ಶರತ್ ಕೊಲೆ ಪ್ರಕರಣದಲ್ಲಿ ಅಪಪ್ರಚಾರ: ಘಟಾನುಘಟಿ ದೈವಕ್ಕೆ ದೂರಿತ್ತ ರಮಾನಾಥ ರೈ

ಕರಾವಳಿ ಕರ್ನಾಟಕ ವರದಿ


ಮಂಗಳೂರು:
ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಹೆಸರನ್ನು ಪದೇಪದೆ ಎಳೆದು ತರುತ್ತಿರುವ ಕಾರಣ ಬೇಸರಗೊಂಡ ಮಾಜಿ ಸಚಿವ ರಮಾನಾಥ ರೈ ಇದೀಗ ದೈವದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.  ಕೇರಳದ ಕಾಸರಗೋಡಿನ ಕಾನತ್ತೂರಿಗೆ ಭೇಟಿ‌ ನೀಡಿ‌ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ರೈ ದೈವಕ್ಕೆ ದೂರು ಕೊಟ್ಟಿರುವುದಾಗಿ ವರದಿಯಾಗಿದೆ.

ಆರೆಸ್ಸೆಸ್ ಕಾರ್ಯಕರ್ತ ಬಂಟ್ವಾಳದ ಸಜಿಪ ನಿವಾಸಿ ಶರತ್ ಮಡಿವಾಳ ಕಳೆದ ಜುಲೈ ತಿಂಗಳಲ್ಲಿ ಹತ್ಯೆಯಾಗಿದ್ದರು. ಈ ಘಟನೆ ನಡೆದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಈ ಘಟನೆಗೆ ಪರೋಕ್ಷ ಕುಮ್ಮಕ್ಕು ನೀಡಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸುತ್ತಲೇ ಬಂದಿತ್ತು. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಶರತ್ ಮಡಿವಾಳ ಕೊಲೆ ಚುನಾವಣಾ ವಿಷಯವಾಗಿಯೂ ಮಾರ್ಪಟ್ಟು ಮತಗಳ ಧ್ರುವೀಕರಣಕ್ಕೆ ಕಾರಣವಾಗಿತ್ತು .

ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸೋತ ರಮಾನಾಥ್ ರೈ ಶರತ್ ಮಡಿವಾಲ ಕೊಲೆ ಪ್ರಕರಣದಲ್ಲಿ ತನ್ನ ವಿರುದ್ಧ ನಡೆದ ಅಪಪ್ರಚಾರದಿಂದಲೆ ತನಗೆ ಸೋಲಾಗಿದೆ ಎಂದು ಭಾವಿಸಿದ್ದು ಇದೀಗ ಸತ್ಯಪ್ರಮಾಣಕ್ಕೆ ಪ್ರಸಿದ್ಧಿಗಳಿಸಿರುವ ಕಾನತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ‌ ಪ್ರಾರ್ಥನೆ ಸಲ್ಲಿಸಿದ್ದಾರೆ. ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ಷೇತ್ರದಲ್ಲಿ ದೂರು ನೀಡಿದ್ದಾರೆ.  

ಶರತ್ ಕೊಲೆ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂದು  ಸಾಬೀತುಪಡಿಸಲು ಪವಾಡ ಕ್ಷೇತ್ರಕ್ಕೆ ಕಾನತ್ತೂರಿಗೆ ಭೇಟಿ ನೀಡಿರುವ ರೈಒಂದು ವೇಳೆ ತಾನು ನಿಜವಾಗಿಯೂ ತಪ್ಪು ಮಾಡಿದ್ದರೆ ತನಗೆ ಶಿಕ್ಷೆಯಾಗಲಿ, ಇಲ್ಲವಾದಲ್ಲಿ ತನ್ನ ವಿರುದ್ಧ ಅಪಪ್ರಚಾರ ನಡೆಸಿದವರಿಗೆ ದೈವ ಶಿಕ್ಷೆ ನೀಡಲಿ ಎಂದು ಕಾಂಗ್ರೆಸ್ ಮುಖಂಡ ತುಂಬೆ ಪ್ರಕಾಶ್ ಶೆಟ್ಟಿ ಹಾಗೂ ಇತರ ಬೆಂಬಲಿಗರ ಜತೆ ತೆರಳಿ ಪ್ರಾರ್ಥನೆ‌ ಸಲ್ಲಿಸಿದ್ದಾರೆ ಎನ್ನಲಾಗಿದೆ. 

ಕೇರಳದ ಕಾಸರಗೋಡಿನಲ್ಲಿರುವ ಕಾನತ್ತೂರು ನಾಲ್ವರು ದೈವಂಗಳ ಕ್ಷೇತ್ರ ಸತ್ಯಪ್ರಮಾಣದ ವಿಚಾರದಲ್ಲಿ ಇತಿಹಾಸ ಪ್ರಸಿದ್ಧವಾಗಿದೆ. ಈ ಕ್ಷೇತ್ರದಲ್ಲಿ ದೂರಿತ್ತರೆ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಒಂದು ವೇಳೆ ಈ ದೈವಸ್ಥಾನಕ್ಕೆ ತೆರಳಿ ಸುಳ್ಳು ನುಡಿದರೆ ಅಪಾಯ ಖಚಿತ ಅನ್ನುವ ಪ್ರತೀತಿಯೂ ಇದೆ.

ಇದನ್ನೂ ಓದಿ:
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೆ ಪಿಸ್ತೂಲ್: ಎಸ್ಐಟಿ:
http://bit.ly/2Me49xM
ಇಂದು ಹೆಚ್ಚು ಓದಿದ ಸುದ್ದಿಗಳು
►►ಹೆದ್ದಾರಿಯಲ್ಲಿ ಮಳೆ ನೀರು ತಂದ ದುರಂತ. ಕಲಾವಿದ ನಾಗೇಶ್ ಬಪ್ಪನಾಡು ಅವರ ತಾಯಿ ಮೃತ್ಯು:
http://bit.ly/2kWK7LE
►►ಪಕ್ಷದಲ್ಲಿ ನಿರ್ಧಾರ ಯಾರು ತೆಗೆದುಕೊಳ್ಳುತ್ತಾರೆಂದು ಗೊತ್ತಿಲ್ಲ. ಹೆಬ್ಬಾಳ್ಕರ್ ಅಸಮಾಧಾನ: http://bit.ly/2LBEFJy
►►ಕಾಡಿನಿಂದ ನಾಡಿನ ಬೀದಿಯಲ್ಲಿ ಓಡಾಡಿದ ಒಂಟಿ ಸಲಗ: http://bit.ly/2Hy1cVj
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೆ ಪಿಸ್ತೂಲ್: ಎಸ್ಐಟಿ: http://bit.ly/2Me49xM
►►ಜೆಡಿಎಸ್ ಎಂಎಲ್ಸಿ ಅಪ್ಸರ್ ಆಗಾ ನಿಧನ: http://bit.ly/2kYTBWT
►►ಶರಣಾಗಿದ್ದ ನಕ್ಸಲ್ ನೀಲಗುಳಿ ಪದ್ಮನಾಭನನ್ನು ಮತ್ತೆ ಬಂಧಿಸಿದ ಪೊಲೀಸ್: http://bit.ly/2JkwrZp
►►ಮಾಜಿ ರಾಷ್ಟ್ರಪತಿಯಿಂದ ಆರೆಸ್ಸೆಸ್ಗೆ ಸೆಕ್ಯೂಲರಿಸಂ ಪಾಠ: http://bit.ly/2sTqJTA
►►ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ಕೂಟ ಇಲ್ಲ: http://bit.ly/2Jn6Gni
►►ಕೊಲ್ಲೂರು ಬಸ್-ಸ್ಕೂಟರ್ ಡಿಕ್ಕಿ: ಸವಾರ ಸಾವು: http://bit.ly/2kYq3IS

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ