ಪಂಚಾಯತ್ ಶೌಚಾಲಯದಲ್ಲೇ ಪಿಡಿಓ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಮುನ್ನೂರು ಪಂಚಾಯತ್ ಪಿಡಿಓ ಕೃಷ್ಣಸ್ವಾಮಿ(47) ಎಂಬವರು ಗ್ರಾಮ ಪಂಚಾಯತ್ ಕಚೇರಿಯ ಶೌಚಾಲಯದಲ್ಲಿ ನೇಣಿಗೆ ಶರಣಾಗಿರುವ ಕಳವಳಕಾರಿ ಘಟನೆ ಇಂದು ವರದಿಯಾಗಿದೆ.

ಧರ್ಮಸ್ಥಳ ನಿವಾಸಿ ಶಿವರಾಮ ಬಿ.ಎಸ್ ಎಂಬವರ ಪುತ್ರ ಕೃಷ್ಣಸ್ವಾಮಿ ಅವರು ಡೆತ್ ನೋಟ್ ಬರೆದಿಟ್ಟು ಕುತ್ತಾರು ಪದವಿನಲ್ಲಿರುವ ಮುನ್ನೂರು ಪಂಚಾಯತ್ ಕಚೇರಿ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಮದ್ಯವ್ಯಸನಿಯಾಗಿದ್ದ ಕೃಷ್ಣಸ್ವಾಮಿ ಅವರು ನನ್ನ ಸಾವಿಗೆ ನಾನೇ ಕಾರಣ. ಅನುಕಂಪದ ಆಧಾರದಲ್ಲಿ ಪತ್ನಿಗೆ ಕೆಲಸ ಕೊಡಿಸಿ ಎಂದು ಡೆತ್ ನೋಟ್ ಬರೆದಿದ್ದಾರೆ.

ಪತ್ನಿ ಮತ್ತು ಓರ್ವ ಪುತ್ರಿಯನ್ನು ಕೃಷ್ಣಸ್ವಾಮಿ ಅಗಲಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಗೆಲುವು ಕಾಂಗ್ರೆಸ್ನದ್ದು, ಮೈತ್ರಿ ಸರ್ಕಾರದ್ದಲ್ಲ. ಸಿದ್ದರಾಮಯ್ಯ ವಿಶ್ಲೇಷಣೆ:
http://bit.ly/2l4mRLP
►►ಸ್ಕಾರ್ಫ್ ಕಡ್ಡಾಯ ವಿರೋಧಿಸಿ ಇರಾನ್ ಚೆಸ್ ಟೂರ್ನಿಯಿಂದ ಹಿಂದೆ ಸರಿದ ಭಾರತೀಯ ಚೆಸ್ ಪಟು http://bit.ly/2sTz22e
►►ಗೌರಿ ಲಂಕೇಶ್ ಹತ್ಯೆ. ಮತ್ತೋರ್ವನ ಬಂಧನ. ಈತನೇ ಶಾರ್ಪ್ ಶೂಟರ್? http://bit.ly/2MgTClr
►►ನಂತೂರು ಅಪಘಾತ: ನವವಿವಾಹಿತರ ದಾರುಣ ಸಾವು: http://bit.ly/2l7glUL
►►ಪ್ರತಾಪಚಂದ್ರ ಶೆಟ್ಟಿಗೆ ಸಚಿವ ಸ್ಥಾನಕ್ಕಾಗಿ ಆಗ್ರಹ. ಸಿಟ್ಟಾದ ಡಿಸಿಎಂ ಪರಮೇಶ್ವರ್ ಹೇಳಿದ್ದೇನು?: http://bit.ly/2HGI0EV
►► ಫೇಸ್ಬುಕ್ ಚಾಟ್ಗೆ ಹೆಂಡತಿಯ ಆಕ್ಷೇಪ. ದಂಪತಿಯ ಆತ್ಮಹತ್ಯೆಯಲ್ಲಿ ಅಂತ್ಯ: http://bit.ly/2Mj1IKf
►►ದನದ ವ್ಯಾಪಾರಿ ಹುಸೈನಬ್ಬ ಶವ ಹೊರತೆಗೆದು ಮಹಜರು: http://bit.ly/2JOyWTg
►►ಏಕೋಪಾಧ್ಯಾಯ ಶಾಲೆಗಳ ವಿಲೀನ: 3,450 ಶಾಲೆಗಳು ಬಂದ್?: http://bit.ly/2sZE0K9
►►ಮುಖ್ಯಮಂತ್ರಿ ಕಛೇರಿಗಿಂತಲೂ ಹೈಟೆಕ್ ಕೊಠಡಿ ಪಡೆದ ಸಿದ್ದರಾಮಯ್ಯ: http://bit.ly/2JNW44i
►►ಕೋಳಿಗೂಡಿನಲ್ಲಿದ್ದ ಬೃಹತ್ ಹೆಬ್ಬಾವು ಜೊಸೆಫ್ ಲೂಯಿಸ್ ಅವರಿಂದ ಸೆರೆ: http://bit.ly/2HGkfga

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ