ಹುಸೈನಬ್ಬ ಪ್ರಕರಣ ಸಿಐಡಿ ತನಿಖೆ; ತಲೆಗೆ ಹೊಡೆದು ಕೊಲೆ: ಮರಣೋತ್ತರ ಪರೀಕ್ಷೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ನೀಡಿದೆ. ಸಿಐಡಿ ಅಧಿಕಾರಿಗಳು ಉಡುಪಿಗೆ ಬಂದು ಪ್ರಕರಣದ ತನಿಖೆ ನಡೆಸಲಿದ್ದಾರೆ.


ಈ ಪ್ರಕರಣದಲ್ಲಿ ಈಗಾಗಲೇ  ಹಿರಿಯಡ್ಕ ಎಸ್ಸೈ, ಇಬ್ಬರು ಪೊಲೀಸರು ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.


ತಲೆಗೆ ಹೊಡೆದು ಕೊಲೆ: ಮರಣೋತ್ತರ ಪರೀಕ್ಷೆ ವರದಿ
ಹುಸೈನಬ್ಬ ಪ್ರಕರಣಕ್ಕೆ ಸಂಬಂಧಿಸಿ ಮರಣೋತ್ತರ ಪರೀಕ್ಷೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮಣಿಪಾಲ ಆಸ್ಪತ್ರೆ ವೈದ್ಯರು ನೀಡಿದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹುಸೈನಬ್ಬ ಅವರ ಸಾವಿಗೆ ತಲೆಗೆ ಆಗಿರುವ ಗಾಯ ಕಾರಣ ಎಂದು ಉಲ್ಲೇಖಿಸಲಾಗಿದೆ. ಇದರಿಂದ ತಲೆಗೆ ಹೊಡೆದು ಹುಸೈನಬ್ಬ ಅವರ ಕೊಲೆಗೈದಿರುವುದು ದೃಢಪಟ್ಟಿದೆ.

ಪ್ರಕರಣದ ತನಿಖಾಧಿಕಾರಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆಯವರು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಮೂಲಕ ನ್ಯಾಯಾಧೀಶ ವೆಂಕಟೇಶ್ ನಾಯ್ಕ ಟಿ. ಅವರಿಗೆ ವರದಿ ಸಲ್ಲಿಸಿದರು.

ಜೂ.18ರಂದು ಆದೇಶ
ಈ ಪ್ರಕರಣದಲ್ಲಿ ಆರೋಪಿಗಳಾದ ಪೊಲೀಸರು ಮತ್ತು ಏಳು ಮಂದಿ ಬಜರಂಗದಳ ಕಾರ್ಯಕರ್ತರ ಜಾಮೀನು ಅರ್ಜಿ ವಿಚಾರಣೆ ಸಂಬಂಧಿಸಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜೂ.18ರಂದು ಆದೇಶ ನೀಡುವುದಾಗಿ ತಿಳಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಬೆಳ್ತಂಗಡಿ: ಮಳೆಯಿಂದ ವ್ಯಾಪಕ ಹಾನಿ. ಶಾಸಕರಿಂದ ಸಂತ್ರಸ್ತರ ಭೇಟಿ
http://bit.ly/2yeghMi
►►‘ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ http://bit.ly/2JC4ZGJ
►►ಮೊಹಮದ್ ನಲಪಾಡ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ http://bit.ly/2sTQu72
►►ಪ್ರಕೃತಿ ಒಲಿದರೆ ಚಾರ್ಮಾಡಿ ಶೀಘ್ರ ಸುಸ್ಥಿತಿಗೆ. ಇಲ್ಲವಾದಲ್ಲಿ ಕಷ್ಟ ಕಷ್ಟ! http://bit.ly/2LP6pKM
►►ಹಿಂದೂ ಎಂದು ನಂಬಿಸಿ ಮದುವೆಯಾದ ಮುಸ್ಲಿಂ ಯುವಕನಿಗೆ ಥಳಿತ: http://bit.ly/2HO1h73
►►ಪಂಚಾಯತ್ ಶೌಚಾಲಯದಲ್ಲೇ ಪಿಡಿಓ ಆತ್ಮಹತ್ಯೆ: http://bit.ly/2JJi4tQ
►►ಗೆಲುವು ಕಾಂಗ್ರೆಸ್ನದ್ದು, ಮೈತ್ರಿ ಸರ್ಕಾರದ್ದಲ್ಲ. ಸಿದ್ದರಾಮಯ್ಯ ವಿಶ್ಲೇಷಣೆ: http://bit.ly/2l4mRLP
►►ನಂತೂರು ಅಪಘಾತ: ನವವಿವಾಹಿತರು ದಾರುಣ ಸಾವು: http://bit.ly/2l7glUL

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ