ಫೇಸ್‌ಬುಕ್, ವಾಟ್ಸ್ಯಾಪ್ ಚಾಟಿಂಗ್: ದಂಪತಿ ಆತ್ಮಹತ್ಯೆಯಲ್ಲಿ ಅಂತ್ಯ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ವಾಟ್ಸ್ಆ್ಯಪ್ ಹಾಗೂ ಫೇಸ್ಬುಕ್ ನಲ್ಲಿ ಗೆಳತಿಯರ ಜೊತೆ ನಿರಂತರ ಚಾಟ್ ಮಾಡುತ್ತಿದ್ದ ಬಗ್ಗೆ ಪತ್ನಿ ಪ್ರಶ್ನಿಸಿದ್ದು, ಈ ಬಗ್ಗೆ ನಡೆದ ಜಗಳ ಅವರಿಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾದ ಖೇದಕರ ಘಟನೆ ವರದಿಯಾಗಿದೆ.

ಸೋಮವಾರಪೇಟೆಯ ಅನೂಪ್ (32) ಹಾಗೂ ಸೌಮ್ಯಾ (23) ಸೋಮವಾರ ಆತ್ಮಹತ್ಯೆಗೈದವರು.
ಸೋಮವಾರ ಬೆಳಿಗ್ಗೆ ಮನೆಯಲ್ಲಿ ಯುವತಿಯೊಬ್ಬರ ಜತೆ ಅನೂಪ್ ಚಾಟ್ ಮಾಡುತ್ತಿರುವುದನ್ನು ನೋಡಿದ್ದ  ಪತ್ನಿ ಸೌಮ್ಯ ಪ್ರಶ್ನಿಸಿದಾಗ ದಂಪತಿ ನಡುವೆ ವಾಗ್ವಾದ ನಡೆದಿತ್ತು.

 ಸೌಮ್ಯ ಈ ಸಂದರ್ಭ ಅಳುತ್ತಾ ಕೋಣೆಗೆ ಹೋಗಿದ್ದು, ಅಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೈದಿದ್ದಾರೆ. ಸ್ವಲ್ಪ ಸಮಯದ ಬಳಿಕ ಇದನ್ನು ನೋಡಿದ್ದ ಅನೂಪ್, ಮತ್ತೊಂದು ಕೊಠಡಿಗೆ ಹೋಗಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆ ಆದಾಗಿನಿಂದಲೂ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದ್ದು, ಪೊಲೀಸರು ಎಲ್ಲ ವಿಷಯಗಳ ಬಗ್ಗೆಯೂ ತನಿಖೆ ನಡೆಸಲಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆ ಉದ್ಯೋಗಿ ಅನೂಪ್, ಮೂರು ವರ್ಷ ಹಿಂದೆ ಸೌಮ್ಯ ಅವರನ್ನು ಮದುವೆ ಆಗಿದ್ದು,  ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು. ಎರಡು ವರ್ಷದ ಗಂಡು ಮಗುವನ್ನು  ಸೌಮ್ಯ ಅವರ ತವರು ಮನೆಯಲ್ಲಿ ಬಿಟ್ಟಿದ್ದರು.

ದಂಪತಿ ನಡುವೆ ಜಗಳ ನಡೆಯುತ್ತಿದ್ದಾಗ ಸೋಮವಾರಪೇಟೆಯಲ್ಲಿರುವ ಸಹೋದರನಿಗೆ ಕರೆ ಮಾಡಿದ್ದ ಸೌಮ್ಯ ತನ್ನನ್ನು ತಕ್ಷಣ ಕರೆದುಕೊಂಡು ಹೋಗಬೇಕು ಇಲ್ಲದಿದ್ದರೆ  ನಾನು ಸಾಯುತ್ತೇನೆ ಎಂದಿದ್ದರು. ಸಹೋದರ ತಕ್ಷಣ  ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮನೆಯ ಬಳಿ ಹೋಗುವಂತೆ ಹೇಳಿದ್ದರು. ಸಂಬಂಧಿಕರು ಹೋದಾಗ, ಮನೆಯ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು.  ಮಧ್ಯಾಹ್ನ 2 ಗಂಟೆಗೆ ಸಹೋದರನೇ  ಮನೆಗೆ ಬಂದು  ಹಿಂದಿನ ಕಿಟಕಿ ಬಳಿ ಹೋಗಿ ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿತ್ತು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಏಕೋಪಾಧ್ಯಾಯ ಶಾಲೆಗಳ ವಿಲೀನ: 3,450 ಶಾಲೆಗಳು ಬಂದ್?:
http://bit.ly/2sZE0K9
►►ಮುಖ್ಯಮಂತ್ರಿ ಕಛೇರಿಗಿಂತಲೂ ಹೈಟೆಕ್ ಕೊಠಡಿ ಪಡೆದ ಸಿದ್ದರಾಮಯ್ಯ: http://bit.ly/2JNW44i
►►ಕೋಳಿಗೂಡಿನಲ್ಲಿದ್ದ ಬೃಹತ್ ಹೆಬ್ಬಾವು ಜೊಸೆಫ್ ಲೂಯಿಸ್ ಅವರಿಂದ ಸೆರೆ: http://bit.ly/2HGkfga
►►ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ಅಪಪ್ರಚಾರ. ಘಟಾನುಘಟಿ ದೈವಕ್ಕೆ ದೂರಿತ್ತ ರಮಾನಾಥ ರೈ: http://bit.ly/2l5iOi9
►►ಗೌರಿ ಲಂಕೇಶ್ ಹಂತಕರನ್ನು ಬಂಧಿಸಿ. ಪೊಲೀಸರಿಗೆ ಡಿಸಿಎಂ ತಾಕೀತು: http://bit.ly/2t0M39M

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ