ರೈತರ ಸಾಲ ಮನ್ನಾ ಮಾಡದಿದ್ದರೆ ಹೋರಾಟ: ಯಡಿಯೂರಪ್ಪ ಎಚ್ಚರಿಕೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ವಾಗ್ದಾನ ಮಾಡಿದ್ದಾರೆ. ಈ ಭರವಸೆಯನ್ನು ಈಡೇರಿಸದಿದ್ದರೆ, ರೈತ ಸಮುದಾಯವನ್ನು ಬೀದಿಗಿಳಿಸಿ ನಿಮ್ಮನ್ನು ಬಟಾಬಯಲು ಮಾಡುತ್ತೇನೆ ಎಂದು ಬಿ.ಎಸ್, ಯಡಿಯೂರಪ್ಪ ಗುಡುಗಿದ್ದಾರೆ.

ಬೆಂಗಳೂರಿನ ಆನಂದ್‌ರಾವ್ ವೃತ್ತದಲ್ಲಿ ಬಿಜೆಪಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ.

ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ರಾಜ್ಯಕ್ಕೇ ಕರಾಳ ದಿನ. ಹಾಗಾಗಿಯೇ, ನಾವು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುತ್ತಿದ್ದೇವೆ. ರೈತರ ಸಾಲ ಮನ್ನಾ ಮಾಡದಿದ್ದರೆ, ರಾಜ್ಯ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.

ಅನುಕೂಲ ಸಿಂಧು ರಾಜಕಾರಣ ಮಾಡುತ್ತಿರುವ ಜೆಡಿಎಸ್– ಕಾಂಗ್ರೆಸ್ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ. ಈ ಅಪವಿತ್ರ ಮೈತ್ರಿಯನ್ನು ಅಪಹಾಸ್ಯ ಮಾಡುತ್ತಿದ್ದಾರೆ.  ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿದ್ದಾಗ ನಿಮಗೆ ರಾಜಮರ್ಯಾದೆ ಸಿಗುತ್ತಿತ್ತು. ಹೈಕಮಾಂಡ್‌ಗೆ ಹಣ ತಲುಪಿಸುತ್ತಿದ್ದಿರಿ ಎಂಬ ಕಾರಣಕ್ಕೆ, ರಾಹುಲ್‌ ಗಾಂಧಿ ನಿಮ್ಮನ್ನು ಅಪ್ಪಿ ಮುದ್ದಾಡುತ್ತಿದ್ದರು. ಆದರೆ, ಸರ್ಕಾರ ರಚಿಸುವ ಸಂದರ್ಭದಲ್ಲಿ ನಿಮ್ಮನ್ನೇ ಕಡೆಗಣಿಸಿ, ಕುಮಾರಸ್ವಾಮಿ ಅವರನ್ನು ಮಾತ್ರ ದೆಹಲಿಗೆ ಕರೆಸಿಕೊಂಡರು. ಈ ರೀತಿ ಅಪಮಾನ ಮಾಡಿದ ಆ ಪಕ್ಷದಲ್ಲಿ ಹೇಗೆ ಮುಂದುವರಿಯುತ್ತೀರಿ ಎಂದು ಯಡಿಯೂರಪ್ಪ ಲೇವಡಿ ಮಾಡಿದರು.

ಈಗಲೂ ವಿಧಾನಸಭೆ ವಿಸರ್ಜನೆ ಮಾಡಿ, ಜನತೆ ಮುಂದೆ ಹೋಗೋಣ ಬನ್ನಿ. ಬಿಜೆಪಿ 150 ಸೀಟು ಗೆಲ್ಲದಿದ್ದರೆ, ನೀವು ಹೇಳಿದ ಹಾಗೆ ನಾನು ಕೇಳುತ್ತೇನೆ ಎಂದು ಪಂಥಾಹ್ವಾನ ನೀಡಿದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಪೋಟೋಗ್ರಾಫರ್ ದೀಪಕ್ ಅನುಮಾನಾಸ್ಪದ ಸಾವು
http://bit.ly/2J26LzT
►►37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಆಗುತ್ತಾ?►►ದೇವೇಗೌಡರ ಸಲಹೆ ಏನು? http://bit.ly/2rZ7IiW
►►ನಾನು ಯಾರಿಗೂ ಭಾರವಾಗಿ ಬದುಕಬಾರದು http://bit.ly/2J0grLe
►►ಕಾಂಗ್ರೆಸ್ 22, ಜೆಡಿಎಸ್ಗೆ 12 ಮಂತ್ರಿ ಸ್ಥಾನ http://bit.ly/2IC8YTn
►►ಹಳೆಯದ್ದನ್ನು ಮರೆತು ಮುಂದೆ ಹೆಜ್ಜೆ ಹಾಕೋಣ ಕುಮಾರಸ್ವಾಮಿಗೆ ಸೋನಿಯಾ ಹಿತನುಡಿ http://bit.ly/2s06aFg
►►ಜಾನುವಾರ ಸಾಗಾಟಗಾರರ ಮೇಲೆ ಹಲ್ಲೆ: ಆರೋಪಿಗಳ ಬಂಧನ http://bit.ly/2IUiRex
►►ಕೇರಳದಲ್ಲಿ ನಿಪಾಹ್ ವೈರಸ್ ಗೆ 13 ಮಂದಿ ಬಲಿ. ಹೇಗೆ ಹರಡುತ್ತೆ ವೈರಸ್? : http://bit.ly/2Iy4YDs
►►ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭಕ್ಕೆ ಕೇಜ್ರಿವಾಲ್, ಮಾಯಾವತಿ  http://bit.ly/2x1D65g

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ