ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ: ಕುಮಾರಸ್ವಾಮಿ ಮುಖ್ಯಮಂತ್ರಿ, ಪರಮೇಶ್ವರ್ ಡಿಸಿಎಂ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಬುಧವಾರ ಸಂಜೆ 4.30ಕ್ಕೆ ಎಚ್‌.ಡಿ.ಕುಮಾರಸ್ವಾಮಿ ದೇವರು ಮತ್ತು ಕನ್ನಡ ನಾಡಿನ ಜನರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಕೊರಟಗೆರೆ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸಿದ ನಂತರ ಕುಮಾರಸ್ವಾಮಿ ತಾಯಿ ಚೆನ್ನಮ್ಮ ಅವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ವಿವಿಧ ರಾಜ್ಯಗಳ ತೃತೀಯ ರಂಗದ ನಾಯಕರು ಪರಸ್ಪರ ಕೈಕುಲುಕುವ ಮೂಲಕ ಬಿಜೆಪಿ ವಿರುದ್ಧದ ಮಹಾಮೈತ್ರಿಯ ಅಲೆಯ ಸ್ಪಷ್ಟ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಬಿಎಸ್‌ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶರದ್‌ ಯಾದವ್‌, ಗುಲಾಬ್‌ ನಬೀ ಅಜಾದ್‌, ಚಂದ್ರಬಾಬು ನಾಯ್ಡು, ಸೀತಾರಾಂ ಯೆಚೂರಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಪಾಲ್ಗೊಂಡಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಪೋಟೋಗ್ರಾಫರ್ ದೀಪಕ್ ಅನುಮಾನಾಸ್ಪದ ಸಾವು
http://bit.ly/2J26LzT
►►37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಆಗುತ್ತಾ?►►ದೇವೇಗೌಡರ ಸಲಹೆ ಏನು? http://bit.ly/2rZ7IiW
►►ನಾನು ಯಾರಿಗೂ ಭಾರವಾಗಿ ಬದುಕಬಾರದು http://bit.ly/2J0grLe
►►ಕಾಂಗ್ರೆಸ್ 22, ಜೆಡಿಎಸ್ಗೆ 12 ಮಂತ್ರಿ ಸ್ಥಾನ http://bit.ly/2IC8YTn
►►ಹಳೆಯದ್ದನ್ನು ಮರೆತು ಮುಂದೆ ಹೆಜ್ಜೆ ಹಾಕೋಣ ಕುಮಾರಸ್ವಾಮಿಗೆ ಸೋನಿಯಾ ಹಿತನುಡಿ http://bit.ly/2s06aFg
►►ಜಾನುವಾರ ಸಾಗಾಟಗಾರರ ಮೇಲೆ ಹಲ್ಲೆ: ಆರೋಪಿಗಳ ಬಂಧನ http://bit.ly/2IUiRex
►►ಕೇರಳದಲ್ಲಿ ನಿಪಾಹ್ ವೈರಸ್ ಗೆ 13 ಮಂದಿ ಬಲಿ. ಹೇಗೆ ಹರಡುತ್ತೆ ವೈರಸ್? : http://bit.ly/2Iy4YDs
►►ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭಕ್ಕೆ ಕೇಜ್ರಿವಾಲ್, ಮಾಯಾವತಿ  http://bit.ly/2x1D65g
►►ನಿಂತಿದ್ದ ಲಾರಿಗೆ ಸಿಗಂಧೂರು ಯಾತ್ರಿಕರ ಬಸ್ ಡಿಕ್ಕಿ, 8 ಜನರ ಸಾವು http://bit.ly/2kaK3ri
►►ಸಂಪುಟ ರಚನೆ ಕಸರತ್ತು: 2 ಡಿಸಿಎಂ ಹುದ್ದೆ. ಸಂಪುಟದಲ್ಲಿ ಕಾಂಗ್ರೆಸ್ ಸಿಂಹಪಾಲು 
 
http://bit.ly/2IXb3Zg

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ