ಮುಖ್ಯಮಂತ್ರಿ ಕಛೇರಿಗಿಂತಲೂ ಹೈಟೆಕ್ ಕೊಠಡಿ ಪಡೆದ ಸಿದ್ದರಾಮಯ್ಯ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ತಾವು ಸಮ್ಮಿಶ್ರ ಸರ್ಕಾರದ ಬಾಸ್ ಎಂಬುದನ್ನು ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಿಂತಲೂ ಹೈಟೆಕ್ ಕೋಣೆಯನ್ನು ಪಡೆದಿದ್ದಾರೆ.

ವಿಧಾನಸೌಧದ ಒಂದನೇ ಮಹಡಿಯಲ್ಲಿರುವ ಐಶಾರಾಮಿ 125ನೇ ಕೋಣೆಯನ್ನೀಗ ಸಿದ್ದರಾಮಯ್ಯನವರಿಗೆ ನೀಡಲಾಗಿದೆ. ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಈ ಕೋಣೆಯನ್ನು ಬಳಸುತ್ತಿದ್ದು ಅವರು ವಿಧಾನಸಭಾಧ್ಯಕ್ಷರಾಗಿದ್ದಾಗಲೇ ಈ ಕೋಣೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಿದ್ದರು.

 ಸಭಾಧ್ಯಕ್ಷರಾದ ರಮೇಶ್ ಕುಮಾರ್ ತಮ್ಮ ವಿವೇಚನಾ ಅಧಿಕಾರ ಪ್ರಯೋಗಿಸಿ ಈ ಕೊಠಡಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದ್ದು ಅದರ ಮುಂದೆ, "ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಸಮನ್ವಯ ಸಮಿತಿ ಅಧ್ಯಕ್ಷರು" ಎಂಬ ಬೋರ್ಡ್ ತಗಲಿಸಲಾಗಿದೆ.

ಈ ಕೋಣೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಕಚೇರಿಗಿಂತಲೂ  ವೈಭಯುತವಾಗಿದೆ. ಈ ಕೊಠಡಿ ಐಶಾರಾಮಿ ಹೋಟೆಲ್ ಕೋಣೆಯಷ್ಟು ಭವ್ಯವಾಗಿದೆ. ಸುಖಾಸೀನ, ಹವಾನಿಯಂತ್ರಕ ವ್ಯವಸ್ಥೆ, ದುಬಾರಿ ಕುರ್ಚಿಗಳು, ಬೃಹತ್ ಎಲ್‌ಇಡಿ ಪರದೆಗಳು, ಖಾಸಗಿ ಕೋಣೆ ಸೇರಿದಂತೆ ಪೂರ್ತಿ ಕೊಠಡಿ ಕಣ್ಣು ಕುಕ್ಕುವಂತಿದೆ. 

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯವನರಿಗೆ ಈಗಾಗಲೇ ಮೊದಲ ಮಹಡಿಯಲ್ಲಿ ವಿಶಾಲವಾದ ಕೊಠಡಿ ಇದೆ. ಇದೀಗ ಅವರಿಗೆ ಮತ್ತೊಂದು ಭವ್ಯ ಕೊಠಡಿ ನೀಡಲಾಗಿದೆ.


ಇದನ್ನೂ ಓದಿ:
►►ಶರತ್ ಕೊಲೆ ಪ್ರಕರಣದಲ್ಲಿ ಅಪಪ್ರಚಾರ: ಘಟಾನುಘಟಿ ದೈವಕ್ಕೆ ದೂರಿತ್ತ ರಮಾನಾಥ ರೈ:
http://bit.ly/2l5iOi9
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೆ ಪಿಸ್ತೂಲ್: ಎಸ್ಐಟಿ: http://bit.ly/2Me49xM
ಇಂದು ಹೆಚ್ಚು ಓದಿದ ಸುದ್ದಿಗಳು
►►ಹೆದ್ದಾರಿಯಲ್ಲಿ ಮಳೆ ನೀರು ತಂದ ದುರಂತ. ಕಲಾವಿದ ನಾಗೇಶ್ ಬಪ್ಪನಾಡು ಅವರ ತಾಯಿ ಮೃತ್ಯು:
http://bit.ly/2kWK7LE
►►ಪಕ್ಷದಲ್ಲಿ ನಿರ್ಧಾರ ಯಾರು ತೆಗೆದುಕೊಳ್ಳುತ್ತಾರೆಂದು ಗೊತ್ತಿಲ್ಲ. ಹೆಬ್ಬಾಳ್ಕರ್ ಅಸಮಾಧಾನ: http://bit.ly/2LBEFJy

Related Tags: Siddaramaiah Gets Swanky Office in Vidhana Soudha
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ