ಪುತ್ತೂರು: ಜೆಸಿಬಿಯಲ್ಲೇ ಮದುಮಕ್ಕಳ ದಿಬ್ಬಣ!

ಕರಾವಳಿ ಕರ್ನಾಟಕ ವರದಿ

ಪುತ್ತೂರು:
‘ಮದುವೆ’ ಪ್ರತಿಯೊಬ್ಬರ ಬದುಕಲ್ಲೂ ಒಂದು ಸಂಭ್ರಮದ ಕ್ಷಣ. ಮದುಮಗ –ಮದುಮಗಳು ಐಶಾರಾಮಿ ಕಾರುಗಳಲ್ಲೇ ಆಗಮಿಸುವುದು ಸಾಮಾನ್ಯ. ಜೆಸಿಬಿಯಲ್ಲಿ ದಿಬ್ಬಣ ಹೊರಡುವುದನ್ನು ನಾವಂತೂ ಕೇಳಿದ್ದಿಲ್ಲ. ಆದರೆ ಸಂಟ್ಯಾರ್ ನಿವಾಸಿ ಚೇತನ್ ಎಂಬವರು ಜೆಸಿಬಿ ಆಪರೇಟರ್ ಆಗಿದ್ದು, ಇವರ ಮದುವೆ ದಿಬ್ಬಣ ವಿವಾಹದ ಬಳಿಕ ಎರಡು ಕಿ.ಮೀ ಜೆಸಿಬಿಯಲ್ಲೇ ಸಾಗಿ ಜನರು ಕಣ್ಣು ಬಾಯಿ ಬಿಟ್ಟು ಈ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ.

ಮದುಮಗಳು ಈ ಹೊಸ ಪರಿಯ ಸಂಚಾರದಲ್ಲಿ ನಾಚಿ ಕೆನ್ನೆ ಕೇಂಪೇರಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿಬ್ಬಣ ಸಾಗಿಬಂದ ದೃಶ್ಯಗಳು ಹಲವರ ಮೊಬೈಲ್ ಗಳಲ್ಲಿ ಸೆರೆಯಾದವು.

ಚೇತನ್ ಕುಮಾರ್ ಅವರು ಮಮತ ಜೊತೆ ಕುಂಬ್ರ ಕೊಯಿಲತಡ್ಕದ ಶಿವ ಆಡಿಟೋರಿಯಂನಲ್ಲಿ ಸೋಮವಾರ ವಿವಾಹವಾದರು. ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್ ಆಗಿದ್ದು, ತನ್ನ ವಿವಾಹ ವಿನೂತನ ರೀತಿಯಲ್ಲಿ ಆಗಬೇಕೆಂದು ಕನಸು ಕಂಡಿದ್ದರು. ತಮ್ಮ ಬದುಕಿನ ದಾರಿಯಾದ ಜೆಸಿಬಿಯಲ್ಲೇ ವಿವಾಹ ದಿಬ್ಬಣ ನಡೆಸಿ ಖುಶಿಪಟ್ಟಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ