ನಂತೂರು ಅಪಘಾತ: ನವವಿವಾಹಿತರ ದಾರುಣ ಸಾವು

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ನಂತೂರು ಸರ್ಕಲ್ ಬಳಿ ಮಂಗಳವಾರ ಸಂಜೆ ಟೆಂಪೊ ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡ ನವವಿವಾಹಿತ ದಂಪತಿ ದಾರುಣ ಸಾವಪ್ಪಿದ್ದಾರೆ.

ಮೃತರನ್ನು ಪುತ್ತೂರು ನಿವಾಸಿ ಸಮೀರ್ ಮತ್ತು ಪತ್ನಿ ಬೆಳ್ತಂಗಡಿ ನಿವಾಸಿ ಸಮ್ರೀನ್ ಎಂದು ಗುರುತಿಸಲಾಗಿದೆ.

ಕಾಪುವಿನಿಂದ ಮಂಗಳೂರಿನ ಸಂಬಂಧಿಕರ ಮನೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ನಂತೂರು ಸರ್ಕಲ್ ಬಳಿ ಈಚರ್ ಟೆಂಪೊ ಹಿಂದಿನಿಂದ ಡಿಕ್ಕಿ ಹೊಡೆದಾಗ ಇವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಪತ್ನಿ ಸಮ್ರೀನ್(26) ಕೆಲ ಹೊತ್ತಲ್ಲೇ ಸಾವಪ್ಪಿದ್ದರು. ಸಮೀರ್(30) ರಾತ್ರಿ ಸಾವಪ್ಪಿದ್ದಾರೆ.

ಸಮೀರ್ ಮತ್ತು ಸಮ್ರೀನ್ ಅವರು ನವವಿವಾಹಿತರಾಗಿದ್ದು ಇತ್ತೀಚೆಗಷ್ಟೇ ಗಲ್ಫ್ ನಿಂದ ಬಂದಿದ್ದರು ಎಂದು ತಿಳಿದುಬಂದಿದೆ.ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಪ್ರತಾಪಚಂದ್ರ ಶೆಟ್ಟಿಗೆ ಸಚಿವ ಸ್ಥಾನಕ್ಕಾಗಿ ಆಗ್ರಹ. ಸಿಟ್ಟಾದ ಡಿಸಿಎಂ ಪರಮೇಶ್ವರ್ ಹೇಳಿದ್ದೇನು?:
http://bit.ly/2HGI0EV
►► ಫೇಸ್ಬುಕ್ ಚಾಟ್ಗೆ ಹೆಂಡತಿಯ ಆಕ್ಷೇಪ. ದಂಪತಿಯ ಆತ್ಮಹತ್ಯೆಯಲ್ಲಿ ಅಂತ್ಯ: http://bit.ly/2Mj1IKf
►►ದನದ ವ್ಯಾಪಾರಿ ಹುಸೈನಬ್ಬ ಶವ ಹೊರತೆಗೆದು ಮಹಜರು: http://bit.ly/2JOyWTg
►►ಏಕೋಪಾಧ್ಯಾಯ ಶಾಲೆಗಳ ವಿಲೀನ: 3,450 ಶಾಲೆಗಳು ಬಂದ್?: http://bit.ly/2sZE0K9
►►ಮುಖ್ಯಮಂತ್ರಿ ಕಛೇರಿಗಿಂತಲೂ ಹೈಟೆಕ್ ಕೊಠಡಿ ಪಡೆದ ಸಿದ್ದರಾಮಯ್ಯ: http://bit.ly/2JNW44i
►►ಕೋಳಿಗೂಡಿನಲ್ಲಿದ್ದ ಬೃಹತ್ ಹೆಬ್ಬಾವು ಜೊಸೆಫ್ ಲೂಯಿಸ್ ಅವರಿಂದ ಸೆರೆ: http://bit.ly/2HGkfga
►►ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ಅಪಪ್ರಚಾರ. ಘಟಾನುಘಟಿ ದೈವಕ್ಕೆ ದೂರಿತ್ತ ರಮಾನಾಥ ರೈ: http://bit.ly/2l5iOi9

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ