ಜಾನುವಾರ ಸಾಗಾಟಗಾರರ ಮೇಲೆ ಹಲ್ಲೆ: ಆರೋಪಿಗಳ ಬಂಧನ

ಕರಾವಳಿ ಕರ್ನಾಟಕ ವರದಿ

ಭಟ್ಕಳ:
ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ, ಗುಂಪೊಂದು ಭಾನುವಾರ ತಡರಾತ್ರಿ ಮುರ್ಡೇಶ್ವರ ಬಸ್ತಿಮಕ್ಕಿ ಸಮೀಪ ಎರಡು ಲಾರಿಗಳನ್ನು ಅಡ್ಡಗಟ್ಟಿ ಚಾಲಕರು ಮತ್ತು ಕ್ಲೀನರ್‌ಗಳ ಮೇಲೆ ಹಲ್ಲೆ ನಡೆಸಿದೆ.

ಪ್ರಕರಣದ ಸಂಬಂಧ, 11 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜುನಾಗಡ ಗೋಶಾಲೆಯಿಂದ ತಲಾ 13 ಹಸು ಹಾಗೂ ಕರುಗಳನ್ನು ಪರವಾನಗಿ ಪತ್ರದೊಂದಿಗೆ ಕೇರಳದ ಕೊಚ್ಚಿಯ ಗೋಶಾಲೆಗೆ ಕೊಂಡೊಯ್ಯಲಾಗುತ್ತಿತ್ತು.

ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಭಾವಿಸಿದ ಆರೋಪಿಗಳು ವಾಹನಗಳ ಗಾಜು ಒಡೆದು ಹಾಕಿದ್ದಾರೆ. ಇದರಿಂದ, ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಹಲ್ಲೆಗೀಡಾದ ಕಾಲೂಬಾಯ್, ಬಲದೇವ್ ಚೌಡ, ಪವನ್, ಸಾಮಂತ್ ಬಾಯ್ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಾನುವಾರುಗಳು ಈಗ ಮುರ್ಡೇಶ್ವರ ಠಾಣೆಯ ಆವರಣದಲ್ಲಿವೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕೇರಳದಲ್ಲಿ ನಿಪಾಹ್ ವೈರಸ್ ಗೆ 13 ಮಂದಿ ಬಲಿ. ಹೇಗೆ ಹರಡುತ್ತೆ ವೈರಸ್? :
http://bit.ly/2Iy4YDs
►►ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭಕ್ಕೆ ಕೇಜ್ರಿವಾಲ್, ಮಾಯಾವತಿ  http://bit.ly/2x1D65g
►►ನಿಂತಿದ್ದ ಲಾರಿಗೆ ಸಿಗಂಧೂರು ಯಾತ್ರಿಕರ ಬಸ್ ಡಿಕ್ಕಿ, 8 ಜನರ ಸಾವು http://bit.ly/2kaK3ri
►►ಸಂಪುಟ ರಚನೆ ಕಸರತ್ತು: 2 ಡಿಸಿಎಂ ಹುದ್ದೆ. ಸಂಪುಟದಲ್ಲಿ ಕಾಂಗ್ರೆಸ್‌ ಸಿಂಹಪಾಲು 
 
http://bit.ly/2IXb3Zg
►►ಬೈಕ್-ಕಾರು ಢಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು. ಇನ್ನೋರ್ವ ಗಂಭೀರ http://bit.ly/2GySPrL
►►ಕಾರವಾರದಲ್ಲಿ ಮತ್ಸ್ಯ ಬೇಟೆ: ಹಿನ್ನೀರಿಗಿಳಿದು ಕ್ವಿಂಟಾಲ್‌ಗಟ್ಟಲೆ ಮೀನು ಹಿಡಿದ ಸ್ಥಳೀಯರು http://bit.ly/2IU2u1h

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ