ಗೆಲುವು ಕಾಂಗ್ರೆಸ್‌ನದ್ದು, ಮೈತ್ರಿ ಸರ್ಕಾರದ್ದಲ್ಲ: ಜಯನಗರದ ಗೆಲುವಿಗೆ ಸಿದ್ದರಾಮಯ್ಯ ವಿಶ್ಲೇಷಣೆ

ಕರಾವಳಿ ಕರ್ನಾಟಕ ವರದಿ

ಮೈಸೂರು:
ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರದ ಗೆಲುವಲ್ಲ, ಕಾಂಗ್ರೆಸ್ ಪಕ್ಷದ ಗೆಲುವು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಜಯನಗರದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ನಮ್ಮ ಪಕ್ಷಕ್ಕೆ ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಕೃತಜ್ಞತೆ ತಿಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ತುಂಬಾ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಹಾಗಾಗಿ ಗೆದ್ದಿದ್ದೇವೆ ಎಂದು ಸೌಮ್ಯರೆಡ್ಡಿ ಅವರಿಗೂ ಸಿದ್ದರಾಮಯ್ಯ ಧನ್ಯವಾದಗಳನ್ನು ತಿಳಿಸಿದರು.

ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಜಯನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಭರ್ಜರಿ ಜಯ ದಾಖಲಿಸಿದ್ದಾರೆ. ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ ಬಿಜೆಪಿಯ ಬಿ.ಎನ್. ಪ್ರಹ್ಲಾದ್ ಇಲ್ಲಿ ಸೋಲೊಪ್ಪಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ಇಲ್ಲಿನ ಚುನಾವಣೆ ಜೂನ್ 11ಕ್ಕೆ ಮುಂದೂಡಿತ್ತು.  ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ 2,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕ್ರಮವಾಗಿ ಸೌಮ್ಯ ರೆಡ್ಡಿ 54, 457, ಬಿ.ಎನ್. ಪ್ರಹ್ಲಾದ್ 51, 568, ರವಿಕೃಷ್ಣಾ ರೆಡ್ಡಿ 1,861 ಮತಗಳನ್ನು ಪಡೆದಿದ್ದಾರೆ.


ಇಂದು ಹೆಚ್ಚು ಓದಿದ ಸುದ್ದಿಗಳು
►►ಸ್ಕಾರ್ಫ್ ಕಡ್ಡಾಯ ವಿರೋಧಿಸಿ ಇರಾನ್ ಚೆಸ್ ಟೂರ್ನಿಯಿಂದ ಹಿಂದೆ ಸರಿದ ಭಾರತೀಯ ಚೆಸ್ ಪಟು
http://bit.ly/2sTz22e
►►ಗೌರಿ ಲಂಕೇಶ್ ಹತ್ಯೆ. ಮತ್ತೋರ್ವನ ಬಂಧನ. ಈತನೇ ಶಾರ್ಪ್ ಶೂಟರ್? http://bit.ly/2MgTClr
►►ನಂತೂರು ಅಪಘಾತ: ನವವಿವಾಹಿತರ ದಾರುಣ ಸಾವು: http://bit.ly/2l7glUL
►►ಪ್ರತಾಪಚಂದ್ರ ಶೆಟ್ಟಿಗೆ ಸಚಿವ ಸ್ಥಾನಕ್ಕಾಗಿ ಆಗ್ರಹ. ಸಿಟ್ಟಾದ ಡಿಸಿಎಂ ಪರಮೇಶ್ವರ್ ಹೇಳಿದ್ದೇನು?: http://bit.ly/2HGI0EV
►► ಫೇಸ್ಬುಕ್ ಚಾಟ್ಗೆ ಹೆಂಡತಿಯ ಆಕ್ಷೇಪ. ದಂಪತಿಯ ಆತ್ಮಹತ್ಯೆಯಲ್ಲಿ ಅಂತ್ಯ: http://bit.ly/2Mj1IKf
►►ದನದ ವ್ಯಾಪಾರಿ ಹುಸೈನಬ್ಬ ಶವ ಹೊರತೆಗೆದು ಮಹಜರು: http://bit.ly/2JOyWTg
►►ಏಕೋಪಾಧ್ಯಾಯ ಶಾಲೆಗಳ ವಿಲೀನ: 3,450 ಶಾಲೆಗಳು ಬಂದ್?: http://bit.ly/2sZE0K9
►►ಮುಖ್ಯಮಂತ್ರಿ ಕಛೇರಿಗಿಂತಲೂ ಹೈಟೆಕ್ ಕೊಠಡಿ ಪಡೆದ ಸಿದ್ದರಾಮಯ್ಯ: http://bit.ly/2JNW44i
►►ಕೋಳಿಗೂಡಿನಲ್ಲಿದ್ದ ಬೃಹತ್ ಹೆಬ್ಬಾವು ಜೊಸೆಫ್ ಲೂಯಿಸ್ ಅವರಿಂದ ಸೆರೆ: http://bit.ly/2HGkfga

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ