ಕರ್ನಾಟಕ: ಡಿ.ಕೆ.ಶಿವಕುಮಾರ್'ಗೆ ಮಂತ್ರಿಗಿರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ?

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಡಿ.ಕೆ.ಶಿವಕುಮಾರ್ ಅವರಿಗೆ ಯಾವ ಸ್ಥಾನ ದೊರೆಯಲಿದೆ ಎಂಬುದರ ಕುರಿತು ಜನತೆಯಲ್ಲಿ ಕುತೂಹಲಗಳು ಮೂಡತೊಡಗಿವೆ.

ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಶಿವಕುಮಾರ್ ನಿನ್ನೆಯೇ ಪ್ರಮಾಣವಚನ ಸ್ವೀಕಾರ ಮಾಡಲು ಬಯಸಿದ್ದರು. ಹೀಗೊಂದು ಬೇಡಿಕೆ ಕೂಡ ಹೈಕಮಾಂಡ್ ಮುಂದೆ ಇಟ್ಟಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ, ಒಂದೇ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡುವ ನಿರ್ಧಾರ ಮಾಡಿದ್ದ ಕಾಂಗ್ರೆಸ್ ನಾಯಕರು ಶಿವಕುಮಾರ್ ಅವರ ಬೇಡಿಕೆಯನ್ನು ಈಡೇರಿಸಿರಲಿಲ್ಲ.

ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದ ಶಿವಕುಮಾರ್ ಅವರು, ಮಾಧ್ಯಮಗಳ ಮುಂದೆ ಮಾತನಾಡಿ ನಾನಿಲ್ಲಿ ಫುಟ್'ಬಾಲ್ ಆಡಲು ಬಂದಿಲ್ಲ ಚದುರಂಗ ಆಡುತ್ತೇನೆಂದು ಹೇಳುವ ಮೂಲಕ ಸಿಟ್ಟನ್ನು ಹೊರಹಾಕಿದ್ದರು.

ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿ ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಿಕೆ ಶಿವಕುಮಾರ್ ಅವರು, ಪಕ್ಷದ ಶಾಸಕರನ್ನು ಬಿಗಿ ಬಂದೋಬಸ್ತ್'ನಲ್ಲಿ ಇರಿಸಿಕೊಳ್ಳುವ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದರು. ಇದರಿಂತ ಆಪತ್ತಿನ ಕಾಲದಲ್ಲಿ ಪಕ್ಷದ ಪರವಾಗಿ ನಿಂದ ಆಪ್ತರಕ್ಷ ಎಂಬಂತೆ ಶಿವಕುಮಾರ್ ಅವರು ಬಿಂಬಿತರಾಗಿದ್ದಾರೆ.

ಉಪಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಹೈಕಮಾಂಡ್ ಮೇಲೆ ಶಿವಕುಮಾರ್ ಅವರು ತೀವ್ರವಾಗಿ ಗರಂ ಆಗಿದ್ದು, ಶಿವಕುಮಾರ್ ಅವರ ಕೋಪವನ್ನು ದೂರ ಮಾಡಲು ಪಕ್ಷ ಇದೀಗ ಸಚಿವ ಪದವಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಅವಕಾಶವನ್ನು ನೀಡಿದ್ದು, ಈ ಪ್ರಸ್ತಾಪವನ್ನು ಡಿಕೆಶಿಯವರು ಸಮ್ಮತಿಸಿದ್ದಾರೆಂದು ತಿಳಿದುಬಂದಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ರೈತರ ಸಾಲ ಮನ್ನಾ ಮಾಡದಿದ್ದರೆ ಹೋರಾಟ: ಯಡಿಯೂರಪ್ಪ ಎಚ್ಚರಿಕೆ
http://bit.ly/2IGZWo3
►►ಪೋಟೋಗ್ರಾಫರ್ ದೀಪಕ್ ಅನುಮಾನಾಸ್ಪದ ಸಾವು http://bit.ly/2J26LzT
►►37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಆಗುತ್ತಾ?►►ದೇವೇಗೌಡರ ಸಲಹೆ ಏನು? http://bit.ly/2rZ7IiW
►►ನಾನು ಯಾರಿಗೂ ಭಾರವಾಗಿ ಬದುಕಬಾರದು http://bit.ly/2J0grLe
►►ಕಾಂಗ್ರೆಸ್ 22, ಜೆಡಿಎಸ್ಗೆ 12 ಮಂತ್ರಿ ಸ್ಥಾನ http://bit.ly/2IC8YTn
►►ಹಳೆಯದ್ದನ್ನು ಮರೆತು ಮುಂದೆ ಹೆಜ್ಜೆ ಹಾಕೋಣ ಕುಮಾರಸ್ವಾಮಿಗೆ ಸೋನಿಯಾ ಹಿತನುಡಿ http://bit.ly/2s06aFg
►►ಜಾನುವಾರ ಸಾಗಾಟಗಾರರ ಮೇಲೆ ಹಲ್ಲೆ: ಆರೋಪಿಗಳ ಬಂಧನ http://bit.ly/2IUiRex
►►ಕೇರಳದಲ್ಲಿ ನಿಪಾಹ್ ವೈರಸ್ ಗೆ 13 ಮಂದಿ ಬಲಿ. ಹೇಗೆ ಹರಡುತ್ತೆ ವೈರಸ್? : http://bit.ly/2Iy4YDs

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ