ಗೌರಿ ಲಂಕೇಶ್ ಹಂತಕರನ್ನು ಬಂಧಿಸಿ: ಪೊಲೀಸರಿಗೆ ಡಿಸಿಎಂ ತಾಕೀತು
ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ತನಿಖೆ ಕುರಿತ ವಿವರಗಳನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಪರಮೇಶ್ವರ ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ

ಬೆಂಗಳೂರು: 
ವಿಚಾರವಾದಿ ಕಲಬುರ್ಗಿ ಮತ್ತು ಪತ್ರಕರ್ತೆ ಮತ್ತು ವಿಚಾರವಾದಿ  ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಗೃಹ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೃಹ ಇಲಾಖೆ ವಹಿಸಿಕೊಂಡ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಅವರು ಮೊದಲ ಸಭೆ ನಡೆಸಿದರು.

ಪರಮೇಶ್ವರ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಖಾತೆ ನಿಭಾಯಿಸುತ್ತಿದ್ದ ಸಂದರ್ಭದಲ್ಲಿ ಕಲಬುರ್ಗಿ ಹತ್ಯೆಯಾಗಿತ್ತು.

ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ತನಿಖೆ ಕುರಿತ ಕೆಲವು ವಿವರಗಳನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಪರಮೇಶ್ವರ ಹೇಳಿದ್ದಾರೆ. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಕುರಿತು ಚರ್ಚಿಸಲು ಶೀಘ್ರದಲ್ಲೆ ಗೃಹ, ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಲಾಗುವುದು. ಜೂನ್ 17ರ ನಂತರ ಗೃಹ ಇಲಾಖೆ ವಲಯವಾರು ಸಭೆ ಆಯೋಜಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದ್ದಾರೆ.

ಹೊಸ ಪೊಲೀಸ್ ಠಾಣೆಗಳ ಮಂಜೂರಾತಿ, ಮೂಲಸೌಕರ್ಯಗಳಿಗೆ ಅಗತ್ಯ ಅನುದಾನ, ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಮತ್ತು ತರಬೇತಿ ಕುರಿತು ಪೊಲೀಸ್ ಅಧಿಕಾರಿಗಳ ಜತೆ ಪರಮೇಶ್ವರ ಚರ್ಚಿಸಿದರು.

ಇದನ್ನೂ ಓದಿ:
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೆ ಪಿಸ್ತೂಲ್: ಎಸ್ಐಟಿ:
http://bit.ly/2Me49xM
ಇಂದು ಹೆಚ್ಚು ಓದಿದ ಸುದ್ದಿಗಳು
►►ಹೆದ್ದಾರಿಯಲ್ಲಿ ಮಳೆ ನೀರು ತಂದ ದುರಂತ. ಕಲಾವಿದ ನಾಗೇಶ್ ಬಪ್ಪನಾಡು ಅವರ ತಾಯಿ ಮೃತ್ಯು:
http://bit.ly/2kWK7LE
►►ಪಕ್ಷದಲ್ಲಿ ನಿರ್ಧಾರ ಯಾರು ತೆಗೆದುಕೊಳ್ಳುತ್ತಾರೆಂದು ಗೊತ್ತಿಲ್ಲ. ಹೆಬ್ಬಾಳ್ಕರ್ ಅಸಮಾಧಾನ: http://bit.ly/2LBEFJy
►►ಕಾಡಿನಿಂದ ನಾಡಿನ ಬೀದಿಯಲ್ಲಿ ಓಡಾಡಿದ ಒಂಟಿ ಸಲಗ: http://bit.ly/2Hy1cVj
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೆ ಪಿಸ್ತೂಲ್: ಎಸ್ಐಟಿ: http://bit.ly/2Me49xM
►►ಜೆಡಿಎಸ್ ಎಂಎಲ್ಸಿ ಅಪ್ಸರ್ ಆಗಾ ನಿಧನ: http://bit.ly/2kYTBWT
►►ಶರಣಾಗಿದ್ದ ನಕ್ಸಲ್ ನೀಲಗುಳಿ ಪದ್ಮನಾಭನನ್ನು ಮತ್ತೆ ಬಂಧಿಸಿದ ಪೊಲೀಸ್: http://bit.ly/2JkwrZp
►►ಮಾಜಿ ರಾಷ್ಟ್ರಪತಿಯಿಂದ ಆರೆಸ್ಸೆಸ್ಗೆ ಸೆಕ್ಯೂಲರಿಸಂ ಪಾಠ: http://bit.ly/2sTqJTA
►►ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ಕೂಟ ಇಲ್ಲ: http://bit.ly/2Jn6Gni
►►ಕೊಲ್ಲೂರು ಬಸ್-ಸ್ಕೂಟರ್ ಡಿಕ್ಕಿ: ಸವಾರ ಸಾವು: http://bit.ly/2kYq3IS

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ