ಟೆಕ್ಸಾಸ್ ಸ್ಕೂಲ್‌ನಲ್ಲಿ ಶೂಟೌಟ್: ವಿದ್ಯಾರ್ಥಿಗಳನ್ನೂ ಒಳಗೊಂದು ಹತ್ತು ಮಂದಿ ಸಾವು

ಕರಾವಳಿ ಕರ್ನಾಟಕ ವರದಿ

ವಾಷಿಂಗ್ಟನ್:
ಅಮೆರಿಕದ ಟೆಕ್ಸಾಸ್ ಸಿಟಿಯ ಸ್ಯಾಂಟ ಫೆ ಹೈಸ್ಕೂಲಿನಲ್ಲಿ ನಡೆದ ಶೂಟೌಟ್‌ನಲ್ಲಿ 10 ಜನ ಮೃತರಾಗಿದ್ದಾರೆ.

ಸ್ಯಾಂಟಫೆ ಹೈಸ್ಕೂಲ್ ಶೂಟೌಟ್ ನಡೆಸಿದ ಆರೋಪಿಯು ಶೂಟ್ ಗನ್ ಮತ್ತು 38 ರಿವಾಲ್ವರ್ ಗಳನ್ನು ಬಳಸಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ಒಬ್ಬ ಆರೋಪಿಯನ್ನು ಡಿಮಿಟ್ರಾಯ್ಸ್ ಪಗೊರ್ಟ್ಸಿಸ್ ಎಂದು ಗುರುತಿಸಲಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಅಮೆರಿಕದ ಫ್ಲೋರಿಡಾ ಹೈಸ್ಕೂಲಿನಲ್ಲಿ ನಡೆದ ಭೀಕರ ಶೂಟೌಟ್ ವೊಂದರಲ್ಲಿ 17 ಜನ ಮೃತರಾಗಿದ್ದರು. ಈ ಕೃತ್ಯ ಎಸಗಿದ್ದು ಈ ಶಾಲೆಯ ಮಾಜಿ ವಿದ್ಯಾರ್ಥಿ ಎಂಬುದು ನಂತರ ದೃಢವಾಗಿತ್ತು. ಜನವರಿ 23 ರಂದು ಕೆಂಟಕಿಯ ಹೈಸ್ಕೂಲಿನಲ್ಲಿ ನಡೆದ ಶೂಟೌಟ್ ನಲ್ಲಿ 2 ಮಕ್ಕಳು ಮೃತರಾಗಿದ್ದರು. ಜನವರಿ 22 ರಂದು ಟೆಕ್ಸಾಸ್ ಶಾಲೆಯ ಕೆಫೆಟೇರಿಯಾವೊಂದರಲ್ಲಿ ನಡೆದ ಶೂಟೌಟ್ ನಲ್ಲಿ ಹಲವರು ಗಾಯಗೊಂಡಿದ್ದರು.

ಇದನ್ನೂ ಓದಿ
►►ಇಂದು ವಿಶ್ವಾಸಮತದಲ್ಲಿ ಯಡಿಯೂರಪ್ಪ ಸರ್ಕಾರ ಪಾಸ್ ಆಗಲಿದೆ. ಹೇಗೆ ಅಂತೀರಾ?
:
http://bit.ly/2IxNXoP

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ