ಚಾರ್ಮಾಡಿ ಘಾಟಿ ಕುಸಿತ: ಸಚಿವ ರೇವಣ್ಣ ಪರಿಶೀಲನೆ

ಶಿಬಿ ಧರ್ಮಸ್ಥಳ/ಕರಾವಳಿಕರ್ನಾಟಕ ವರದಿ
ಬೆಳ್ತಂಗಡಿ
: ರಾಜ್ಯ ಸರಕಾರದ ಲೊಕೋಪಯೋಗಿಸಚಿವ ಹೆಚ್ ಡಿ ರೇವಣ್ಣ ಅವರು ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೊಟ್ಟಿಗೆ ಹಾರದ ಮೂಲಕ ಬಂದ ಸಚಿವ ರೇವಣ್ಣ ಅವರು ಚಾರ್ಮಾಡಿಯಲ್ಲಿ ತೀವ್ರಗುಡ್ಡೆ ಕುಸಿತ ಉಂಟಾದ ಮೂರು ಸ್ಥಳಗಳನ್ನು ಸುರಿಯುವ ಮಳೆಯನ್ನು ಲೆಕ್ಕಿಸದೆ ಕಾರಿನಿಂದ ಇಳಿದು ವೀಕ್ಷಿಸಿದರು. ಈ ಸಂದರ್ಭ ಶಾಸಕ ಹರೀಶ ಪೂಂಜ ಇದ್ದು ಸಚಿವರನ್ನು ಬರಮಾಡಿಕೊಂಡು ಘಾಟಿಯಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು.

ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರೇವಣ್ಣ ಅವರು ದಿಲ್ಲಿಗೆ ಹೋಗಿದ್ದಾಗ ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಅವರನ್ನು ಭೇಟಿ ಮಾಡಿ ಬಂದಿರುವೆ. ಚಾರ್ಮಾಡಿ ಘಾಟಿಯ ಸಮಸ್ಯೆಯ ಬಗ್ಗೆ ಅವರ ಗಮನಕ್ಕೆ ತರಲಾಗಿದೆ.  ವಾಹನಗಳ ಮೇಲೆ ಬಿದ್ದು ಅಪಾಯವಾಗದಂತೆ ಚಾರ್ಮಾಡಿ ರಸ್ತೆ ಬದಿಯಲ್ಲಿನ ಮರಗಳನ್ನು ಅರಣ್ಯ ಇಲಾಖೆಯ ಮೂಲಕ ತೆಗೆಯುವ ವ್ಯವಸ್ಥೆಮಾಡಲಾಗುವುದು.

ಅಪಾಯಕಾರಿ ತಿರುವುಗಳಲ್ಲಿ ಕಾಂಕ್ರೀಟ್ರಸ್ತೆಯಾಗಿ ಮಾರ್ಪಡಿಸು ಗುರಿಯಿದೆ. ಘಾಟಿಯ ರಸ್ತೆ ಅಭಿವೃದ್ದಿಗೆ  ಸುಮಾರು 250 ಕೋಟಿ. ರೂ. ಅಂದಾಜು ವೆಚ್ಚದ ಯೋಜನೆಯನ್ನು ಮುಂದಿನ ಬಾರಿ ದಿಲ್ಲಿಗೆ ಹೋದಾಗ ಸಚಿವ ಗಡ್ಕರಿ ಅವರಿಗೆ ಸಲ್ಲಿಸಲಾಗುವುದು. ಈ ಬಗ್ಗೆ ಕೂಲಂಕುಷವಾಗಿ, ಸವಿವರಾಗಿ ಅಧ್ಯಯನ ನಡೆಸಿ, ಭಾವಚಿತ್ರಗಳೊಂದಿಗೆ ಕೇಂದ್ರಕ್ಕೆ ವರದಿ ನೀಡಲಾಗುವುದು ಎಂದರು.

ರೇವಣ್ಣ ಅವರೊಂದಿಗೆ ವಿಧಾನಪರಿಷತ್ ಸದಸ್ಯ ಧರ್ಮೇಗೌಡ, ಲೋಕೋಪಯೋಗಿ ಇಲಾಖಾ ಕಾರ್ಯದರ್ಶಿ ಕೃಷ್ಣ ರೆಡ್ಡಿ, ಮುಖ್ಯಅಭಿಯಂತರ ಶ್ರೀನಿವಾಸ, ಸುಪರಿಡೆಂಟ್ ಇಂಜಿನಿಯರ್ ಕಾಂತರಾಜ್, ಬೆಳ್ತಂಗಡಿ ಸಹಾಯಕಕಾರ್ಯಪಾಲಕಇಂಜಿನಿಯರ್ ಶಿವಪ್ರಸಾದ ಅಜಿಲ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಸುಬ್ಬರಾವ್ ಹೊಳ್ಳ, ಪ್ರಸನ್ನಕುಮಾರ್ ಮತ್ತು ಯಶವಂತ್, ಪೋಲಿಸ್ ಅಧಿಕಾರಿಗಳು ಇದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ