ಇಂದು ಮೈತ್ರಿ ಸರ್ಕಾರ ವಿಶ್ವಾಸಮತ. ಸ್ಪೀಕರ್ ಆಯ್ಕೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು
: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ವಿಧಾನಸಭೆಯಲ್ಲಿ ಶುಕ್ರವಾರ ಮಧ್ಯಾಹ್ನ ವಿಶ್ವಾಸ ಮತ ಯಾಚಿಸಲಿದ್ದಾರೆ.

ಇದಕ್ಕೂ ಮುನ್ನವೇ  ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ವಿರೋಧ ಪಕ್ಷ ಬಿಜೆಪಿ, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಬಹುಮತ ಸಾಬೀತಿಗೆ ಮೊದಲೇ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳಬೇಕಾದ ಸವಾಲನ್ನು ಜೆಡಿಎಸ್‌–ಕಾಂಗ್ರೆಸ್ ಮೈತ್ರಿಕೂಟ ಎದುರಿಸಬೇಕಾಗಿದೆ.

ಮಧ್ಯಾಹ್ನ 12.15ಕ್ಕೆ ಕಲಾಪ ಆರಂಭವಾಗಲಿದೆ. ಸ್ಪೀಕರ್‌ ಸ್ಥಾನಕ್ಕೆ ಶ್ರೀನಿವಾಸಪುರ ಕ್ಷೇತ್ರದ ಕೆ.ಆರ್‌. ರಮೇಶ್‍ಕುಮಾರ್ ಮತ್ತು ಬಿಜೆಪಿಯಿಂದ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್‌. ಸುರೇಶ್‍ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ವೇಳೆ ಅಡ್ಡ ಮತದಾನ ನಡೆಯದೇ ಇದ್ದರೆ ರಮೇಶ್‍ಕುಮಾರ್ ಆಯ್ಕೆ ಖಚಿತ.

ಮೈತ್ರಿ ಸರ್ಕಾರಕ್ಕೆ ಇನ್ನೂ ‘ಆಪರೇಷನ್ ಕಮಲ’ದ ಭೀತಿ ದೂರವಾಗಿಲ್ಲ.  ಸಭಾಧ್ಯಕ್ಷರ ಚುನಾವಣೆ ಮತ್ತು ವಿಶ್ವಾಸ ಮತ ಯಾಚನೆಗೆ ರೆಸಾರ್ಟ್‍ನಿಂದಲೇ ನೇರವಾಗಿ ಶಾಸಕರು ಬರಲಿದ್ದಾರೆ. ಸರ್ಕಾರ ಬಹುಮತ ಸಾಬೀತುಗೊಳಿಸುವ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಬಳಿಕವಷ್ಟೇ ಎಲ್ಲ ಶಾಸಕರು ನಿರಾಳವಾಗಲಿದ್ದಾರೆ.

ಸರಳ ಬಹುಮತ ಇಲ್ಲದೆಯೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್‌. ಯಡಿಯೂರಪ್ಪ ಇದೇ 20ರಂದು ಬಹುಮತ ಸಾಬೀತು ಪಡಿಸಲು ಮುಂದಾಗಿದ್ದರು. ಅದು ಅಸಾಧ್ಯ ಎಂಬುದು ಗೊತ್ತಾದ ಕೂಡಲೇ ವಿಶ್ವಾಸ ಮತ ಯಾಚನೆಯ ಪ್ರಸ್ತಾವವನ್ನು ವಾಪಸ್ ಪಡೆದ ಅವರು, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಉಪ ಮುಖ್ಯಮಂತ್ರಿ ಸಿಗದ ಕಾರಣಕ್ಕೆ ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಶಾಸಕರೂ ಅವರ ಬೆನ್ನಿಗೆ ನಿಂತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ಈ ಅಸಮಾಧಾನ ಸ್ಫೋಟಗೊಳ್ಳುವ ಆತಂಕ ಇರುವುದರಿಂದ ಸಚಿವರ ಅವಧಿಯನ್ನು ಎರಡು ವರ್ಷಕ್ಕೆ ಸೀಮಿತಗೊಳಿಸುವ ಸೂತ್ರದ ಬಗ್ಗೆಯೂ ಕಾಂಗ್ರೆಸ್‍ನಲ್ಲಿ ಚರ್ಚೆ ನಡೆಯುತ್ತಿದೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಹಿಲ್ಟನ್‌ ರೆಸಾರ್ಟ್‌ನಲ್ಲಿ ಗುರುವಾರ ಸಂಜೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕಾಂಗ ಸಭೆ ನಡೆಯಿತು. ಒಗ್ಗಟ್ಟು ಪ್ರದರ್ಶನದ ಜೊತೆಗೆ ಸಂಪುಟ ವಿಸ್ತರಣೆ ಕುರಿತೂ ಚರ್ಚೆ ನಡೆಯಿತು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಮಕ್ಕಳ ಕಳ್ಳನೆಂದು ಭಾವಿಸಿ ಯುವಕನ ಕೊಂದ ಜನ! ಚಾಮರಾಜಪೇಟೆಯಲ್ಲಿ ಪೈಶಾಚಿಕ ಕೃತ್ಯ
 
http://bit.ly/2IMIytV
►►ಡಿ.ಕೆ.ಶಿವಕುಮಾರ್'ಗೆ ಮಂತ್ರಿಗಿರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ? http://bit.ly/2x7GVpD
►►ರೈತರ ಸಾಲ ಮನ್ನಾ ಮಾಡದಿದ್ದರೆ ಹೋರಾಟ: ಯಡಿಯೂರಪ್ಪ ಎಚ್ಚರಿಕೆ http://bit.ly/2IGZWo3
►►ಪೋಟೋಗ್ರಾಫರ್ ದೀಪಕ್ ಅನುಮಾನಾಸ್ಪದ ಸಾವು http://bit.ly/2J26LzT
►►37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಆಗುತ್ತಾ?►►ದೇವೇಗೌಡರ ಸಲಹೆ ಏನು? http://bit.ly/2rZ7IiW
►►ನಾನು ಯಾರಿಗೂ ಭಾರವಾಗಿ ಬದುಕಬಾರದು http://bit.ly/2J0grLe
►►ಕಾಂಗ್ರೆಸ್ 22, ಜೆಡಿಎಸ್ಗೆ 12 ಮಂತ್ರಿ ಸ್ಥಾನ http://bit.ly/2IC8YTn
►►ಹಳೆಯದ್ದನ್ನು ಮರೆತು ಮುಂದೆ ಹೆಜ್ಜೆ ಹಾಕೋಣ ಕುಮಾರಸ್ವಾಮಿಗೆ ಸೋನಿಯಾ ಹಿತನುಡಿ http://bit.ly/2s06aFg
►►ಜಾನುವಾರ ಸಾಗಾಟಗಾರರ ಮೇಲೆ ಹಲ್ಲೆ: ಆರೋಪಿಗಳ ಬಂಧನ http://bit.ly/2IUiRex
►►ಕೇರಳದಲ್ಲಿ ನಿಪಾಹ್ ವೈರಸ್ ಗೆ 13 ಮಂದಿ ಬಲಿ. ಹೇಗೆ ಹರಡುತ್ತೆ ವೈರಸ್? : http://bit.ly/2Iy4YDs
►►ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭಕ್ಕೆ ಕೇಜ್ರಿವಾಲ್, ಮಾಯಾವತಿ  http://bit.ly/2x1D65g

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ