ಸಂಸ್ಕೃತ ವಿಧ್ವಾಂಸ, ಕುಂದೇಶ್ವರದ ಮಾಜಿ ಧರ್ಮದರ್ಶಿ ಡಾ. ಎಚ್. ವಿ. ನರಸಿಂಹಮೂರ್ತಿ ಇನ್ನಿಲ್ಲ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಇಲ್ಲಿನ ಐತಿಹಾಸಿಕ ಕುಂದೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ, ಭಂಡಾರ್ಕರ್ಸ್ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ. ಎಚ್. ವಿ. ನರಸಿಂಹಮೂರ್ತಿ ನಿಧನರಾಗಿದ್ದಾರೆ.  ಅಲ್ಪಕಾಲದ ಅಸೌಖ್ಯದಿಂದ ಬಳಲಿದ್ದ ಅವರು ಬೆಂಗಳೂರಿನ ತನ್ನ ಮಗನ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಚಿಕ್ಕಮಗಳೂರು  ಜಿಲ್ಲೆಯ ತೋಟದೂರು ಗ್ರಾಮದ ಮಾವಿನಕುಡಿಗೆ ಎಂಬಲಿ ಜನಿಸಿದ್ದ ಡಾ. ಎಚ್. ವಿ. ನರಸಿಂಹಮೂರ್ತಿ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಸೇರಿಕೊಂಡ ನಂತರ ಕುಂದಾಪುರವನ್ನೆ ತನ್ನ ಊರಾಗಿಸಿಕೊಂಡವರು.

ಕುಂದೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ಡಾ. ಎಚ್. ವಿ. ನರಸಿಂಹಮೂರ್ತಿ ಅವರ ಕೊಡುಗೆ ಗಣನೀಯವಾದದ್ದು. ಶೃಂಗೇರಿ ಶಾರದಾ ಪೀಠದ ಈ ಭಾಗದ ಧರ್ಮಾಧಿಕಾರಿಯಾಗಿದ್ದ ಅವರು ಶೃಂಗೇರಿ ಮಠಕ್ಕೂ ಕರಾವಳಿ ಭಾಗಕ್ಕೂ ಒಂದು ಕೊಂಡಿಯಾಗಿ ಧಾರ್ಮಿಕ ಜಾಗೃತಿ ಮೂಡಿಸಿದ್ದರು.  ಕುಂದಾಪುರದ ಹತ್ತಾರು ಸಂಸ್ಥೆಗಳಲ್ಲಿ ಡಾ. ಮೂರ್ತಿ ಸಕ್ರಿಯರಾಗಿದ್ದರು.

ಬಹುಭಾಷಾ ವಿದ್ವಾಂಸ, ನಿಗರ್ವಿ, ಸದಾ ನಗುಮೊಗದ ಡಾ. ಎಚ್.ವಿ.ನರಸಿಂಹ ಮೂರ್ತಿಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ  70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.  ಅವರ ನೂರಾರು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ.ಅವರ ಕೊನೆಯ ಪುಸ್ತಕ 'ಕನ್ನಡ- ಕರ್ನಾಟಕ ರಸಪ್ರಶ್ನೆಗಳು' ಕಂಬದಕೋಣೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಬಿಡುಗಡೆಯಾಗಿತ್ತು.

ಡಾ. ಎಚ್. ವಿ. ನರಸಿಂಹಮೂರ್ತಿ ಅವರ ಮೃತದೇಹ ಕುಂದಾಪುರಕ್ಕೆ ತರಲಾಗುತ್ತಿದ್ದು ಅಂತ್ಯ ಕ್ರಿಯೆ ಇಂದು ಕುಂದಾಪುರದಲ್ಲಿ ನಡೆಯಲಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಗೌರಿ ಲಂಕೇಶ್ ಹತ್ಯೆ; ಐದು ರಾಜ್ಯಗಳಲ್ಲಿ ಉಗ್ರ ಸಂಘಟನೆ ಜಾಲ
http://bit.ly/2yg8wFp
►►ಬೆಳ್ತಂಗಡಿ: ಮಳೆಯಿಂದ ವ್ಯಾಪಕ ಹಾನಿ. ಶಾಸಕರಿಂದ ಸಂತ್ರಸ್ತರ ಭೇಟಿ http://bit.ly/2yeghMi
►►‘ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ http://bit.ly/2JC4ZGJ
►►ಮೊಹಮದ್ ನಲಪಾಡ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ http://bit.ly/2sTQu72
►►ಪ್ರಕೃತಿ ಒಲಿದರೆ ಚಾರ್ಮಾಡಿ ಶೀಘ್ರ ಸುಸ್ಥಿತಿಗೆ. ಇಲ್ಲವಾದಲ್ಲಿ ಕಷ್ಟ ಕಷ್ಟ! http://bit.ly/2LP6pKM
►►ಹಿಂದೂ ಎಂದು ನಂಬಿಸಿ ಮದುವೆಯಾದ ಮುಸ್ಲಿಂ ಯುವಕನಿಗೆ ಥಳಿತ: http://bit.ly/2HO1h73

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ