ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ –ರೇವಣ್ಣ ಅರ್ಧ ತಾಸು ಮಾತುಕತೆ
ಮಾಧ್ಯಮದವರನ್ನ್ ಹೊರಗಿಟ್ಟು ಮಾಜಿ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರ ನಡುವೆ ಗಹನ ಸಮಾಲೋಚನೆ.

ಶಿಬಿ ಧರ್ಮಸ್ಥಳ/ಕರಾವಳಿಕರ್ನಾಟಕ ವರದಿ

ಬೆಳ್ತಂಗಡಿ:
ಚಾರ್ಮಾಡಿ ಕಣಿವೆ ರಸ್ತೆ ಬದಿಯ ಭೂ ಕುಸಿತ ವೀಕ್ಷಿಸಲು ಬಂದಿದ್ದ ಲೋಕೋಪಯೋಗಿ ಇಲಾಖಾ ಸಚಿವ ಎಚ್.ಡಿ.ರೇವಣ್ಣ ಅವರು ಧರ್ಮಸ್ಥಳ ಶಾಂತಿವನದಲ್ಲಿ ಪ್ರಕೃತಿಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ದಿಢೀರ್ ಭೇಟಿ ಮಾಡಿ ಅವರೊಂದಿಗೆ ಸುಮಾರು ಅರ್ಧಗಂಟೆ ಕಾಲ ಮಾತುಕತೆ ನಡೆಸಿದರು.

ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿದ ರೇವಣ್ಣ ಅವರನ್ನು ವೈಧ್ಯಾಧಿಕಾರಿ ಪ್ರಶಾಂತ ಶೆಟ್ಟಿ ಅವರು ಸ್ವಾಗತಿಸಿದರು. ಸಿದ್ದರಾಮಯ್ಯ ಅವರ ಕೊಠಡಿಗೆ ತೆರಳಿದ ರೇವಣ್ಣ ಅವರು  ಸಿದ್ದರಾಮಯ್ಯ ಅವರಿಗಾಗಿ ಕಾದರು   ಅಲ್ಲಿಗೆ ಬಂದ ಸಿದ್ದರಾಮಯ್ಯ ಅವರು ರೇವಣ್ಣ ಅವರನ್ನು  ಬರಮಾಡಿಕೊಂಡು ಆತ್ಮೀಯತೆಯಿಂದ ಮಾತುಕತೆ ನಡೆಸಿದರು. ನಗುನಗುತ್ತಾ ಮಾತುಕತೆ ನಡೆಸಿದ್ದು ಕಂಡು ಬಂತು. ತಾನು ದಿಲ್ಲಿಗೆ ಹೋಗಿಬಂದಿರುವ ಬಗ್ಗೆ ಸಿದ್ದರಾಮಯ್ಯ ಅವರಿಗೆ ರೇವಣ್ಣ ಮಾಹಿತಿ ನೀಡಿದರು. ಕುಶಲೋಪರಿ ಮಾತುಕತೆಯಾದ ಬಳಿಕ ಮಾಧ್ಯಮದವರು ಹಾಗೂ ಇತರರನ್ನು  ಹೊರಗಿರುವಂತೆ ಸೂಚನೆ ನೀಡಿ ಸುಮಾರು 30 ನಿಮಿಷಗಳಕಲ ಮಾತುಕತೆ ನಡೆಸಿದರು.

ಮಾತುಕತೆ ಮುಗಿಸಿ ಹೊರಬಂದ ರೇವಣ್ಣ ಅವರು ಕೊಠಡಿಯೊಂದಕ್ಕೆ ಹೋಗಿ ದೂರವಾಣಿಯ ಮೂಲಕ ಯಾರೊಂದಿಗೋ ಮಾತುಕತೆ ನಡೆಸಿ ಬಳಿಕ ಮಾದ್ಯಮದವರೊಂದಿಗೆ ಮಾತನಾಡುತ್ತಾ ತಾನು ಮಂಗಳೂರಿಗೆ ಹೋಗುವ ದಾರಿಯಲ್ಲಿ ಸಿದ್ದರಾಮಯ್ಯ ಅವರು ಇಲ್ಲಿ ಇರುವುದನ್ನು ತಿಳಿದುಕೊಂಡು ಆರೋಗ್ಯದಬಗ್ಗೆ ವಿಚಾರಿಸಲು  ಬಂದಿದ್ದೇನೆ ಅವರೊಂದಿಗೆ ಕೇವಲ ಇದೇ ವಿಚಾರದಲ್ಲಿ ಮಾತುಕತೆ ನಡೆಸಿದ್ದೇನೆ ಬೇರೆ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು. ರಾಜ್ಯ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ ಅದು ಮುಂದುವರಿಯಲಿದೆ. ಬಜೆಟ್ ಬಗ್ಗೆ ಕೆಲವು ಟಿ.ವಿ ಮಾಧ್ಯಮಗಳು ಹರಡುತ್ತಿರುವ ವದಂತಿಗಳಿಗೆ ಯಾವುದೇ ಅರ್ಧವಿಲ್ಲ ಎಂದರು.

ರೇವಣ್ಣ ಅವರೊಂದಿಗೆ ವಿಧಾನಪರಿಷತ್ ಸದಸ್ಯ ಧರ್ಮೇಗೌಡ ಹಾಗು ಇತರರು ಉಪಸ್ಥಿತರಿದ್ದರು.
ಸದ್ಯ ಪ್ರಕರಣ ಕೋರ್ಟ್ ನಲ್ಲಿದ್ದು, ಗುಜರಾತ್ ರಾಜ್ಯಸಭಾ ಚುನಾವಣೆಯಿಂದ ಇಲ್ಲಿಯವರೆಗೆ ಬಿಜೆಪಿ ಶಿವಕುಮಾರ್ ಅವರನ್ನು ಹೇಗೆ ಟಾರ್ಗೆಟ್ ಮಾಡುತ್ತಿದೆ ಎಂಬುದನ್ನು ಇಡೀ ರಾಷ್ಚ್ರವೇ ನೋಡುತ್ತಿದೆ, ಜನರಿಗೆ ಎಲ್ಲೆ ಬೆಳವಣೆಗೆಗಳ ಬಗ್ಗೆ ಅರಿವಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಶಿವಕುಮಾರ್ ವಿಷಯವಾಗಿ ಚರ್ಚಿಸಲು ಸಿಎಂ ಕುಮಾರ ಸ್ವಾಮಿ ದೇವೇಗೌಡರ ಜೊತೆ ಸಭೆ ನಡೆಸಿದು ಎಂಬ ಹೇಳಿಕೆಯನ್ನು ರಮೇಶ್ ಬಾಬು ತಳ್ಳಿ ಹಾಕಿದ್ದಾರೆ,

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ