ಹೆದ್ದಾರಿಯಲ್ಲಿ ತುಂಬಿದ ಮಳೆ ನೀರು ತಂದ ದುರಂತ: ಕಾರು ಹೊಂಡಕ್ಕೆ ಬಿದ್ದು ಮಹಿಳೆ ಸಾವು
ಹೆದ್ದಾರಿಯಲ್ಲಿ ತುಂಬಿದ್ದ ಮಳೆ ನೀರು ಕಾರಿನ ಗಾಜಿನ ಮೇಲೆ ಎರಚಲ್ಪಟ್ಟ ಪರಿಣಾಮ ಹತೋಟಿ ತಪ್ಪಿದ ಕಾರು ಹೊಂಡಕ್ಕೆ ಉರುಳಿದೆ.

ಕರಾವಳಿ ಕರ್ನಾಟಕ ವರದಿ

ಮಂಗಳೂರು
: ಕಾರ್ನಾಡು ರಾಷ್ಟ್ರೀಯ ಹೆದ್ದಾರಿಯ ಭಾರತ್ ಬೆಂಝ್ ಸರ್ವಿಸಿಂಗ್ ಸೆಂಟರ್  ಸಮೀಪ  ಕಾರು ರಸ್ತೆ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದಾಗ  ಓರ್ವ ಮಹಿಳೆ ಮೃತ ಪಟ್ಟ ಕಳವಳಕಾರಿ ಘಟನೆ ವರದಿಯಾಗಿದೆ.  ಅಪ್ಪಿ ಎ. ಶೇರಿಗಾರ್ (83) ಸಾವಪ್ಪಿದವರು.

ಅಪ್ಪಿ ಶೇರಿಗಾರ್ ಅವರು ಮೂಲ್ಕಿ ಬಪ್ಪನಾಡು ನಾಗಸ್ವರ ವಿದ್ವಾನ್ ದಿ| ಬಪ್ಪನಾಡು ಅಣ್ಣು ಶೇರಿಗಾರ್ ಅವರ ಪತ್ನಿ. ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ ಕಲಾವಿದ ನಾಗೇಶ್ ಬಪ್ಪನಾಡು ಅವರ ತಾಯಿಯಾಗಿದ್ದು, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಶನಿವಾರ ಮಧ್ಯಾಹ್ನ ಮೊಮ್ಮಗನ ಜತೆಗೆ ಸುರತ್ಕಲ್ ವೈದ್ಯರನ್ನು ಭೇಟಿಯಾಗಿ ಮರಳುತ್ತಿದ್ದಾಗ ಭಾರೀ ಮಳೆಯಿಂದಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಹತ್ತಡಿ ಆಳದ ಹೊಂಡಕ್ಕೆ ಬಿತ್ತು. ಈ ಸಂದರ್ಭ ಚಾಲಕ ಸುರೇಂದ್ರ ಹಾಗೂ ಮೊಮ್ಮಗ ತುಷಾರ್  ಅಪಾಯದಿಂದ ಪಾರಾಗಿದ್ದಾರೆ.

ಅಪ್ಪಿಯವರನ್ನು ಪುತ್ರ ನಾಗೇಶ್  ಅವರು ಕೂಡಲೇ  ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಿಲ್ಲ. ಹೆದ್ದಾರಿಯಲ್ಲಿ  ತುಂಬಿದ್ದ ಮಳೆ  ನೀರು ಕಾರಿನ ಗಾಜಿನ ಮೇಲೆ ಎರಚಲ್ಪಟ್ಟ  ಪರಿಣಾಮ ಚಾಲಕನ ಹತೋಟಿ ತಪ್ಪಿದ ಕಾರು ಹೊಂಡಕ್ಕೆ ಉರುಳಿದೆ ಎನ್ನಲಾಗಿದೆ. ಹೆದ್ದಾರಿಯಲ್ಲಿ  ಈ ರೀತಿ ಮಳೆ ನೀರು ಅಲ್ಲಲ್ಲಿ ನಿಂತು ಉಂಟಾಗುವ ಸಮಸ್ಯೆಗಳ ಬಗ್ಗೆ ಈ ಸಂದರ್ಭ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಉತ್ತರ ಸಂಚಾರ ಪೊಲೀಸರು  ಪ್ರಕರಣ  ದಾಖಲಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಪಕ್ಷದಲ್ಲಿ ನಿರ್ಧಾರ ಯಾರು ತೆಗೆದುಕೊಳ್ಳುತ್ತಾರೆಂದು ಗೊತ್ತಿಲ್ಲ. ಹೆಬ್ಬಾಳ್ಕರ್ ಅಸಮಾಧಾನ:
http://bit.ly/2LBEFJy
►►ಕಾಡಿನಿಂದ ನಾಡಿನ ಬೀದಿಯಲ್ಲಿ ಓಡಾಡಿದ ಒಂಟಿ ಸಲಗ: http://bit.ly/2Hy1cVj
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೆ ಪಿಸ್ತೂಲ್: ಎಸ್ಐಟಿ: http://bit.ly/2Me49xM
►►ಜೆಡಿಎಸ್ ಎಂಎಲ್ಸಿ ಅಪ್ಸರ್ ಆಗಾ ನಿಧನ: http://bit.ly/2kYTBWT
►►ಶರಣಾಗಿದ್ದ ನಕ್ಸಲ್ ನೀಲಗುಳಿ ಪದ್ಮನಾಭನನ್ನು ಮತ್ತೆ ಬಂಧಿಸಿದ ಪೊಲೀಸ್: http://bit.ly/2JkwrZp
►►ಮಾಜಿ ರಾಷ್ಟ್ರಪತಿಯಿಂದ ಆರೆಸ್ಸೆಸ್ಗೆ ಸೆಕ್ಯೂಲರಿಸಂ ಪಾಠ: http://bit.ly/2sTqJTA
►►ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ಕೂಟ ಇಲ್ಲ: http://bit.ly/2Jn6Gni
►►ಕೊಲ್ಲೂರು ಬಸ್-ಸ್ಕೂಟರ್ ಡಿಕ್ಕಿ: ಸವಾರ ಸಾವು: http://bit.ly/2kYq3IS
►►ಡಿವೈಡರ್ಗೆ ಗುದ್ದಿದ ಬೈಕ್: ಸವಾರ ಸಾವು: http://bit.ly/2JyDpt6
►►ಸುನಂದಾ ಪುಷ್ಕರ್ ಸಾವು ಪ್ರಕರಣ. ಆರೋಪಿಯಾಗಿ ಶಶಿ ತರೂರ್ ವಿಚಾರಣೆ : http://bit.ly/2JmtnIu
►►ಲೈಂಗಿಕ ಕಿರುಕುಳ, ಬ್ಲ್ಯಾಕ್ಮೇಲ್ ಆರೋಪ: ಓಲಾ ಚಾಲಕ ಸೆರೆ: http://bit.ly/2LsaiVL
►►ಹುಸೈನಬ್ಬ ಸಾವಿನ ಪ್ರಕರಣ: ನಮ್ಮ ಕಾರ್ಯಕರ್ತರನ್ನು ಮುಟ್ಟಬೇಡಿ: ಸಂಸದೆ ಶೋಭಾ ಎಚ್ಚರಿಕೆ: http://bit.ly/2sOARgm

Related Tags: Mulki accident Kannada News, Karnataka News, Coastal Karnataka News, Karavali News, Karavali Karnataka, Latest Kannada News, ಮೂಲ್ಕಿ ಅಪಘಾತ, ಮಹಿಳೆ ಸಾವು, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ