‘ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ

ಕರಾವಳಿ ಕರ್ನಾಟಕ ವರದಿ

ಶ್ರೀನಗರ:
ಕಾಶ್ಮೀರದಲ್ಲಿ ಶಾಂತಿಯ ಧ್ವನಿ ಎಂದೆ ಖ್ಯಾತರಾಗಿದ್ದ ಖ್ಯಾತ ಪತ್ರಕರ್ತ ಮತ್ತು ‘ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ (50) ಅವರನ್ನು ಅಪರಿಚಿತ ಬಂದೂಕುಧಾರಿಯೊಬ್ಬ ಗುರುವಾರ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಅವರ ಖಾಸಗಿ ಭದ್ರತಾ ಅಧಿಕಾರಿಯೂ ಗುಂಡೇಟಿಗೆ ಬಲಿಯಾಗಿದ್ದಾರೆ.

ಲಾಲ್‌ ಚೌಕದ ಪ್ರೆಸ್ ಕಾಲೊನಿಯಲ್ಲಿರುವ ತಮ್ಮ ಕಚೇರಿಯಿಂದ ಇಫ್ತಾರ್ ಕೂಟವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.

ಅಪರಿಚಿತರ ಗುಂಡಿನ ದಾಳಿಗೆ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ನಾಗರಿಕರೊಬ್ಬರು ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಿದೆ.

ಬುಖಾರಿ ಅವರು ಹಿಂದೆ ‘ದಿ ಹಿಂದೂ’ ಪತ್ರಿಕೆಗೆ ಕಾಶ್ಮೀರದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಕಣಿವೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಶ್ರಮಿಸುತ್ತಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಮೊಹಮದ್ ನಲಪಾಡ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
http://bit.ly/2sTQu72
►►ಪ್ರಕೃತಿ ಒಲಿದರೆ ಚಾರ್ಮಾಡಿ ಶೀಘ್ರ ಸುಸ್ಥಿತಿಗೆ. ಇಲ್ಲವಾದಲ್ಲಿ ಕಷ್ಟ ಕಷ್ಟ! http://bit.ly/2LP6pKM
►►ಹಿಂದೂ ಎಂದು ನಂಬಿಸಿ ಮದುವೆಯಾದ ಮುಸ್ಲಿಂ ಯುವಕನಿಗೆ ಥಳಿತ: http://bit.ly/2HO1h73
►►ಪಂಚಾಯತ್ ಶೌಚಾಲಯದಲ್ಲೇ ಪಿಡಿಓ ಆತ್ಮಹತ್ಯೆ: http://bit.ly/2JJi4tQ
►►ಗೆಲುವು ಕಾಂಗ್ರೆಸ್ನದ್ದು, ಮೈತ್ರಿ ಸರ್ಕಾರದ್ದಲ್ಲ. ಸಿದ್ದರಾಮಯ್ಯ ವಿಶ್ಲೇಷಣೆ: http://bit.ly/2l4mRLP
►►ನಂತೂರು ಅಪಘಾತ: ನವವಿವಾಹಿತರು ದಾರುಣ ಸಾವು: http://bit.ly/2l7glUL

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ