ಪಡುಬಿದ್ರೆ: ನೆರೆ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ ಶವ ಪತ್ತೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಮಂಗಳವಾರ ಸುರಿದ ಭಾರೀ ಮಳೆಗೆ ನೀರಿನಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಬೆಳಿಗ್ಗೆ ಪತ್ತೆಯಾಗಿದೆ. ಪಾದೆ ಬೆಟ್ಟುವಿನ ಉಮೇಶ್ ಮತ್ತು ಆಶಾ ಆಚಾರ್ಯ ದಂಪತಿಯ ಪುತ್ರಿ ನಿಧಿ ಆಚಾರ್ಯ(9) ಎಂದು ಬಾಲಕಿಯನ್ನು ಗುರುತಿಸಲಾಗಿದೆ.

ನಿಧಿ ಪಡುಬಿದ್ರೆಯ ಎಸ್ಬಿವಿಪಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

ಮಂಗಳವಾರ ಭಾರೀ ಮಳೆ ಸುರಿದ ಕಾರಣ ಮಧ್ಯಾಹ್ನ ಮೂರು ಗಂಟೆಗೆ ಶಾಲೆ ಬಿಟ್ಟಿತ್ತು. ನಿಧಿ ತನ್ನ ಸಹೋದರಿ ನಿಶಾ ಜೊತೆ ಸೈಕಲ್ ನಲ್ಲಿ ಮನೆಗೆ ಮರಳುವಾಗ ಎರ್ಮಾಳು ತೆಂಕ ಪಾದೆಬೆಟ್ಟು ಆಲಡೆ ಬಳಿ ಪಟ್ಲ ಕಿರು ಸೇತುವೆ ದಾಟುವ ಸಂದರ್ಭ ಸೇತುವೆ ಮೇಲೆ ನೀರು ಉಕ್ಕಿ ಹರಿದಿದ್ದು ಇಬ್ಬರೂ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದರು.

ನಿಶಾ ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಆಕೆಯನ್ನು ರಕ್ಷಿಸಿದರು. ಆದರೆ ನಿಧಿ ನೀರಿನಲ್ಲಿ ಕೊಚ್ಚಿಹೋಗಿದ್ದು ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಶೋಧ ಕಾರ್ಯ ನಡೆಸಿದ್ದು, ಬೆಳಿಗ್ಗೆ ಶವ ಸಿಕ್ಕಿದೆ.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ವಿದ್ಯಾರ್ಥಿನಿ ಮನೆಗೆ ತೆರಳಿ ಸಾಂತ್ವನ ಹೇಳಿದ್ದು, ನಾಲ್ಕು ಲಕ್ಷ ರೂ. ಪರಿಹಾರ ಘೊಷಿಸಿದ್ದಾರೆ.

►►ಮಂಗಳೂರು ಮಳೆ: ಇಬ್ಬರು ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ http://bit.ly/2LIcYPT
►►ಸಾಲು ಮರದ ತಿಮ್ಮಕ್ಕ ಸಾವಿನ ವದಂತಿ ಹಬ್ಬಿಸಿದ ಚಾಲಕ ಸೆರೆ http://bit.ly/2kxgq3I
►►ಕರಾವಳಿ ಮಳೆ ಹಾನಿ: ಸಕಲ ನೆರವು. ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ
 
http://bit.ly/2sjd1tm

Related Tags: Nidhi death ,Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಮಳೆ, ಮಳೆ ಪರಿಹಾರ, ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಿಧಿ ಆಚಾರ್ಯ, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ