ತೂತುಕುಡಿ ಗಲಭೆ ಅಡ್ಡಿ. ಖಾಸಗಿ ಹೊಟೆಲ್‌ನಲ್ಲಿ ಸಿಎಸ್‌ಕೆ ಸಂಭ್ರಮಾಚರಣೆ

ಕರಾವಳಿ ಕರ್ನಾಟಕ ವರದಿ

ಚೆನ್ನೈ:
3ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಭ್ರಮಾಚರಣೆಗೆ ತೂತು ಗೋಲಿಬಾರ್ ಘಟನೆ ಅಡ್ಡಿಯಾಗಿದೆ.

ಐಪಿಎಲ್ ಟ್ರೋಫಿ ಗೆಲುವಿನ ಬಳಿಕ ಎಂಎಸ್ ಧೋನಿ ನೇತೃತ್ವದ ಚೆನ್ನೈ ತಂಡ ಚೆನ್ನೈಗೆ ವಾಪಸ್ ಆಗಿದ್ದು,  ಮಧ್ಯಾಹ್ನ ನಾಲ್ಕು ಗಂಟೆಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಚೆನ್ನೈ ತಂಡದ ಮಾಲೀಕರಾದ ಇಂಡಿಯಾ ಸೆಮೆಂಟ್ಸ್ ಸಂಸ್ಥೆಯ ಅಧಿಕಾರಿಗಳು ಆಟಗಾರರನ್ನು ಸ್ವಾಗತಿಸಿದ್ದು, ಆಟಗಾರರನ್ನು ನೇರವಾಗಿ ಖಾಸಗಿ ಹೊಟೆಲ್ ಗೆ ಕರೆದೊಯ್ದಿದ್ದಾರೆ. ಸಿಎಸ್ ಕೆ ತಂಡ ಮಾಲೀಕರಾದ ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಪ್ರಶಸ್ತಿ ವಿಜೇತ ಚೆನ್ನೈ ತಂಡದ ಆಟಗಾರರಿಗೆ ವಿಶೇಷ ಪಾರ್ಟಿ ಆಯೋಜಿಸಿದ್ದರು.

ಈ ಸಂಭ್ರಮಾಚರಣೆಯನ್ನು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಕ್ರೀಡಾಂಗಣವನ್ನು ಪ್ರೇಕ್ಷಕರಿಗೆ ಮುಕ್ತವಾಗಿಸಿ, ಉಚಿತ ಪ್ರವೇಶ ನೀಡಿ ಕ್ರೀಡಾಂಗಣದಲ್ಲಿ ವಿಶೇಷ ಸಂಭ್ರಮಾಚರಣೆ ನಡೆಸಲು ಚಿಂತಿಸಲಾಗಿತ್ತು. ಆದರೆ ತಮಿಳುನಾಡಿನಲ್ಲಿನ ಪ್ರಸ್ತುತ ಪರಿಸ್ಥಿತಿಗಳಿಂದಾಗಿ ಈ ನಿರ್ಧಾರದಿಂದ ಸಿಎಸ್ ಕೆ ಆಡಳಿತ ಮಂಡಳಿ ಹಿಂದೆ ಸರಿದಿತ್ತು.

ತಮಿಳುನಾಡಿನಲ್ಲಿ ಸ್ಟೈರ್ಲೈಟ್ ವಿರುದ್ಧ ಜನ ದಂಗೆದಿದ್ದು, ಇತ್ತೀಚೆಗೆ ನಡೆದ ಗೋಲಿಬಾರ್ ನಲ್ಲಿ 13 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಇಂದು ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಏರ್ಪಡಿಸಿದೆ, ಅಭಿಮಾನಿಗಳ ಸೋಗಿನಲ್ಲಿ ದುಷ್ಕರ್ಮಿಗಳು ಆಗಮಿಸಿ ಅಲ್ಲಿ ಗಲಭೆ ಎಬ್ಬಿಸುವ ಸಾಧತೆ ಇದೆ. ಅಲ್ಲದೆ ಆಟಗಾರರ ಭದ್ರತೆಗೂ ಧಕ್ಕೆಯಾಗುವ ಸಾಧ್ಯತೆ ಇತ್ತು. ಇದೇ ಕಾರಣಕ್ಕೆ ತಂಡ ಸಂಭ್ರಮಾಚರಣೆಯನ್ನು ಖಾಸಗಿ ಹೊಟೆಲ್ ನಲ್ಲಿ ನಡೆಸಿದೆ.

ಈ ಹಿಂದೆ ಕಾವೇರಿ ವಿಚಾರವಾಗಿ ಪ್ರತಿಭಟನೆ ನಡೆಸಿದ್ದ ಪ್ರತಿಭಟನಾಕಾರರು, ಈ ಹಿಂದೆ ಚೆನ್ನೈ ನಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಕ್ಕೆ ಅಡ್ಡಿ ಪಡಿಸಿದ್ದರು. ಇದೇ ಕಾರಣಕ್ಕೆ ಉಳಿದ ಎಲ್ಲ ಪಂದ್ಯಗಳೂ ಚೆನ್ನೈನಿಂದ ಪುಣೆಗೆ ರವಾನೆಯಾಗಿತ್ತು.

ಇಂದು ಹೆಚ್ಚು ಓದಿದ ಸುದ್ದಿಗಳು
►► ಉದಯ್ ಹೊಳ್ಳ ರಾಜ್ಯದ ನೂತನ ಅಡ್ವೊಕೇಟ್ ಜನರಲ್  http://bit.ly/2IVlWvL

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ