ಪಕ್ಷದಲ್ಲಿ ಸಚಿವಾಕಾಂಕ್ಷಿಗಳ ಬಂಡಾಯವಿದ್ದರೂ ದೂರದಲ್ಲಿ ಸಿದ್ದರಾಮಯ್ಯ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು
: ಕಾಂಗ್ರೆಸ್ ಪಕ್ಷದಲ್ಲಿ ಸಚಿವಾಕಾಂಕ್ಷಿಗಳ ಬಂಡಾಯ ಶಮನಗೊಳ್ಳುವ ಲಕ್ಷಣಗಳೆ ಕಾಣೀಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ದೂರದ ಬಾದಾಮಿಯಲ್ಲಿ ಮೊಕ್ಕಾಂ ಮಾಡಿರುವ ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೂ ಭಿನ್ನಮತಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸೂರವಿರುವುದು ಕೆಲವು ನಾಯಕರ ಅಸಹನೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರು ಅತೃಪ್ತರನ್ನು ಕರೆದು ಮಾತನಾಡಿಸಿಲ್ಲ. ಬಾದಾಮಿ ಕ್ಷೇತ್ರದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ಪಕ್ಷದ ಆಂತರಿಕ ಸಂಘರ್ಷದಿಂದ ದೂರ ಉಳಿದಿದ್ದಾರೆ. ಅವರು ಬಾದಾಮಿಯಲ್ಲಿ ಐದು ದಿನ ಉಳಿಯುವ ಅವಶ್ಯಕತೆಯಾದರೂ ಏನು. ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮ ಆಗಿದ್ದರೂ, ಒಂದೆರಡು ದಿನ ಅಲ್ಲಿದ್ದು ವಾಪಸ್ ಬರಬೇಕಿತ್ತು ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಹರಿದಾಡುತ್ತಿದೆ.

ಅತೃಪ್ತರ ಬಣದಲ್ಲಿಸಿದ್ದರಾಮಯ್ಯ ಜೊತೆ ಇದ್ದವರೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಪಕ್ಷದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಅವರು ದೂರ ಉಳಿಯಲು ಕಾರಣವೇನು ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ.

ಅಸಮಾಧಾನ ಶಮನ ಮಾಡಬೇಕಾದವರೇ ಹೀಗೆ ದೂರ ಉಳಿದರೆ ಹೇಗೆ. ಇದು ಹೀಗೆ, ಆದರೆ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಮೈತ್ರಿ ಸರ್ಕಾರದ ಮೇಲೂ ಪರಿಣಾಮ ಬೀರಲಿದೆ ಎಂದೂ ಕೆಲವು ನಾಯಕರು ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ.


ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಮಾತ್ರ ಅತೃಪ್ತರ ಜತೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಪಕ್ಷದ ಶಾಸಕರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಬಿಕ್ಕಟ್ಟು ಸೃಷ್ಟಿಯಾದ ಹೊತ್ತಿನಲ್ಲಿ ಹಿರಿಯರೆಲ್ಲ ತೆರೆಮರೆಗೆ ಸರಿದಿರುವುದು ಎರಡನೇ ಹಂತದ ನಾಯಕರ ಕೋಪಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.
 
ಇಂದು ಹೆಚ್ಚು ಓದಿದ ಸುದ್ದಿಗಳು
►►ಹೆದ್ದಾರಿಯಲ್ಲಿ ತುಂಬಿದ ಮಳೆ ನೀರು ತಂದ ದುರಂತ: ಕಾರು ಹೊಂಡಕ್ಕೆ ಬಿದ್ದು ಮಹಿಳೆ ಸಾವು
 
http://bit.ly/2kWK7LE
►►ಪಕ್ಷದಲ್ಲಿ ನಿರ್ಧಾರ ಯಾರು ತೆಗೆದುಕೊಳ್ಳುತ್ತಾರೆಂದು ಗೊತ್ತಿಲ್ಲ. ಹೆಬ್ಬಾಳ್ಕರ್ ಅಸಮಾಧಾನ: http://bit.ly/2LBEFJy
►►ಕಾಡಿನಿಂದ ನಾಡಿನ ಬೀದಿಯಲ್ಲಿ ಓಡಾಡಿದ ಒಂಟಿ ಸಲಗ: http://bit.ly/2Hy1cVj
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೆ ಪಿಸ್ತೂಲ್: ಎಸ್ಐಟಿ: http://bit.ly/2Me49xM
►►ಜೆಡಿಎಸ್ ಎಂಎಲ್ಸಿ ಅಪ್ಸರ್ ಆಗಾ ನಿಧನ: http://bit.ly/2kYTBWT
►►ಶರಣಾಗಿದ್ದ ನಕ್ಸಲ್ ನೀಲಗುಳಿ ಪದ್ಮನಾಭನನ್ನು ಮತ್ತೆ ಬಂಧಿಸಿದ ಪೊಲೀಸ್: http://bit.ly/2JkwrZp
►►ಮಾಜಿ ರಾಷ್ಟ್ರಪತಿಯಿಂದ ಆರೆಸ್ಸೆಸ್ಗೆ ಸೆಕ್ಯೂಲರಿಸಂ ಪಾಠ: http://bit.ly/2sTqJTA
►►ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ಕೂಟ ಇಲ್ಲ: http://bit.ly/2Jn6Gni
►►ಕೊಲ್ಲೂರು ಬಸ್-ಸ್ಕೂಟರ್ ಡಿಕ್ಕಿ: ಸವಾರ ಸಾವು: http://bit.ly/2kYq3IS
►►ಡಿವೈಡರ್ಗೆ ಗುದ್ದಿದ ಬೈಕ್: ಸವಾರ ಸಾವು: http://bit.ly/2JyDpt6
►►ಸುನಂದಾ ಪುಷ್ಕರ್ ಸಾವು ಪ್ರಕರಣ. ಆರೋಪಿಯಾಗಿ ಶಶಿ ತರೂರ್ ವಿಚಾರಣೆ : http://bit.ly/2JmtnIu
►►ಲೈಂಗಿಕ ಕಿರುಕುಳ, ಬ್ಲ್ಯಾಕ್ಮೇಲ್ ಆರೋಪ: ಓಲಾ ಚಾಲಕ ಸೆರೆ: http://bit.ly/2LsaiVL
►►ಹುಸೈನಬ್ಬ ಸಾವಿನ ಪ್ರಕರಣ: ನಮ್ಮ ಕಾರ್ಯಕರ್ತರನ್ನು ಮುಟ್ಟಬೇಡಿ: ಸಂಸದೆ ಶೋಭಾ ಎಚ್ಚರಿಕೆ: http://bit.ly/2sOARgm

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ