ಕಾರ್ಕಳ: ಮನೆಗೆ ನುಗ್ಗಿ ಒಂಟಿ ಮಹಿಳೆಯ ಕೊಲೆ.

ಕಾರ್ಕಳ: ಕಾರ್ಕಳದ ಕುಕ್ಕುಂದೂರು ಸಮೀಪದ ಅಯ್ಯಪ್ಪ ನಗರದ ಮನೆಯೊಂದರಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ. ಪ್ಲೋರಿನ್‌ ಮಚಾದೋ (54)  ಕೊಲೆಯಾದ ಮಹಿಳೆ.
ರವಿವಾರ ಮಧ್ಯಾಹ್ನದ ವೇಳೆಗೆ ಈ  ಕೊಲೆ ಕೃತ್ಯ ಬೆಳಕಿಗೆ ಬಂದಿದ್ದು ಮೃತದೇಹವನ್ನು ಬೆಡ್‌ಶೀಟ್‌‌ನಲ್ಲಿ ಮುಚ್ಚಿಡಲಾಗಿತ್ತು. 

ಮೃತ ಫ್ಲೊರಿನ್ ಮಚಾದೊ ಗಂಡನಿಂದ ದೂರವಾಗಿ ಐದಾರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಗಂಡ ಮಾಳ ಸಮೀಪದ ಹುಕ್ರಟ್ಟೆಯಲ್ಲಿ ಮತ್ತು ಫ್ಲೋರಿನ್‌ ಕುಕ್ಕುಂದೂರಿನಲ್ಲಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಕಿರಿಯ ಮಗ ತಂದೆಯ ಜತೆಗೆ ಹಾಗೂ ಹಿರಿಯ ಮಗ ತಾಯಿಯ ಬಳಿ ಇದ್ದರು. ಶನಿವಾರ ರಜೆಯ ಹಿನ್ನೆಲೆಯಲ್ಲಿ ಹಿರಿಯ ಮಗನೂ ತಂದೆಯ ಮನೆಗೆ ತೆರಳಿದ್ದ. ಅಂದು ರಾತ್ರಿ ಮನೆಯಲ್ಲಿ ಫ್ಲೋರಿನ್‌ ಒಬ್ಬರೇ ಇದ್ದರು. 

ರವಿವಾರ ಫ್ಲೋರಿನ್‌ ಪ್ರಾರ್ಥನೆಗಾಗಿ ಚರ್ಚ್‌ಗೆ ಬಂದಿರಲಿಲ್ಲ. ಹೀಗಾಗಿ ಮಧ್ಯಾಹ್ನದ ವೇಳೆಗೆ ಇವರ ಸಂಬಂಧಿ ಮಹಿಳೆಯೊಬ್ಬರು ಮನೆಗೆ  ಬಂದಿದ್ದು,  ಆಗ ಕೊಲೆ  ಘಟನೆ ಬೆಳಕಿಗೆ ಬಂದಿದೆ.


ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ ಚಂದ್ರ, ಡಿವೈಎಸ್ಪಿ ಕುಮಾರಸ್ವಾಮಿ, ಕಾರ್ಕಳ ನಗರ ಠಾಣಾ ಪಿಎಸ್‌ಐ ನಂಜ ನಾಯ್ಕ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ