ಜೈಲಿನಲ್ಲಿ ನಡೆದಿದೆ. ಮುನ್ನಾ ಬಜರಂಗಿ ಕೊಲೆಯಾದ ಪಾತಕಿ.

ಬಿಜೆಪಿ ಮುಂದಾಳು ಕೃಷ್ಣಾನಂದ ರಾಯ್  ಹತ್ಯೆ ಪ್ರಕರಣದಲ್ಲಿ ಮುನ್ನಾನನ್ನು ಪೊಲೀಸರು ಬಂಧಿಸಿದ್ದರು.
ಮುನ್ನಾ ಬಜರಂಗಿಯನ್ನು ಸೋಮವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿತ್ತು. ಇಂದು ಬೆಳಗ್ಗೆ 6.30ರ ಹೊತ್ತಿಗೆ ಸುನೀಲ್ ಎಂಬಾತ ಜೈಲಿನೊಳಗೆ ಮುನ್ನಾಗೆ ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮುನ್ನಾ ಬಜರಂಗಿಯನ್ನು ರವಿವಾರ  ಝಾನ್ಸಿ ಜೈಲಿನಿಂದ ಬಾಘ್ ಪತ್ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಜೈಲರ್ ಅನ್ನು ಅಮಾನತಿನಲ್ಲಿಡಲಾಗಿದೆ. ಜೈಲಿನೊಳಗೆ  ನಡೆದಿರುವ ಈ ಘಟನೆ ಬಗ್ಗೆ ಕಠಿಣ ಕ್ರಮಕ್ಕೆ  ಆದೇಶ ನೀಡಿರುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಮುನ್ನಾ ಬಜರಂಗಿಯ ಪತ್ನಿ ಸೀಮಾ ಸಿಂಗ್ ಅವರು ಉತ್ತರ ಪ್ರದೇಶ ಪೊಲೀಸರು ಜೈಲಿನಲ್ಲೇ ತನ್ನ ಪತಿಯನ್ನು ಕೊಲೆಗೈಯಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ವಿಷಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ನ್ಯಾಯಾಲಯದ ಗಮನಕ್ಕೆ ತರುವುದಾಗಿ ಹೇಳಿದ್ದನ್ನು ಸ್ಮರಿಸಬಹುದು.

ಈಗ ಪೊಲೀಸ್ ವಾಹನದಲ್ಲಿ ಕೋರ್ಟಿಗೆ ತರುವ ಸಂದರ್ಭದಲ್ಲಿ ಜೈಲಿನ ಸಹ ಖೈದಿ, ವಿರೋಧಿ ಗ್ಯಾಂಗಿನ ಸುನೀಲ್ ರಥಿ ಮುನ್ನಾಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ