ಇಂಧನ, ವಿಮೆ ದರ ಹೆಚ್ಚಳ ವಿರೋಧಿಸಿ ಜೂ.18ರಿಂದ ಲಾರಿ ಮುಷ್ಕರ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ದೇಶಾದ್ಯಂತ ಜೂ.18 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಆಲ್‌ ಇಂಡಿಯಾ ಕಾನ್‌ಫೆಡರೇಷನ್‌ ಆಫ್ ಗೂಡ್ಸ್‌ ವೆಹಿಕಲ್‌ ಓನರ್ ಅಸೋಸಿಯೇಷನ್‌ ತೀರ್ಮಾನಿಸಿದೆ. ಪೆಟ್ರೋಲ್‌, ಡೀಸೆಲ್‌ ಹಾಗೂ ವಾಹನಗಳ ಥರ್ಡ್‌ ಪಾರ್ಟಿ ಪಾಲಿಸಿ ಪ್ರೀಮಿಯಂ ದರಗಳ ಹೆಚ್ಚಳ ವಿರೋಧಿಸಿ ಈ ಮುಷ್ಕರ ನಡೆಯಲಿದೆ.

ಕಳೆದ ಐದು ವರ್ಷಗಳಿಂದ ಡಿಸೇಲ್‌ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮತ್ತೂಂದು ಕಡೆ ವಾಹನಗಳ ಮೂರನೇ ವ್ಯಕ್ತಿ ಪಾಲಿಸಿ ಪ್ರೀಮಿಯಂ ಅನ್ನು 2002ರಿಂದಲೂ ನಿರಂತರವಾಗಿ ಏರಿಕೆ ಮಾಡಿಕೊಂಡು ಬಂದಿದೆ. ಇದನ್ನು ನಿಯಂತ್ರಿಸುವಂತೆ ಕೇಂದ್ರಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಚನ್ನಾರೆಡ್ಡಿ ಆರೋಪಿಸಿದರು.

ಶೇ.80ರಷ್ಟು ಲಾರಿ ಮಾಲೀಕರು ಬ್ಯಾಂಕ್‌ನಿಂದ ಸಾಲ ಪಡೆದು ವಾಹನಗಳನ್ನು ಖರೀದಿ ಮಾಡಿರುತ್ತಾರೆ. ಲಾರಿ ಮಾಲೀಕರು ಸಾಮಾನ್ಯವಾಗಿ ಬಾಡಿಗೆ ದರವನ್ನು ದಿನನಿತ್ಯದ ಬೇಡಿಕೆ ಮತ್ತು ಪೂರೈಕೆ ಆಧಾರದ ಮೇಲೆ ನಿಗದಿಪಡಿಸುತ್ತಾರೆ. ಇನ್ನು ಡಿಸೇಲ್‌ ಖರ್ಚು ಮಾಡುತ್ತಿರುವ ಹಣವನ್ನು ಬಾಡಿಗೆಯಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ ಕಟ್ಟಬೇಕಿದೆ ಹಾಗೂ ಪ್ರತಿ ವರ್ಷದಿಂದ ವರ್ಷಕ್ಕೆ ಟೋಲ್‌ ದರ ಏರಿಕೆಯಾಗುತ್ತಿದೆ.

ಈ ವೆಚ್ಚಗಳನ್ನು ನಿರ್ವಹಿಸಿಕೊಂಡು, ಲಾರಿಗಳಿಗೆ ಕಟ್ಟಬೇಕಾದ ಮಾಸಿಕ ಕಂತುಗಳ ಹಣ ಕಟ್ಟಲು ಸಾಧ್ಯವಾಗದೇ ಬಹಳಷ್ಟು ಮಾಲೀಕರು ಲಾರಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆಗಳನ್ನು ಸಾಕಷ್ಟು ಬಾರಿ ಮನವರಿಕೆ ಮಾಡಿಕೊಟ್ಟಿದ್ದರೂ,ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಜೂ.18 ರೊಳಗೆ ನಮ್ಮ ಮನವಿಯನ್ನು ಅಂಗೀಕರಿಸದಿದ್ದರೆ, ಅಂದು ರಾತ್ರಿಯಿಂದಲೇ ದೇಶವ್ಯಾಪ್ತಿ ಅನಿರ್ಧಿಷ್ಟಾವಧಿ ಕಾಲ ಸರಕು-ಸಾಗಣೆ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಇಂದು ಹೆಚ್ಚು ಓದಿದ ಸುದ್ದಿಗಳು
►►ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌
http://bit.ly/2x8SgFW
►►ದಕ್ಷಿಣ ಕನ್ನಡ: ನಿಫಾ ವೈರಸ್‌ ಭೀತಿ–ಆತಂಕ ಬೇಡ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಹೇಳಿಕೆ
http://bit.ly/2IZSV19
►►ಇಂದು ಮೈತ್ರಿ ಸರ್ಕಾರ ವಿಶ್ವಾಸಮತ. ಸ್ಪೀಕರ್ ಆಯ್ಕೆ http://bit.ly/2GO2DOW
►►ಮಕ್ಕಳ ಕಳ್ಳನೆಂದು ಭಾವಿಸಿ ಯುವಕನ ಕೊಂದ ಜನ! ಚಾಮರಾಜಪೇಟೆಯಲ್ಲಿ ಪೈಶಾಚಿಕ ಕೃತ್ಯ
 
http://bit.ly/2IMIytV
►►ಡಿ.ಕೆ.ಶಿವಕುಮಾರ್'ಗೆ ಮಂತ್ರಿಗಿರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ? http://bit.ly/2x7GVpD
►►ರೈತರ ಸಾಲ ಮನ್ನಾ ಮಾಡದಿದ್ದರೆ ಹೋರಾಟ: ಯಡಿಯೂರಪ್ಪ ಎಚ್ಚರಿಕೆ http://bit.ly/2IGZWo3
►►ಪೋಟೋಗ್ರಾಫರ್ ದೀಪಕ್ ಅನುಮಾನಾಸ್ಪದ ಸಾವು http://bit.ly/2J26LzT
►►37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಆಗುತ್ತಾ?►►ದೇವೇಗೌಡರ ಸಲಹೆ ಏನು? http://bit.ly/2rZ7IiW

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ