ಬೈಕ್-ಕಾರು ಢಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು. ಇನ್ನೋರ್ವ ಗಂಭೀರ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಇಲ್ಲಿಗೆ ಸಮೀಪದ ಮರವಂತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿ ಆತನ ಸ್ನೇಹಿತ ಗಂಭೀರಗಾಯಗೊಂಡಿದ್ದಾನೆ.

ಮೃತ ಯುವಕನನ್ನು ಬೈಂದೂರು ಬಳಿಯ ತಗ್ಗರ್ಸೆ ನಿವಾಸಿ ಮುತ್ತಯ್ಯ ಪೂಜಾರಿ ಅವರ ಪುತ್ರ ಪುನೀತ್ ಪೂಜಾರಿ (22) ಎಂದು ಗುರುತಿಸಲಾಗಿದೆ. ಗಾಯಾಳು ಆಕಾಶ್ ಪೂಜಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೈಂದೂರಿನಿಂದ ಕುಂದಾಪುರದತ್ತ ಸಾಗುತ್ತಿದ್ದ ಡಸ್ಟರ್ ಕಾರು ಮತ್ತು ಕುಂದಾಪುರದಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಬೈಕ್ ಮರವಂತೆ ಬಸ್ ನಿಲ್ದಾಣದ ಬಳಿ ಢಿಕ್ಕಿಯಾಗಿದ್ದು ಢಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಹೊತ್ತಿ ಉರಿದಿದೆ. ಡಸ್ಟರ್ ಕಾರು ತೀವ್ರ ಹಾನಿಗೆ ಈಡಾಗಿದ್ದು ಮುಂಭಾಗ ಸುಟ್ಟು ಕರಕಲಾಗಿದೆ.

ಅಪಘಾತಕ್ಕೆ ಈಡಾದ ಬೈಕ್ ಎರಡೂ ದಿನಗಳ ಹಿಂದಷ್ಟೆ ಹೊಸದಾಗಿ ಖರೀದಿಸಿದ್ದು ಎನ್ನಲಾಗಿದೆ. ಹೊಸ ಬೈಕ್ ಗುರುತೂ ಸಿಗದಷ್ಟು ಸುಟ್ಟು ಕರಕಲಾಗಿದೆ.ಮೃತ ಪುನೀತ್ ಪೂಜಾರಿ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಎನ್ನಲಾಗಿದ್ದು ಸ್ಥಳೀಯ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕತನಾಗಿದ್ದ. ಇತ್ತೀಚಿನ ವಿಧಾನಸಭಾ ಚುನಾವಣೆಯ ವೇಳೆ ವಿದ್ಯಾರ್ಥಿಗಳನ್ನು ಮತ್ತು ಯುವಕರನ್ನು ಪಕ್ಷಕ್ಕಾಗಿ ಸಂಘಟಿಸಿದ್ದ ಎನ್ನಲಾಗಿದೆ.

ಬೈಂದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ