ಹುಸೈನಬ್ಬ ಸಾವಿನ ಪ್ರಕರಣ: ನಮ್ಮ ಕಾರ್ಯಕರ್ತರನ್ನು ಮುಟ್ಟಬೇಡಿ: ಸಂಸದೆ ಎಚ್ಚರಿಕೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ದನದ ವ್ಯಾಪಾರಿ ಹುಸೈನಬ್ಬ ಸಾವಿಗೆ ಸಂಬಂಧಿಸಿ ವಿಧಿ ವಿಜ್ನಾನ ವರದಿ ಬರುವ ತನಕ ನಮ್ಮ ಕಾರ್ಯಕರ್ತರ ಬಂಧನ ನಿಲ್ಲಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಎಫ್.ಎಸ್.ಎಲ್ ವರದಿಯಲ್ಲಿ ಹುಸೈನಬ್ಬ ಹೃದಯಾಘಾತದಿಂದ ಸತ್ತಿರುವುದಾಗಿ ಬಂದರೆ ಈ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಉಳಿಯುವುದಿಲ್ಲ. ಯಾರೂ ಆರೋಪಿಗಳಾಗುವುದಿಲ್ಲ. ವರದಿ ಬಂದ ಬಳಿಕ ನಾವು ಯಾವ ತನಿಖೆ ಆಗಬೇಕೆಂದು ನಿರ್ಧರಿಸುತ್ತೇವೆ ಎಂದು ಶೋಭಾ ನುಡಿದರು.

ಹುಸೈನಬ್ಬ ಸಾವಿನ ಪ್ರಕರಣದಲ್ಲಿ ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರನ್ನು ರಾಜ್ಯ ಸರಕಾರ ಬಂಧಿಸಿ ಹಿಂಸಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಸಂಸದೆ ಶೋಭಾ ಮಾತನಾಡಿದರು.

ದನ ಸಾಗಾಟ ಮಾಡುತ್ತಿದ್ದ ಸ್ಕಾರ್ಪಿಯೊವನ್ನು ಅದರಲ್ಲಿ ಸಾಗಾಟ ಮಾಡುತ್ತಿದ್ದವರೇ ಜಖಂ ಮಾಡಿದ್ದೇ ವಿನ: ನಮ್ಮ ಕಾರ್ಯಕರ್ತರು ಮಾಡಿದ್ದಲ್ಲ ಎಂದ ಸಂಸದೆ ಈ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರು ಕಾನೂನು ಪ್ರಕಾರವೇ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಸಂಘಟನೆಯಲ್ಲಿ ಕಾನೂನನ್ನು ಯಾವುದೇ ಕಾರಣಕ್ಕೂ ಕೈಗೆ ತೆಗೆದುಕೊಳ್ಳಬಾರದು ಎಂದು ನಿರ್ಧಾರ ಆಗಿದೆ ಎಂದರು.

ದನಗಳ ಜೀವಕ್ಕೆ ಬೆಲೆ ಇಲ್ಲವೆ? ರಘುಪತಿ ಪ್ರಶ್ನೆ
ಈ ಪ್ರಕರಣದಲ್ಲಿ ದನಗಳ ಸಾಗಾಟ ಸಂದರ್ಭ ಎರಡು ದನಗಳು ಸತ್ತಿವೆ. ಅಂದರೆ ಅವುಗಳ ಕೊಲೆಗೈಯಲಾಗಿದೆ. ಹುಸೈನಬ್ಬ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ. ದನಗಳ ಜೀವಕ್ಕೆ ಬೆಲೆ ಇಲ್ಲವೆ ಎಂದು ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದು, ಈ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಜರಂಗದಳದ ಸುನಿಲ್ ಕೆ. ಆರ್, ವಿಎಚ್ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತಾಡಿದರು.


ಇಂದು ಹೆಚ್ಚು ಓದಿದ ಸುದ್ದಿಗಳು
►►ಡಿವೈಡರ್ಗೆ ಗುದ್ದಿದ ಬೈಕ್: ಸವಾರ ಸಾವು:
http://bit.ly/2JyDpt6
►►ಸುನಂದಾ ಪುಷ್ಕರ್ ಸಾವು ಪ್ರಕರಣ. ಆರೋಪಿಯಾಗಿ ಶಶಿ ತರೂರ್ ವಿಚಾರಣೆ : http://bit.ly/2JmtnIu
►►ಲೈಂಗಿಕ ಕಿರುಕುಳ, ಬ್ಲ್ಯಾಕ್ಮೇಲ್ ಆರೋಪ: ಓಲಾ ಚಾಲಕ ಸೆರೆ: http://bit.ly/2LsaiVL
►►ಕೇಂದ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಇಲ್ಲ. ಪೇಜಾವರ ಟೀಕೆಗೆ ಸಂಸದೆ ಶೋಭಾ ಪ್ರತಿಕ್ರಿಯೆ: http://bit.ly/2Jw8rSA
►►ಹುಸೈನಬ್ಬ ಪ್ರಕರಣ: ಕಾರ್ಯಕರ್ತರ ಬಂಧಿಸದಂತೆ ಶೋಭಾ ವಾರ್ನಿಂಗ್: http://bit.ly/2LWtXOB
►►ಮಟ್ಟು ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆರೋಪ. ಕಾನೂನು ಕ್ರಮಕ್ಕೆ ದೊರೆಸ್ವಾಮಿ ಮನವಿ: http://bit.ly/2J9IZCR
►►ಗ್ವಾಟೆಮಾಲಾದಲ್ಲಿ ಭೀಕರ ಜ್ವಾಲಾಮುಖಿ ಸ್ಫೋಟ: 65 ಸಾವು: http://bit.ly/2JkOGdv
►►ಯುಪಿಎಸ್ಸಿ ಪರೀಕ್ಷೆ ಬರೆಯಲು ಹೋಗಿದ್ದ ಕನ್ನಡಿಗ ದೆಹಲಿಯಲ್ಲಿ ಆತ್ಮಹತ್ಯೆ: http://bit.ly/2svIMiY
►►ಸೌದಿ ಅಪಘಾತ: ಬಂಟ್ವಾಳದ ನವವಿವಾಹಿತ ಮೃತ್ಯು: http://bit.ly/2Jn89NT
►►ಮಟ್ಟು ವಿರುದ್ಧದ ಆರೋಪ ಜನಚಳವಳಿಗೆ ಬಗೆದ ದ್ರೋಹ. ಭಾಸ್ಕರ್ ಪ್ರಸಾದ್ ವಿರುದ್ಧ ಸಂಘಟನೆಗಳ ಆಕ್ರೋಶ: http://bit.ly/2sFN5YC
►► ಹುಸೈನಬ್ಬ ಪ್ರಕರಣ: ಟ್ವಿಟರ್ ನಲ್ಲಿ ಉಡುಪಿ ಶಾಸಕರಿಗೆ ಕುಟುಕಿದ ಮಧ್ವರಾಜ್: http://bit.ly/2J6PB4V
►►ಹುಸೈನಬ್ಬ ಪ್ರಕರಣ: ಬಂಧಿತ ಪೊಲೀಸರು ಕಾರವಾರ ಜೈಲಿಗೆ: http://bit.ly/2kKtiU8
►►ಪೊಲೀಸರ ಸಮ್ಮುಖದಲ್ಲೆ ನಡೆದಿತ್ತು ಹುಸೈನಬ್ಬ ಕೊಲೆ: http://bit.ly/2HgW9rR
►►ದನದ ವ್ಯಾಪಾರಿ ಕೊಲೆ ಶಂಕೆ: ಸಂಘಪರಿವಾರದ ನಾಲ್ವರ ಸೆರೆ:
http://bit.ly/2sBuInw
►►ದನದ ವ್ಯಾಪಾರಿ ಹುಸೈನಬ್ಬ ಸಂಶಯಾಸ್ಪದ ಸಾವು. ಹಿರಿಯಡ್ಕ ಎಸ್ಐ ಅಮಾನತು: http://bit.ly/2J98kJm
►►ಉಡುಪಿ: ದನದ ವ್ಯಾಪಾರಿ ಸಾವಿನಲ್ಲಿ ಬಜರಂಗಿ ಕೈವಾಡ? http://bit.ly/2J1oO6f
►►ಬಂಟ್ವಾಳ: ಮಾವನಿಂದಲೇ ಅಳಿಯನ ಕೊಲೆ http://bit.ly/2LSVssw
►►ಇಫ್ತಾರ್ ಕೂಟಕ್ಕೆ ಪೇಜಾವರ ಶ್ರೀ ರೆಡಿ, ಮುಸ್ಲಿಮರಿಗಿಲ್ಲ ಗಡಿಬಿಡಿ? http://bit.ly/2He05Kg
►► ಪ್ರಧಾನಿ ಮೋದಿ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ: ಪೇಜಾವರ ಶ್ರೀ ಗರಂ http://bit.ly/2HaCYjF
►►ಪಿಲಾರ್ ಚರ್ಚ್ ಧರ್ಮಗುರುವಾಗಿ ಫಾ. ವಿಶಾಲ್ ಲೋಬೊ ಅಧಿಕಾರ ಸ್ವೀಕಾರ  http://bit.ly/2szx8TJ
►►ರಿಕ್ಷಾ- ಬೈಕ್ ಡಿಕ್ಕಿ: ರಾಜ್ಯಮಟ್ಟದ ಪ್ರತಿಭಾವಂತ ಕಬಡ್ಡಿ ಪಟು ಸಾವು: http://bit.ly/2HeWYSe
►►ಮೂಡುಬಿದಿರೆ: ಬೈಕ್ ಮುಖಾಮುಖಿ ಢಿಕ್ಕಿ. ಓರ್ವ ಸಾವು: http://bit.ly/2sAqWL2
►►ಮಟ್ಟು ವಿರುದ್ಧದ ಆರೋಪ ಜನಚಳವಳಿಗೆ ಬಗೆದ ದ್ರೋಹ. ಭಾಸ್ಕರ್ ಪ್ರಸಾದ್ ವಿರುದ್ಧ ಸಂಘಟನೆಗಳ ಆಕ್ರೋಶ: http://bit.ly/2sFN5YC
►►ಇಸ್ರೇಲ್ ಗುಂಡಿನ ದಾಳಿಗೆ ಪ್ಯಾಲೇಸ್ತೀನ್ ನರ್ಸ್ ಬಲಿ: http://bit.ly/2J55uZI
►►ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ರಾಜೀನಾಮೆ : http://bit.ly/2xyOEgq
►►ಸರ್ಕಾರಿ ಬಸ್ಗಳ ಭೀಕರ ಮುಖಾಮುಖಿ ಢಿಕ್ಕಿ: http://bit.ly/2JpHWOG
►►ಪೇಜಾವರರಿಗೆ ಕೇಂದ್ರ ಸರ್ಕಾರದ ಕೆಲಸಗಳ ಮಾಹಿತಿ ಇಲ್ಲ.ಸಿ.ಟಿ. ರವಿ ಪ್ರತಿಕ್ರಿಯೆ http://bit.ly/2HcFmGw
►►ಮಂಗಳೂರು: ತುಂಡರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ: http://bit.ly/2LSASbN
►►ಬೆಂಗಳೂರಿನಲ್ಲಿ ಕ್ರೇನ್-ಸ್ಕೂಟರ್ ಅಪಘಾತ: ಮಲ್ಪೆ ಯುವಕ ಸಾವು http://bit.ly/2HaCYjF
►►ಮಂಗಳೂರು: ಫ್ಲ್ಯಾಟ್ನಿಂದ ಬಿದ್ದು ಸಾವಪ್ಪಿದ ಮಗು ಡ್ಯಾಡಿಗೆ ಹೇಳಿದ್ದೇನು?: http://bit.ly/2LL5dbY
►►ಮಂಗಳೂರಿನಲ್ಲಿ ಚರ್ಚ್ ದಾಳಿ ವದಂತಿ: ಇಬ್ಬರ ಬಂಧನ: http://bit.ly/2Jktibm
►►ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ತಬಸ್ಸುಮ್ ಹಸನ್ ಆಯ್ಕೆ: http://bit.ly/2J4JLNu
►►ಒಂದೇ ದುಪಟ್ಟಾ ಬಿಗಿದುಕೊಂಡು ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆಗೈದ ಪ್ರೇಮಿಗಳು!: http://bit.ly/2ssZ3o5
►►ಮಂಗಳೂರು: ಎಂಟನೇ ಮಹಡಿಯಿಂದ ಬಿದ್ದು ಬಾಲಕಿ ಸಾವು: http://bit.ly/2sumIVn
►►ಕಾರಿನ ಮೇಲೆ ಬಂಟ್ವಾಳ ಪೊಲೀಸ್ ಗುಂಡಿನ ದಾಳಿ, ಮೂವರ ಸೆರೆ, ಇಬ್ಬರು ಪರಾರಿ : http://bit.ly/2JqzP4a
 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ