ಹಿಂದೂ ಎಂದು ನಂಬಿಸಿ ಮದುವೆಯಾದ ಮುಸ್ಲಿಂ ಯುವಕನಿಗೆ ಥಳಿತ. ದೂರು ದಾಖಲು

ಕರಾವಳಿ ಕರ್ನಾಟಕ ವರದಿ

ಉಳ್ಳಾಲ:
ತಾನು ಹಿಂದೂ ಎಂದು ನಂಬಿಸಿ ಯುವತಿಯೋರ್ವಳನ್ನು ಪ್ರೀತಿಸಿ ಮದುವೆಯಾದ ಮುಸ್ಲಿಮ್ ಯುವಕನ ಮೇಲೆ ಯುವತಿ ಮತ್ತು ಆಕೆಯ ಮನೆಯವರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಂಪಲದ ಯುವತಿಯನ್ನು ಮದುವೆಯಾಗಿದ್ದ ಸುಳ್ಯ ಮೂಲದ ಮಹಮ್ಮದ್‌ ಹಾರೂನ್‌ ಯಾನೆ ಬಶೀರ್‌(28) ಹಲ್ಲೆಗೊಳಗಾದವನು.

ಮೊಬೈಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಹಾರೂನ್‌ ಮೂರು ವರ್ಷಗಳ ಹಿಂದೆ ಯುವತಿಗೆ ಪರಿಚಯವಾಗಿದ್ದ. ತನಗಿಂತ  12 ವರ್ಷ ಹೆಚ್ಚು ಪ್ರಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ.

ತಾನು ಅರುಣ್‌ ಪೂಜಾರಿ ಎಂದು ಯುವಕ ಹೇಳಿಕೊಂಡಿದ್ದು ಈತನ ನಿಜ ಬಣ್ಣ ಏಳು ತಿಂಗಳ ಹಿಂದೆ ಬಯಲಾಗಿತ್ತು. ಯುವತಿಯ ಸಹೋದರಿ ಬ್ಯಾಗ್‌ ಚೆಕ್‌ ಮಾಡಿದಾಗ ಈತನ ನಿಜ ಹೆಸರು ಪತ್ತೆಯಾಗಿತ್ತು. ಈತನ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಘಟನೆ ಬಳಿಕ ಈತ ಯುವತಿಯೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಆದರೆ  ಬುಧವಾರ ಏಕಾಏಕಿ ಹಾರೂನ್‌ ಯುವತಿ ಮನೆಗೆ ತೆರಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಸಂದರ್ಭದಲ್ಲಿ ಯುವತಿಯ ಸಹೋದರಿ ಹಾರೂನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.


ಹಾರೂನ್‌ನ ಹುಡುಗಿಯ ಚಾಳಿಯಿಂದ ಆತನ ಮನೆಯವರೂ ಈತನನ್ನು ಮನೆಗೆ ಸೇರಿಸಿಕೊಂಡಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಗೆಲುವು ಕಾಂಗ್ರೆಸ್ನದ್ದು, ಮೈತ್ರಿ ಸರ್ಕಾರದ್ದಲ್ಲ. ಸಿದ್ದರಾಮಯ್ಯ ವಿಶ್ಲೇಷಣೆ:
http://bit.ly/2l4mRLP
►►ಸ್ಕಾರ್ಫ್ ಕಡ್ಡಾಯ ವಿರೋಧಿಸಿ ಇರಾನ್ ಚೆಸ್ ಟೂರ್ನಿಯಿಂದ ಹಿಂದೆ ಸರಿದ ಭಾರತೀಯ ಚೆಸ್ ಪಟು http://bit.ly/2sTz22e
►►ಗೌರಿ ಲಂಕೇಶ್ ಹತ್ಯೆ. ಮತ್ತೋರ್ವನ ಬಂಧನ. ಈತನೇ ಶಾರ್ಪ್ ಶೂಟರ್? http://bit.ly/2MgTClr
►►ನಂತೂರು ಅಪಘಾತ: ನವವಿವಾಹಿತರ ದಾರುಣ ಸಾವು: http://bit.ly/2l7glUL
►►ಪ್ರತಾಪಚಂದ್ರ ಶೆಟ್ಟಿಗೆ ಸಚಿವ ಸ್ಥಾನಕ್ಕಾಗಿ ಆಗ್ರಹ. ಸಿಟ್ಟಾದ ಡಿಸಿಎಂ ಪರಮೇಶ್ವರ್ ಹೇಳಿದ್ದೇನು?: http://bit.ly/2HGI0EV
►► ಫೇಸ್ಬುಕ್ ಚಾಟ್ಗೆ ಹೆಂಡತಿಯ ಆಕ್ಷೇಪ. ದಂಪತಿಯ ಆತ್ಮಹತ್ಯೆಯಲ್ಲಿ ಅಂತ್ಯ: http://bit.ly/2Mj1IKf
►►ದನದ ವ್ಯಾಪಾರಿ ಹುಸೈನಬ್ಬ ಶವ ಹೊರತೆಗೆದು ಮಹಜರು: http://bit.ly/2JOyWTg
►►ಏಕೋಪಾಧ್ಯಾಯ ಶಾಲೆಗಳ ವಿಲೀನ: 3,450 ಶಾಲೆಗಳು ಬಂದ್?: http://bit.ly/2sZE0K9
►►ಮುಖ್ಯಮಂತ್ರಿ ಕಛೇರಿಗಿಂತಲೂ ಹೈಟೆಕ್ ಕೊಠಡಿ ಪಡೆದ ಸಿದ್ದರಾಮಯ್ಯ: http://bit.ly/2JNW44i
►►ಕೋಳಿಗೂಡಿನಲ್ಲಿದ್ದ ಬೃಹತ್ ಹೆಬ್ಬಾವು ಜೊಸೆಫ್ ಲೂಯಿಸ್ ಅವರಿಂದ ಸೆರೆ: http://bit.ly/2HGkfga

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ