ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೆ ಪಿಸ್ತೂಲ್: ಎಸ್‌ಐಟಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಚಿಂತಕ ಎಂ.ಎಂ.ಕಲ್ಬುರ್ಗಿ ಇಬ್ಬರೂ ಹತ್ಯೆ ಒಂದೇ ಪಿಸ್ತೂಲಿನಿಂದ ನಡೆದಿದೆ ಎಂಬುದನ್ನು ಕರ್ನಾಟಕ ವಿಧಿವಿಜ್ಞಾನ ಪ್ರಯೋಗಾಲಯ ಖಾತ್ರಿ ಪಡಿಸಿದೆ ಎಂದು ವಿಶೇಷ ತನಿಖಾ ದಳದ ಮೂಲಗಳು ತಿಳಿಸಿವೆ.

ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಕೊಲೆಗಳ ಮಧ್ಯೆ ನಂಟಿದೆ ಎಂದು ಮೊದಲ ಬಾರಿಗೆ ಅಧಿಕೃತವಾಗಿ ಖಾತ್ರಿ ಪಟ್ಟಿದೆ. ಎಂ. ಎಂ. ಕಲ್ಬುರ್ಗಿ ಅವರನ್ನು ಧಾರವಾಡದ ಅವರ ಮನೆಯ ಬಳಿಯೇ ಮೂರು ವರ್ಷದ ಹಿಂದೆ ಹತ್ಯೆಯಾಗಿದ್ದರು. ಗೌರಿ ಲಂಕೇಶ್ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಬಳಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊಲೆ ಮಾಡಲಾಗಿತ್ತು.

ಎರಡೂ ಪ್ರಕರಣದಲ್ಲಿ ಗುಂಡು ಹಾರಿಸಿರುವುದು ಒಂದೇ ಮಾದರಿ ನಾಡ ಪಿಸ್ತೂಲಿನಿಂದ ಎಂದು ವರದಿಗಳು ಹೇಳಿವೆ. .
 
ಮದ್ದೂರಿನ ಕೆ.ಟಿ.ನವೀನ್ ಕುಮಾರ್ ನನ್ನು ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಮಾಡಲಾಗಿದೆ. ಚಿಂತಕ ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಕೂಡ ಸಂಚು ಮಾಡಲಾಗಿತ್ತು ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ.

ಸೆರೆ ಹಿಡಿದಿರುವ ಇತರ ಆರೋಪಿಗಳು ಹಾಗೂ ಸನಾತನ ಸಂಸ್ಥೆ ಜತೆಗೆ ನಂಟು ಹೊಂದಿದ್ದಾರೆ ಎನ್ನಲಾಗಿದ್ದು ಸಂಸ್ಥೆಯನ್ನು ನಿಷೇಧಿಸಬೇಕು ಹಾಗೂ ಸನಾತನ ಸಂಸ್ಥೆಯ ಕಾರ್ಯಕ್ರಮಗಳನ್ನು ನಡೆಸಲು ಸ್ಥಳಾವಕಾಶ ನೀಡುತ್ತಿರುವ ಪ್ರಮುಖ ಸಮುದಾಯದ ಮಠಗಳು ಇನ್ನಾದರೂ ಅಂಥದ್ದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹ ಹೆಚ್ಚಾಗುತ್ತಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಜೆಡಿಎಸ್ ಎಂಎಲ್‌ಸಿ ಅಪ್ಸರ್ ಆಗಾ ನಿಧನ
http://bit.ly/2kYTBWT
►►ಕೊಲ್ಲೂರು ಬಸ್-ಸ್ಕೂಟರ್ ಡಿಕ್ಕಿ: ಸವಾರ ಸಾವು http://bit.ly/2kYq3IS
►►ಮಾಜಿ ರಾಷ್ಟ್ರಪತಿಯಿಂದ ಆರೆಸ್ಸೆಸ್ಗೆ ಸೆಕ್ಯೂಲರಿಸಂ ಪಾಠ: http://bit.ly/2sTqJTA
►►ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಇಲ್ಲ: http://bit.ly/2Jn6Gni
►►ಡಿವೈಡರ್ಗೆ ಗುದ್ದಿದ ಬೈಕ್: ಸವಾರ ಸಾವು: http://bit.ly/2JyDpt6
►►ಸುನಂದಾ ಪುಷ್ಕರ್ ಸಾವು ಪ್ರಕರಣ. ಆರೋಪಿಯಾಗಿ ಶಶಿ ತರೂರ್ ವಿಚಾರಣೆ : http://bit.ly/2JmtnIu
 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ