ಕಾಂಗ್ರೆಸ್-ಜೆಡಿಎಸ್ ಅರ್ಜಿ ವಜಾ: ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಕೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಹಂಗಾಮಿ ಸ್ಪೀಕರ್ ಆಗಿ ಕೆ. ಜಿ. ಬೋಪಯ್ಯ ಅವರ ನೇಮಕ ಪ್ರಶ್ನಿಸಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಂಗಾಮಿ ಸ್ಪೀಕರ್ ಆಗಿ ಕೆ. ಜಿ. ಬೋಪಯ್ಯ ಅವರೇ ಇಂದು ವಿಶ್ವಾಸ ಮತಯಾಚನೆಯ ಕಲಾಪವನ್ನು ನಡೆಸಿಕೊಡಲಿದ್ದಾರೆ. 

ಹಂಗಾಮಿ ವಿಧಾನ ಸಭಾಧ್ಯಕ್ಷರನ್ನಾಗಿ ಕೆಜಿ ಬೋಪಯ್ಯ ಅವರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಿಕ್ರಿ, ಬೊಬ್ಡೆ ಮತ್ತು ಅಶೋಕ್ ಭೂಷಣ ಅವರ ವಿಭಾಗೀಯ ಪೀಠ ಆರಂಭಿಸಿದೆ.

ಬಿಜೆಪಿ ಪರವಾಗಿ ಅಟಾರ್ನಿ ಜನರಲ್ ವೇಣುಗೋಪಾಲ್ ಮತ್ತು ಮುಕುಲ್ ರೋಹಟ್ಗಿ ಅವರು ವಾದ ಮಂಡಿಸುತ್ತಿದ್ದರೆ, ಕಾಂಗ್ರೆಸ್-ಜೆಡಿಎಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಮತ್ತು ರಾಮ್ ಜೇಠ್ಮಲಾನಿ ಅವರು ವಾದ ಮಂಡಿಸುತ್ತಿದ್ದಾರೆ.

ಸುಪ್ರೀಂನಲ್ಲಿ ವಿಚಾರಣೆ ಬೋಪಯ್ಯ ಅವರ ಟ್ರಾಕ್ ರೆಕಾರ್ಡ್ ಸರಿಯಾಗಿಲ್ಲದ ಕಾರಣ ಅವರನ್ನು ಹಂಗಾಮಿ ಸ್ಪೀಕರ್ ಅನ್ನಾಗಿ ನೇಮಕ ಮಾಡಬಾರದು. ಅಲ್ಲದೆ ರಾಜ್ಯಪಾಲ ವಜುಭಾಯಿ ವಾಲಾ ಅವರು ತಮ್ಮ ಇತಿಮಿತಿಯನ್ನು ಮೀರಿದ್ದಾರೆ ಆರೋಪಿಸಿ ಎಂದು ಎಚ್ ಡಿ ಕುಮಾರಸ್ವಾಮಿ ಪರವಾಗಿ ಕಪಿಲ್ ಸಿಬಲ್ ಅವರು ವಾದ ಮಾಡುತ್ತಿದ್ದಾರೆ. ಹದಿನಾರು ಶಾಸಕರನ್ನು 2010ರಲ್ಲಿ ಅನರ್ಹಗೊಳಿಸಿದ್ದಾಗ ಸರ್ವೋಚ್ಚ ನ್ಯಾಯಾಲಯ ಆ ಆದೇಶವನ್ನು ವಜಾಗೊಳಿಸಿತ್ತು ಮತ್ತು ಬೋಪಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಎರಡು ಬಾರಿ ಅವರ ವಿರುದ್ಧವೇ ತೀರ್ಪು ಬಂದಿದೆ. ಅಲ್ಲದೆ ಅವರಿಗಿಂತ ಹಿರಿಯರಿದ್ದಾರೆ ಎಂದು ಕಪಿಲ್ ಸಿಬಲ್ ಕೋರ್ಟಿಗೆ ತಿಳಿಸಿದರು.

ಹಿಂದೆ ಕೂಡ ಕಿರಿಯ ರಾಜಕಾರಣಿಯನ್ನು ಹಂಗಾಮಿ ಸ್ಪೀಕರನ್ನಾಗಿ ನೇಮಕ ಮಾಡಲಾಗಿತ್ತು ಎಂದಿರುವ ನ್ಯಾ. ಬೊಬ್ಡೆ ಅವರು, ಸಭಾಧ್ಯಕ್ಷರನ್ನು ನೇಮಕ ಮಾಡುವುದು ನ್ಯಾಯಾಲಯದ ಕೆಲಸವಲ್ಲ, ಅದು ರಾಜ್ಯಪಾಲರ ಕೆಲಸ ಎಂದು ಸಿಬಲ್ ವಾದವನ್ನು ತಳ್ಳಿಹಾಕಿದ್ದಾರೆ.

2010ರಲ್ಲಿ ಯಡಿಯೂರಪ್ಪನವರ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಕೇಳಿಬಂದಿದ್ದಾಗ, ಅವರ ವಿರುದ್ಧ ತಿರುಗಿಬಿದ್ದಿದ್ದ 11 ಬಿಜೆಪಿ ಶಾಸಕರು ಮತ್ತು 5 ಪಕ್ಷೇತ್ರ ಅಭ್ಯರ್ಥಿಗಳನ್ನು ಬೋಪಯ್ಯ ಅನರ್ಹಗೊಳಿಸಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಟೆಕ್ಸಾಸ್ ಸ್ಕೂಲ್‌ನಲ್ಲಿ ಮತ್ತೊಮ್ಮೆ ಶೂಟೌಟ್ ವಿದ್ಯಾರ್ಥಿಗಳನ್ನೂ ಒಳಗೊಂಡು ಹತ್ತು ಮಂದಿ ಸಾವು
http://bit.ly/2kdaahv
►►ಇಂದು ವಿಶ್ವಾಸಮತದಲ್ಲಿ ಯಡಿಯೂರಪ್ಪ ಸರ್ಕಾರ ಪಾಸ್ ಆಗಲಿದೆ. ಹೇಗೆ ಅಂತೀರಾ?
:
http://bit.ly/2IxNXoP

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ