ಪಕ್ಷದಲ್ಲಿ ನಿರ್ಧಾರ ಯಾರು ತೆಗೆದುಕೊಳ್ಳುತ್ತಾರೆಂದು ಗೊತ್ತಿಲ್ಲ: ಹೆಬ್ಬಾಳ್ಕರ್ ಅಸಮಾಧಾನ

ಕರಾವಳಿ ಕರ್ನಾಟಕ ವರದಿ

ಬೆಳಗಾವಿ:
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಿ ಮತ್ತು ಕೆಪಿಸಿಸಿ ಮಹಿಳಾ ಘಟಕದ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾರು, ಹೇಗೆ ನಿರ್ಧಾರ ಕೈಗೊಳ್ಳುತ್ತಾರೆ. ನಿರ್ಧಾರವನ್ನು ಮತ್ತೆ ಯಾರು ಮುರಿಯುತ್ತಾರೆ ಎನ್ನುವುದೇ ತಿಳಿಯದಾಗಿದೆ. 20 ವರ್ಷ ಪಕ್ಷಕ್ಕಾಗಿ ದುಡಿಯುತ್ತಿರುವೆ. ಆದರೂ ಪಕ್ಷದ ಮಾನದಂಡ ನನಗೆ ತಿಳಿಯದಾಗಿದೆ. ಕಾಣುವ ಮತ್ತು ಕಾಣದ ಕೈಗಳು ಕೆಲಸ ಮಾಡಿ ನನಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದಿಲ್ಲವೆಂದು ಹೈಕಮಾಂಡ್ ನಿರ್ಧಾರ ಕೈಗೊಂಡಿತ್ತು. ಹೀಗಾಗಿ ಹಿರಿಯ ನಾಯಕಿ ಮೋಟಮ್ಮ ಅವರಿಗೆ ಸ್ಥಾನ ತಪ್ಪಿತ್ತು. ಆದರೆ ಏಕಾಏಕಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿರುವುದು ಅಚ್ಚರಿ ತಂದಿದೆ. ಕಬ್ಬಿಣದ ಕಡಲೆಯಾಗಿದ್ದ ಬೆಳಗಾವಿಯಲ್ಲಿ ಗೆಲುವು ಸಾಧಿಸಿದ್ದೇನೆ. ಅದರೂ, ನನ್ನ ಗೆಲುವು ಪರಿಗಣಿಸದೇ ಸಚಿವ ಸ್ಥಾನ ನೀಡದಿರುವುದಕ್ಕೆ ನೋವುಂಟಾಗಿದೆ. ನನಗೆ ಅಗಿರುವ ಅನ್ಯಾಯದ ವಿರುದ್ಧ ಪಕ್ಷದ ಸಭೆಯಲ್ಲಿ ಪ್ರಶ್ನಿಸುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೆ ಪಿಸ್ತೂಲ್: ಎಸ್‌ಐಟಿ  
http://bit.ly/2Me49xM
►►ಜೆಡಿಎಸ್ ಎಂಎಲ್‌ಸಿ ಅಪ್ಸರ್ ಆಗಾ ನಿಧನ http://bit.ly/2kYTBWT
ಇಂದು ಹೆಚ್ಚು ಓದಿದ ಸುದ್ದಿಗಳು
►►ಕೊಲ್ಲೂರು ಬಸ್-ಸ್ಕೂಟರ್ ಡಿಕ್ಕಿ: ಸವಾರ ಸಾವು
http://bit.ly/2kYq3IS
►►ಮಾಜಿ ರಾಷ್ಟ್ರಪತಿಯಿಂದ ಆರೆಸ್ಸೆಸ್ಗೆ ಸೆಕ್ಯೂಲರಿಸಂ ಪಾಠ: http://bit.ly/2sTqJTA
►►ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಇಲ್ಲ: http://bit.ly/2Jn6Gni
►►ಡಿವೈಡರ್ಗೆ ಗುದ್ದಿದ ಬೈಕ್: ಸವಾರ ಸಾವು: http://bit.ly/2JyDpt6
►►ಸುನಂದಾ ಪುಷ್ಕರ್ ಸಾವು ಪ್ರಕರಣ. ಆರೋಪಿಯಾಗಿ ಶಶಿ ತರೂರ್ ವಿಚಾರಣೆ : http://bit.ly/2JmtnIu

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ