ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಆಯ್ಕೆ. ಕಾಂಗ್ರೆಸ್‍ನಿಂದ ಮತ್ತೆ ಸುಪ್ರೀಂಗೆ ಮೊರೆ?

ಕರಾವಳಿ ಕರ್ನಾಟಕ ವರದಿ

ನವದೆಹಲಿ
: ಬಿಜೆಪಿ ಸರ್ಕಾರ ರಚಿಸಲು ನಾಳೆ ವಿಶ್ವಾಸಮತ ಯಾಚಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದ ಬೆನ್ನಲ್ಲೇ  ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ  ರಾಜ್ಯಪಾಲ ವಜೂಬಾಯಿ ವಾಲಾ ಇಂದು ನೇಮಕಗೊಳಿಸಿದ್ದಾರೆ.

ಈ ನೇಮಕಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹಿರಿಯ ಶಾಸಕರನ್ನು ಹಂಗಾಮಿ ಶಾಸಕರನ್ನಾಗಿ ಮಾಡಬೇಕು, ಅದನ್ನು ಬಿಟ್ಟು  ಬಿಜೆಪಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸ್ವಿಂಘ್ವಿ ಹೇಳಿದ್ದಾರೆ.

ಈ ಸಂಬಂಧ  ಅವರು ಸುಪ್ರೀಂಕೋರ್ಟ್  ಮೊರೆ ಹೋಗುವ ಸಾಧ್ಯತೆ ಇದೆ.  ನಾಳೆ ಸಂಜೆ  4 ಗಂಟೆಗೆ  ವಿಶ್ವಾಸಮತ ಯಾಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ತಿಳಿಸಿದೆ.
ಈ ಮಧ್ಯೆ ಹಂಗಾಮಿ ಸ್ಪೀಕರ್ ಆಗಿ ಕೆ. ಜಿ. ಬೋಪಯ್ಯ ಅವರ ಆಯ್ಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.

 2008ರಲ್ಲಿ ರಾಷ್ಟ್ರಪತಿ ಆಳ್ವಿಕೆ ಸಂದರ್ಭದಲ್ಲಿ ಕೆ. ಜಿ. ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸದ್ದಾರೆ. ಕಾನೂನು ನಿಯಮದಂತೆ ಅವರನ್ನು ನೇಮಿಸಲಾಗಿದೆ. ಆದರೆ, ಕಾಂಗ್ರೆಸ್ ಆಕ್ಷೇಪಣೆ ವಂಚನೆಯಿಂದ ಕೂಡಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ